ಹಳೆಯ ಚಿತ್ರಗಳೆಂದರೆ ಈಗಲೂ ಅದೇನೋ ಒಂಥರಾ ಆಕರ್ಷಣೆ. ಸಿನೆಮಾ ತಂತ್ರಜ್ಞಾನ ಅದೆಷ್ಟೇ ಬದಲಾಗಿದ್ದರೂ, ಹಳೆಯ ಕಪ್ಪು ಬಿಳುಪಿನ ಚಿತ್ರಗಳನ್ನು ನೋಡುವಾಗ ಸಿಗುವ ಖುಷಿ ಈಗಿನ ಸಿನೆಮಾ ನೋಡುವಾಗ ಸಿಗುವುದಿಲ್ಲ. ಹಳೆಯ ಸಿನೆಮಾಗಳನ್ನು ಹೊಸ ರೂಪದಲ್ಲಿ ತೆರೆ ಮೇಲೆ ತರುವ ಪ್ರಯತ್ನ ಇಂದು ನಿನ್ನೆಯದಲ್ಲ. ಕಪ್ಪು ಬಿಳುಪಿನ ಅಣ್ಣಾವ್ರು ನಟಿಸಿದ್ದ ಕಸ್ರೂರಿ ನಿವಾಸ, ಬಬ್ರುವಾಹನ ಚಿತ್ರಗಳು ಈಗಾಗಲೇ ಬಣ್ಣದ ರೂಪ ಪಡೆದುಕೊಂಡು ತೆರೆ ಮೇಲೆ ಬಂದವು.

ಅಣ್ಣಾವ್ರು, ವಿಷ್ಣು ದಾದಾ, ಶಂಕರಣ್ಣ ನವರಂತಹ ಘಟಾನುಘಟಿ ನಾಯಕರ ಚಿತ್ರಗಳೆಂದರೆ ಅದೇನೋ ಒಂಥರಾ ಸೆಳೆತ. ಎಷ್ಟು ಬಾರಿ ನೋಡಿದರೂ ಮತ್ತೆ ಮತ್ತೆ ನೋಡಬೇಕೆನಿಸುತ್ತದೆ.

ಚಿತ್ರದ ಹಾಡುಗಳು, ಸನ್ನಿವೇಶ, ಭಾವನಾತ್ಮಕ ಸಂಭಾಷಣೆಗಳು ಮನ ಮುಟ್ಟುವಂತಿರುತ್ತಿದ್ದವು. ಅದೇ ಕಾರಣಕ್ಕೆ ಇರಬೇಕು ಹಳೆಯ ಚಿತ್ರಗಳು ಎಂದರೆ ಈಗಲೂ ಮತ್ತೊಮ್ಮೆ ಮೊಗದೊಮ್ಮೆ ನೋಡಬೇಕಿನಿಸುತ್ತದೆ.

ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ವಿಷ್ಣು ದಾದಾ ಅವರ ಚೊಚ್ಚಲ ಚಿತ್ರ ಈಗ ಮತ್ತೊಮ್ಮೆ ತೆರೆ ಮೇಲೆ ಬರಲು ಸಿದ್ಧವಾಗುತ್ತಿದೆ. ಅದೂ ಕೂಡ ಹೊಸ ರೂಪ ಪಡೆದುಕೊಂಡು.

ಈಶ್ವರಿ ಪ್ರೊಡಕ್ಷನ್ ‘ನಾಗರ ಹಾವು’ ಚಿತ್ರವನ್ನು ನಾವೀನ್ಯ ರೂಪದಲ್ಲಿ ತೆರೆ ಮೇಲೆ ತರುತ್ತಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಾರ್ಗದರ್ಶನದಲ್ಲಿ ಅವರ ಸಹೋದರ ನಟ ಬಾಲಾಜಿ ಅವರು ನಾಗರ ಹಾವು ಚಿತ್ರವನ್ನು ಹೊಸ ರೂಪದಲ್ಲಿ ತರಲಿದ್ದಾರೆ. ಮದ್ರಾಸ್ ಸೇರಿದಂತೆ ನಾನಾ ಕಡೆಗಳಲ್ಲಿ ಎರಡು ವರ್ಷಕ್ಕೂ ಹೆಚ್ಚು ಸಮಯದಲ್ಲಿ ಈ ಚಿತ್ರಕ್ಕೆ ಬಣ್ಣ ತುಂಬುವ ಕೆಲಸ ನಡೆಯುತ್ತಿದೆ.

ಅಲ್ಲದೇ ಹೊಸ ರೀತಿಯ ಸಂಗೀತವನ್ನೂ ಅಳವಡಿಸುವ ಕೆಲಸ ಪ್ರಗತಿಯಲ್ಲಿದೆ. ಈ ಚಿತ್ರಕ್ಕೆ ಸಂಗೀತ ನಿರ್ದೇಶಕ ಗೌತಮ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಪ್ರೊಡಕ್ಷನ್ ಕೆಲಸ ಕರಿಸುಬ್ಬು ಸ್ಟುಡಿಯೋದಲ್ಲಿ ಭರದಿಂದ ಸಾಗುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ವಿಷ್ಣು ದಾದಾ ಅವರನ್ನು ಮತ್ತೊಮ್ಮೆ ತೆರೆ ಮೇಲೆ ಅವರ ಮೊದಲು ಅಭಿನಯಿಸಿದ ಚಿತ್ರವನ್ನು ನೋಡಬಹುದು.

  

Please follow and like us:
0
https://kannadadalli.com/wp-content/uploads/2018/07/maxresdefault-1-1.jpghttps://kannadadalli.com/wp-content/uploads/2018/07/maxresdefault-1-1-150x100.jpgSowmya KBಸಿನೆಮಾnagara havu,puttanna kanagal,ramachari,vishuvardhan first movieಹಳೆಯ ಚಿತ್ರಗಳೆಂದರೆ ಈಗಲೂ ಅದೇನೋ ಒಂಥರಾ ಆಕರ್ಷಣೆ. ಸಿನೆಮಾ ತಂತ್ರಜ್ಞಾನ ಅದೆಷ್ಟೇ ಬದಲಾಗಿದ್ದರೂ, ಹಳೆಯ ಕಪ್ಪು ಬಿಳುಪಿನ ಚಿತ್ರಗಳನ್ನು ನೋಡುವಾಗ ಸಿಗುವ ಖುಷಿ ಈಗಿನ ಸಿನೆಮಾ ನೋಡುವಾಗ ಸಿಗುವುದಿಲ್ಲ. ಹಳೆಯ ಸಿನೆಮಾಗಳನ್ನು ಹೊಸ ರೂಪದಲ್ಲಿ ತೆರೆ ಮೇಲೆ ತರುವ ಪ್ರಯತ್ನ ಇಂದು ನಿನ್ನೆಯದಲ್ಲ. ಕಪ್ಪು ಬಿಳುಪಿನ ಅಣ್ಣಾವ್ರು ನಟಿಸಿದ್ದ ಕಸ್ರೂರಿ ನಿವಾಸ, ಬಬ್ರುವಾಹನ ಚಿತ್ರಗಳು ಈಗಾಗಲೇ ಬಣ್ಣದ ರೂಪ ಪಡೆದುಕೊಂಡು ತೆರೆ ಮೇಲೆ ಬಂದವು. ಅಣ್ಣಾವ್ರು, ವಿಷ್ಣು ದಾದಾ, ಶಂಕರಣ್ಣ...ಕನ್ನಡಿಗರ ವೆಬ್​ ಚಾನೆಲ್​