ದೇವೇಗೌಡರಿಗೆ ಏಕವಚನದಲ್ಲಿ ವಾಗ್ದಾಳಿ ಮಾಡಿದ ಸಿಎಂ ಸಿದ್ದರಾಮಯ್ಯ


ಸಿಎಂ ಸಿದ್ದರಾಮಯ್ಯ ಅವರು ಮೋಳಕಾಲ್ಮೂರಿನಲ್ಲಿ ಮಾತನಾಡುವ ವೇಳೆ ಮಾಜಿ ಪ್ರಧಾನಿ ದೇವೇಗೌಡರನ್ನು ಏಕ ವಚನದಲ್ಲಿಯೇ ಮಾತನಾಡುವ ಮೂಲಕ ಮೋದಿಯವರ ಮಾತನ್ನು ನಿಜ ಮಾಡಿದ್ದಾರೆ.

ಉಡುಪಿಗೆ ಬಂದಿದ್ದ ನರೇಂದ್ರ ಮೋದಿಯವರು ಕಾಂಗ್ರೆಸ್ ಮಾಜಿ ಪ್ರಧಾನಿ ದೇವೇಗೌಡರನ್ನು ಅವಮಾನಿಸುತ್ತಿದೆ ಎಂದು ಆರೋಪ ಮಾಡಿದ್ದರು. ಈಗ ಸಿಎಂ ಸಿದ್ದರಾಮಯ್ಯನವರು ಮೋದಿಯವರ ಆರೋಪವನ್ನು ನಿಜವಾಗಿಸಿದ್ದಾರೆ.

siddaramaiah“ ದೇವೇಗೌಡ್ರು ಹೇಳ್ತಾರೆ, ಕುಮಾರಸ್ವಾಮಿ ಬಿಜೆಪಿಯೊಂದಿಗೆ ಸರ್ಕಾರ ಮಾಡಿದರೆ ಮನೆಯಿಂದ ಹೊರಗೆ ಹಾಕುತ್ತೇನೆ ಎಂದು ಹೇಳುತ್ತಾರೆ, ಇದೇ ಮಾತನ್ನ ಕುಮಾರಸ್ವಾಮಿ ಯಡಿಯೂರಪ್ಪನವರ ಜೊತೆ ಸರ್ಕಾರ ಮಾಡುವಾಗ ದೇವೇಗೌಡ ಏನಿಳಿದ್ದ ಅಂತ ಗೊತ್ತಾ ನಿಮಗೆ ? ಕುಮಾರಸ್ವಾಮಿ ಬಿಜೆಪಿಯೊಂದಿಗೆ ಸರ್ಕಾರ ಮಾಡಿದರೆ ಅದು ನನ್ನ ಹೆಣದ ಮೇಲೆ ಅಂದಿದ್ದ” ಎಂದು ಏಕವಚನದಲ್ಲಿಯೇ ವಾಗ್ದಾಳಿ ಮಾಡಿದ್ದಾರೆ.

ಇದೇ ವೇಳೆ ಮತ್ತೊಮ್ಮೆ ನಿಮ್ಮಪ್ಪರಾಣೆ ಸಿಎಂ ಆಗಿಲ್ಲೆ ಎಂದು ಕೂಡ ಸಿಎಂ ಸಿದ್ದರಾಮಯ್ಯ ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

siddaramaiah-bsy-hdkಯಡಿಯೂರಪ್ಪ ನಾನೇ ಮುಖ್ಯಮಂತ್ರಿ ಅಂತ ಹೇಳುತ್ತಾರೆ, ಮತ್ತೊಂದು ಕಡೆ ಕುಮಾರಸ್ವಾಮಿ ನಾನೇ ಮುಖ್ಯಮಂತ್ರಿ ಅಂತ ಹೇಳಿಕೊಂಡು ತಿರುಗುತ್ತಿದ್ದಾರೆ. ಮತ್ತೊಮ್ಮೆ ಹೇಳುತ್ತೇನೆ ಅವರಪ್ಪನಾಣೆಗೂ ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದಿಲ್ಲ, ಕುಮಾರಸ್ವಾಮಿ ಕೂಡ ಅವರಪ್ಪನಾಣೆಗೂ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಹೇಳಿದ್ದಾರೆ.

ಶ್ರೀರಾಮುಲು ಬಗ್ಗೆ ಮಾತನಾಡಿದ ಅವರು ಕೇವಲವಾಗಿ ಮೊದಲು ಶ್ರೀರಾಮುಲುಗೆ ಅಂತಹ ಮಹತ್ವವನ್ನು ಕೊಡುವುದಿಲ್ಲ. ಮೊದಲು ಕನ್ನಡ ಕಲಿತುಕೊಂಡು ಬರಲಿ ಆಮೇಲೆ ಅವರ ಬಗ್ಗೆ ಮಾತನಾಡೋಣ ಅಂತ ಕೇವಲವಾಗಿ ಸಿದ್ದರಾಮಯ್ಯ ಮಾದ್ಯಮಗಳೊಂದಿಗೆ ನಿನ್ನೆ ಮಾತನಾಡಿದ್ದಾರೆ.

Please follow and like us:
0
https://kannadadalli.com/wp-content/uploads/2018/05/Siddaramaiah-and-deve-gowda-PTI.jpghttps://kannadadalli.com/wp-content/uploads/2018/05/Siddaramaiah-and-deve-gowda-PTI-150x100.jpgBalajiರಾಜಕೀಯದೇವೇಗೌಡರಿಗೆ ಏಕವಚನದಲ್ಲಿ ವಾಗ್ದಾಳಿ ಮಾಡಿದ ಸಿಎಂ ಸಿದ್ದರಾಮಯ್ಯ ಸಿಎಂ ಸಿದ್ದರಾಮಯ್ಯ ಅವರು ಮೋಳಕಾಲ್ಮೂರಿನಲ್ಲಿ ಮಾತನಾಡುವ ವೇಳೆ ಮಾಜಿ ಪ್ರಧಾನಿ ದೇವೇಗೌಡರನ್ನು ಏಕ ವಚನದಲ್ಲಿಯೇ ಮಾತನಾಡುವ ಮೂಲಕ ಮೋದಿಯವರ ಮಾತನ್ನು ನಿಜ ಮಾಡಿದ್ದಾರೆ. ಉಡುಪಿಗೆ ಬಂದಿದ್ದ ನರೇಂದ್ರ ಮೋದಿಯವರು ಕಾಂಗ್ರೆಸ್ ಮಾಜಿ ಪ್ರಧಾನಿ ದೇವೇಗೌಡರನ್ನು ಅವಮಾನಿಸುತ್ತಿದೆ ಎಂದು ಆರೋಪ ಮಾಡಿದ್ದರು. ಈಗ ಸಿಎಂ ಸಿದ್ದರಾಮಯ್ಯನವರು ಮೋದಿಯವರ ಆರೋಪವನ್ನು ನಿಜವಾಗಿಸಿದ್ದಾರೆ. `` ದೇವೇಗೌಡ್ರು ಹೇಳ್ತಾರೆ, ಕುಮಾರಸ್ವಾಮಿ ಬಿಜೆಪಿಯೊಂದಿಗೆ ಸರ್ಕಾರ ಮಾಡಿದರೆ ಮನೆಯಿಂದ ಹೊರಗೆ ಹಾಕುತ್ತೇನೆ ಎಂದು...ಕನ್ನಡಿಗರ ವೆಬ್​ ಚಾನೆಲ್​