ಸ್ಯಾಂಡಲ್ ವುಡ್ : ಸ್ಯಾಂಡಲ್ ವುಡ್ ನ ನಟ, ‘ರಾಜಾಹುಲಿ’ ಖ್ಯಾತಿಯ ಹರ್ಷ ಅವರ ನಿಶ್ಚಿತಾರ್ಥ ನಿನ್ನೆ ನಡೆದಿದೆ. ಚಿಕ್ಕಮಂಗಳೂರಿನಲ್ಲಿ ಐಶ್ವರ್ಯ ಜೊತೆಗೆ ಹರ್ಷ ಎಂಗೇಜ್ ಮೆಂಟ್ ಆಗಿದೆ. ಹರ್ಷ ಮದುವೆ ಆಗುತ್ತಿರುವ ಐಶ್ವರ್ಯ ವೃತ್ತಿಯಲ್ಲಿ ಮಾಡೆಲ್ ಆಗಿದ್ದಾರೆ. ಅರೇ ಹೌದಾ..? ನಿಜಾನಾ..? ಅಂತೀರಾ..? ಖಂಡಿತ ಹೇಳ್ತೀವಿ ಮುಂದೆ ಓದಿ..

ಹೌದು, ‘ಮೊಗ್ಗಿನ ಮನಸ್ಸು’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಹರ್ಷ ಆ ನಂತರ ಅನೇಕ ಸಿನಿಮಾ ಮಾಡಿದರು. ಯಶ್ ನಟನೆಯ ‘ರಾಜಾಹುಲಿ’ ಸಿನಿಮಾ ಹರ್ಷ ಕೆರಿಯರ್ ನಲ್ಲಿ ಗುರುತಿಸಿಕೊಳ್ಳುವ ಹಾಗೆ ಮಾಡಿತು. ಜೊತೆಗೆ ಪುನೀತ್ ರಾಜ್ ಕುಮಾರ್ ಅವರ ‘ಪವರ್ ಸ್ಟಾರ್’ ಸಿನಿಮಾದಲ್ಲಿ ಕೂಡ ಹರ್ಷ ಅಭಿನಯಿಸಿದ್ದರು.ಸದ್ಯ, ಸದ್ದಿಲ್ಲದೇ ಹಸೆಮಣೆ ಏರುವುದಕ್ಕೆ ನಟ ಹರ್ಷ ಸಜ್ಜಾಗಿದ್ದಾರೆ. ಹರ್ಷವರ್ಧನ್ – ಐಶ್ವರ್ಯ ತಮ್ಮ ಕುಟುಂಬದವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹರ್ಷ – ಐಶ್ವರ್ಯ ನಿಶ್ಚಿತಾರ್ಥದ ಸುಂದರ ಕ್ಷಣಗಳು ಫೋಟೋಗಳಲ್ಲಿ ಸೆರೆ ಆಗಿವೆ. ಅಂದಹಾಗೆ, ಹರ್ಷ ನಾಯಕ ನಟನಾಗಿ ‘ವರ್ಧನ’, ‘ರಘುವೀರ್’, ‘ಗಜಪಡೆ’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಒಟ್ಟಾರೆ ಹೇಳೋದಾದ್ರೆ ನಟ ಹರ್ಷನ ಲೈಫ್ ಅಲ್ಲೂ ಕಂಕಣ ಬಲ ಕೂಡಿಬಂದಿರೋದು ಅಭಿಮಾನಿಗಳಿಗಂತೂ ಸಂತಷದ ವಿಷಯ ತಂದಿದೆ.

Please follow and like us:
0
https://kannadadalli.com/wp-content/uploads/2018/05/Capture-2.pnghttps://kannadadalli.com/wp-content/uploads/2018/05/Capture-2-150x100.pngSindhuಸಿನೆಮಾಐಶ್ವರ್ಯ,ರಾಜಾಹುಲಿ,ಸ್ಯಾಂಡಲ್ ವುಡ್,ಹರ್ಷಸ್ಯಾಂಡಲ್ ವುಡ್ : ಸ್ಯಾಂಡಲ್ ವುಡ್ ನ ನಟ, ‘ರಾಜಾಹುಲಿ' ಖ್ಯಾತಿಯ ಹರ್ಷ ಅವರ ನಿಶ್ಚಿತಾರ್ಥ ನಿನ್ನೆ ನಡೆದಿದೆ. ಚಿಕ್ಕಮಂಗಳೂರಿನಲ್ಲಿ ಐಶ್ವರ್ಯ ಜೊತೆಗೆ ಹರ್ಷ ಎಂಗೇಜ್ ಮೆಂಟ್ ಆಗಿದೆ. ಹರ್ಷ ಮದುವೆ ಆಗುತ್ತಿರುವ ಐಶ್ವರ್ಯ ವೃತ್ತಿಯಲ್ಲಿ ಮಾಡೆಲ್ ಆಗಿದ್ದಾರೆ. ಅರೇ ಹೌದಾ..? ನಿಜಾನಾ..? ಅಂತೀರಾ..? ಖಂಡಿತ ಹೇಳ್ತೀವಿ ಮುಂದೆ ಓದಿ.. ಹೌದು, ‘ಮೊಗ್ಗಿನ ಮನಸ್ಸು' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಹರ್ಷ ಆ ನಂತರ ಅನೇಕ ಸಿನಿಮಾ...ಕನ್ನಡಿಗರ ವೆಬ್​ ಚಾನೆಲ್​