ರಾಹುಲ್ ಗಾಂಧಿಯನ್ನೇ ತಬ್ಬಿಬ್ಬುಗೊಳಿಸಿದ ಆರ್​.ವಿ.ದೇಶಪಾಂಡೆ ಅವರ ಬೇಡಿಕೆ – ಸಚಿವ ಸ್ಥಾನ ಕೊಡ್ತೀವಿ ಅಂದ್ರು ಬೇಡ ಅಂತಿರೋದೇಕೆ…!!!

ಕಾಂಗ್ರೆಸ್​ನ ಹಿರಿಯ ನಾಯಕ ಆರ್​.ವಿ.ದೇಶಪಾಂಡೆ ಅವರು ಕಾಂಗ್ರೆಸ್​ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್​ ಗಾಂಧಿ ಅವರಿಗೆ ಶಾಕ್​ ನೀಡಿದ್ದಾರೆ. ನಾನು ಕುಮಾರಸ್ವಾಮಿ ಅವರ ಸಂಪುಟದಲ್ಲಿ ಸಚಿವನಾಗುವುದಿಲ್ಲ ಎಂದು ನೇರವಾಗಿಯೇ ರಾಹುಲ್​ ಗಾಂಧಿಯವರಿಗೆ ಆರ್​.ವಿ.ಡಿ ಹೇಳಿದ್ದಾರೆ.

ಹಿರಿಯ ರಾಜಕಾರಣಿ ಆಗಿರುವ ಆರ್​. ವಿ. ದೇಶಪಾಂಡೆ ಅವರು ಜನತಾ ಪರಿವಾರದ ಹಿನ್ನೆಲೆಯಿಂದ ಬಂದವರು. ರಾಮಕೃಷ್ಣ ಹೆಗಡೆ ಮತ್ತು ಎಚ್​.ಡಿ ದೇವೇಗೌಡ ಅವರ ಸಚಿವ ಸಂಪುಟಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ದೇಶಪಾಂಡೆ ಅವರು ಹಳಿಯಾಳ ಕ್ಷೇತ್ರದಿಂದ ಕಾಂಗ್ರೆಸ್​ ಶಾಸಕರಾಗಿದ್ದಾರೆ.

rahul-gandhi-R

ರಾಜ್ಯದಲ್ಲಿ ಜೆಡಿಎಸ್​-ಕಾಂಗ್ರೆಸ್​ ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದು, ದೇಶಪಾಂಡೆಯವರೂ ಸಂಪುಟ ಸೇರುತ್ತಾರೆ ಎಂಬ ನಿರೀಕ್ಷೆಯನ್ನು ಅವರ ಅಭಿಮಾನಿಗಳು ಮತ್ತು ಕಾಂಗ್ರೆಸ್​ ಕಾರ್ಯಕರ್ತರು ಹೊಂದಿದ್ದಾರೆ. ಆದರೆ, ಎಚ್​ಡಿಕೆ ಅವರ ಸಂಪುಟ ಸೇರಲು ದೇಶಪಾಂಡೆ ಅವರಿಗೆ ಇಷ್ಟವಿಲ್ಲ ಎಂದು ಗೊತ್ತಾಗಿದೆ.

parameshwar - hdk

ಸಚಿವ ಸ್ಥಾನ ತೆಗೆದುಕೊಳ್ಳುವಂತೆ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಅವರಿಗೆ ಆರ್​.ವಿ.ದೇಶಪಾಂಡೆ ಅವರು ನೇರವಾಗಿಯೇ ನಾನು ಕುಮಾರಸ್ವಾಮಿ ಸಂಪುಟದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ, ರಾಮಕೃಷ್ಣ ಹೆಗಡೆ ಮತ್ತು ಎಚ್​ಡಿಕೆ ಅವರ ತಂದೆ ಎಚ್​.ಡಿ ದೇವೆಗೌಡರ ಸಂಪುಟದಲ್ಲಿ ಕಾರ್ಯನಿರ್ವಹಿಸಿದ್ದೇನೆ. ಹೀಗಾಗಿ ಎಚ್​​ಡಿಕೆ ಸಂಪುಟದಲ್ಲಿ ಕೆಲಸ ಮಾಡಲು ನನಗೆ ಇಷ್ಟವಿಲ್ಲ ಎಂದು ರಾಹುಲ್​ ಗಾಂಧಿ ಅವರ ಬಳಿ ಹೇಳಿದ್ದಾರಂತೆ, ಇದಕ್ಕೆ ಬದಲಾಗಿ ಪಕ್ಷದ ಮಹತ್ವದ ಹುದ್ದೆಯನ್ನೇ ಕೇಳಿದ್ದಾರೆ ಎನ್ನಲಾಗಿದೆ.

