ರಾತ್ರೋರಾತ್ರಿ ಮದ್ದೂರಲ್ಲಿ ಜಾಗ್ವಾರ್ ನಾಯಕನಿಗಾಗಿ ಪ್ರತಿಭಟನೆ

ಮಾಜಿ ಸಿಎಂ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರ ಆಗಮನದ ನಿರೀಕ್ಷೆ ಸುಳ್ಳಾಗಿದ್ದರಿಂದ ಶಾಸಕ ಡಿ.ಸಿ. ತಮ್ಮಣ್ಣ ಹಾಗೂ ಅವರ ಮಗ ಸಂತೋಷ್ ಕಾರಿಗೆ ಮುತ್ತಿಗೆ ಹಾಕಿ ಆಕ್ರೋಶವನ್ನು ವ್ಯಕ್ತಪಡಿಸಿದ ಘಟನೆ ಮದ್ದೂರು ತಾಲೂಕಿನ ಹೊನ್ನಲಗೆರೆ ಗ್ರಾಮದಲ್ಲಿ ನಡೆದಿದೆ.

ಮದ್ದೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಿ.ಸಿ.ತಮ್ಮಣ್ಣ ಪರ ಪ್ರಚಾರ ಮಾಡಲು ನಿಖಿಲ್ ಕುಮಾರ್ ಸ್ವಾಮಿ ಬರುತ್ತಾರೆ ಎಂದು ಗುರುವಾರ ಸಂಜೆ 6 ಗಂಟೆಯಿಂದ ಅಭಿಮಾನಿಗಳು ಕಾಯುತ್ತ ಕುಳಿತ್ತಿದ್ದರು. ಆದರೆ ಕಾರಣಾಂತರಗಳಿಂದ ನಿಖಿಲ್ ಪ್ರಚಾರಕ್ಕೆ ಬರಲು ಆಗಿಲ್ಲ. ಇದರಿಂದ ಸಂಜೆ ಆರು ಗಂಟೆಯಿಂದ ರಾತ್ರಿ ಸುಮಾರು 10 ಗಂಟೆವರೆಗೆ ಕಾದುಕುಳಿತಿದ್ದ ಅಭಿಮಾನಿಗಳು ಸಿಟ್ಟಿನಿಂದ ಶಾಸಕ ಡಿ.ಸಿ.ತಮ್ಮಣ್ಣನ ಮಗ ಸಂತೋಷ್ ಕಾರಿಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ. ಅಷ್ಟೇ ಅಲ್ಲದೇ ಮುಂದಿನ ದಿನಗಳಲ್ಲಿ ನಿಖಿಲ್ ಕುಮಾರಸ್ವಾಮಿ ಬರದೆ ಇದ್ದರೆ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕುವುದಿಲ್ಲ ಎಂದು ಅಭಿಮಾನಿಗಳು ಎಚ್ಚರಿಕೆಯನ್ನು ಕೂಡ  ನೀಡಿದ್ದಾರೆ.

Please follow and like us:
0
https://kannadadalli.com/wp-content/uploads/2018/04/maxresdefault-8-1024x576.jpghttps://kannadadalli.com/wp-content/uploads/2018/04/maxresdefault-8-150x100.jpgManjulaರಾಜಕೀಯnikil kumaraswami jdsರಾತ್ರೋರಾತ್ರಿ ಮದ್ದೂರಲ್ಲಿ ಜಾಗ್ವಾರ್ ನಾಯಕನಿಗಾಗಿ ಪ್ರತಿಭಟನೆ ಮಾಜಿ ಸಿಎಂ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರ ಆಗಮನದ ನಿರೀಕ್ಷೆ ಸುಳ್ಳಾಗಿದ್ದರಿಂದ ಶಾಸಕ ಡಿ.ಸಿ. ತಮ್ಮಣ್ಣ ಹಾಗೂ ಅವರ ಮಗ ಸಂತೋಷ್ ಕಾರಿಗೆ ಮುತ್ತಿಗೆ ಹಾಕಿ ಆಕ್ರೋಶವನ್ನು ವ್ಯಕ್ತಪಡಿಸಿದ ಘಟನೆ ಮದ್ದೂರು ತಾಲೂಕಿನ ಹೊನ್ನಲಗೆರೆ ಗ್ರಾಮದಲ್ಲಿ ನಡೆದಿದೆ. ಮದ್ದೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಿ.ಸಿ.ತಮ್ಮಣ್ಣ ಪರ ಪ್ರಚಾರ ಮಾಡಲು ನಿಖಿಲ್ ಕುಮಾರ್ ಸ್ವಾಮಿ ಬರುತ್ತಾರೆ ಎಂದು ಗುರುವಾರ ಸಂಜೆ 6 ಗಂಟೆಯಿಂದ...ಕನ್ನಡಿಗರ ವೆಬ್​ ಚಾನೆಲ್​