deve-gowda

ಕಾಂಗ್ರೆಸ್​ನ ಹಿರಿಯ ನಾಯಕರಾಗಿರುವ ತಮಗೆ ಸಚಿವ ಸ್ಥಾನದ ಬದಲಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವಂತೆ ದೇಶಪಾಂಡೆ ಅವರು ರಾಹುಲ್​ ಬಳಿ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅವರ ಮನವಿ ಕೇಳಿದ ರಾಹುಲ್​ ಅವರು ಗೊಂದಲಕ್ಕೊಳಗಾಗಿದ್ದಾರೆ ಎನ್ನಲಾಗಿದೆ.

parameshwar

ಏಕೆಂದರೆ, ಉಪಮುಖ್ಯಮಂತ್ರಿಯಾಗಿರುವ ಡಾ.ಜಿ ಪರಮೇಶ್ವರ್​ ಅವರಿಂದ ತೆರವಾಗಲಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಈಗಾಗಲೇ ಡಿ.ಕೆ.ಶಿವಕುಮಾರ್​ ಮತ್ತು ಕೇಂದ್ರದ ಮಾಜಿ ಸಚಿವ ಕೆ.ಎಚ್​.ಮುನಿಯಪ್ಪ, ಕೃಷ್ಣ ಬೈರೇಗೌಡ, ದಿನೇಶ್​ ಗುಂಡುರಾವ್​ ಅವರ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಹೀಗಿರುವಾಗ ದೇಶಪಾಂಡೆ ಅವರು ಪಕ್ಷದ ಅಧ್ಯಕ್ಷ ಹುದ್ದೆ ಕೇಳುತ್ತಿರುವುದರಿಂದ ರಾಹುಲ್​ ಗೊಂದಲಕ್ಕೊಳಗಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇಷ್ಟೆಲ್ಲ ಗೊಂದಲಗಳ ನಡುವೆ ಆರ್​.ವಿ. ದೇಶಪಾಂಡೆ ಅವರಿಗೆ ಕಾಂಗ್ರೆಸ್​ನ ಅಧ್ಯಕ್ಷರಾಗಿರುವ ರಾಹುಲ್​ ಗಾಂಧಿ ಅವರು ಯಾವ ಜವಾಬ್ದಾರಿಗಳನ್ನು ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

kpcc prsident race

Please follow and like us:
0
https://kannadadalli.com/wp-content/uploads/2018/06/rv-deshpande.jpghttps://kannadadalli.com/wp-content/uploads/2018/06/rv-deshpande-150x100.jpgKannadadalli Editorಸುದ್ದಿHD Devegowda,kpcc president race,krisne byregowda enter to kpcc president race,rv deshpande,rv deshpande strong message to rahulgandhiರಾಹುಲ್ ಗಾಂಧಿಯನ್ನೇ ತಬ್ಬಿಬ್ಬುಗೊಳಿಸಿದ ಆರ್​.ವಿ.ದೇಶಪಾಂಡೆ ಅವರ ಬೇಡಿಕೆ - ಸಚಿವ ಸ್ಥಾನ ಕೊಡ್ತೀವಿ ಅಂದ್ರು ಬೇಡ ಅಂತಿರೋದೇಕೆ...!!! ಕಾಂಗ್ರೆಸ್​ನ ಹಿರಿಯ ನಾಯಕ ಆರ್​.ವಿ.ದೇಶಪಾಂಡೆ ಅವರು ಕಾಂಗ್ರೆಸ್​ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್​ ಗಾಂಧಿ ಅವರಿಗೆ ಶಾಕ್​ ನೀಡಿದ್ದಾರೆ. ನಾನು ಕುಮಾರಸ್ವಾಮಿ ಅವರ ಸಂಪುಟದಲ್ಲಿ ಸಚಿವನಾಗುವುದಿಲ್ಲ ಎಂದು ನೇರವಾಗಿಯೇ ರಾಹುಲ್​ ಗಾಂಧಿಯವರಿಗೆ ಆರ್​.ವಿ.ಡಿ ಹೇಳಿದ್ದಾರೆ. ಹಿರಿಯ ರಾಜಕಾರಣಿ ಆಗಿರುವ ಆರ್​. ವಿ. ದೇಶಪಾಂಡೆ ಅವರು ಜನತಾ ಪರಿವಾರದ ಹಿನ್ನೆಲೆಯಿಂದ ಬಂದವರು. ರಾಮಕೃಷ್ಣ ಹೆಗಡೆ ಮತ್ತು...ಕನ್ನಡಿಗರ ವೆಬ್​ ಚಾನೆಲ್​