ಸುದೀಪ್ ಎಲ್ಲರಿಗೂ ಇಷ್ಟ ಆಗೋದು ಇದೇ ಕಾರಣಕ್ಕೆ – ಗೂಡಂಗಡಿಯಲ್ಲಿ ತಿಂಡಿ ತಿಂದು ಟೀ ಕುಡಿದು 10000 ಕೊಟ್ಟ ಕಿಚ್ಚ

sudeepa

ಕಿಚ್ಚ ಸುದೀಪ್ ಮತ್ತೊಮ್ಮ ತಾನೆಷ್ಟು ಸರಳ ಎಂಬುದನ್ನು ಮತ್ತೊಮ್ಮೆ ಸಾಭೀತು ಮಾಡಿದ್ದಾರೆ. ಬಳ್ಳಾರಿ ಮತ್ತು ಚಿತ್ರದುರ್ಗದಲ್ಲಿ ಬಿಜೆಪಿ ಪರ ಪ್ರಚಾರಕೆ ಬಂದಿದ್ದ ವೇಳೆ ಸುದೀಪ್ ಆಂದ್ರ ಗಡಿಯ ಓಬಳಾಪುರಂ ಊರಿನಲ್ಲಿ ರಸ್ತೆಬದಿ ಇರುವ ಗೂಡಂಗಡಿಯಲ್ಲಿ ತಿಂಡಿ ತಿಂದು ಟೀಕುಡಿದು ತಾವೆಷ್ಟು ಸರಳ ಎನ್ನುವುದನ್ನ ತೋರಿಸಿದ್ದಾರೆ.

ಆ ಬಡ ಹೋಟೆಲ್‍ನಲ್ಲಿ ತಿಂಡಿತಿಂದ ಮೇಲೆ ಅಂಗಡಿಯ ಮಾಲಕಿಗೆ 10000 ರೂಗಳನ್ನು ನೀಡಿದ್ದಾರೆ. ಆಗ ಅಂಗಡಿಯ ಮಾಲಕಿ ರಾಧ ಅವರು ಬೇಡ ಎಂದು ನಿರಾಕರಿಸಿದರೂ ಇಟ್ಟುಕೊಳ್ಳಿ, ಈ ಹಣದಲ್ಲಿ ಮಕ್ಕಳಿಗೆ ಏನಾದರೂ ಗಿಫ್ಟ್ ಕೊಡಿಸಿ ಎಂದು ಹೇಳಿದ್ದಾರೆ.
ನಂತರ ಕಿಚ್ಚ ಸುದೀಪ್‍ರನ್ನು ಕಂಡ ಅಭಿಮಾನಿಗಳು ಅವರೊಟ್ಟಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

ಕಿಚ್ಚ ಸುದೀಪ್ ಅವರು ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಮತ್ತು ಸೋಮಶೇಖರ ರೆಡ್ಡಿ ಅವರ ಪರವಾಗಿ ಪ್ರಚಾರ ಮಾಡುವುದಕ್ಕಾಗಿ ಆಗಮಿಸಿದ್ದರು. ಇತ್ತೀಚೆಗೆ ಸುದೀಪ್ ಅವರು ಸಿದ್ದರಾಮಯ್ಯನವರ ಪರವಾಗಿ ಮತಯಾಚನೆ ಮಾಡುತ್ತಾರೆ ಎನ್ನುವ ಮಾತುಗಳಿದ್ದವು ಆದರೆ ಇದೆಲ್ಲದಕ್ಕೂ ರನ್ನ ಸುದೀಪ್ ಅವರೇ ತೆರೆ ಎಳೆದಿದ್ದೂ ಅಲ್ಲದೇ, ಶ್ರೀರಾಮುಲು ಅವರು ಅಪೇಕ್ಷೆ ಪಟ್ಟರೆ ಅವರ ಪರವಾಗಿ ಪ್ರಚಾರ ಮಾಡುವುದಾಗಿ ಸುದೀಪ್ ಅವರು ಹೇಳಿದ್ದರು. ಅದರಂತೆಯೇ ಇಂದು ಮೊಳಕಾಲ್ಮೂರು ಕ್ಷೇತ್ರದಲ್ಲಿ ಬಂದು ಪ್ರಚಾರ ಮಾಡಿದ್ದಾರೆ.

ಪ್ರಚಾರದ ವೇಳೆ ಮಧಕರಿ ನಾಯಕನ ಡೈಲಾಗ್ ಹೇಳಿದ ಕೂಡಲೇ ಜನ ಶಿಳ್ಳೆ ಚಪ್ಪಾಳೆಯನ್ನ ಹೊಡೆದಿದ್ದಾರೆ. ಈ ಬಾರಿ ಶ್ರೀರಾಮುಲು ಅವರನ್ನು ಗೆಲ್ಲಿಸುವಂತೆ ಅವರು ಮನವಿ ಮಾಡಿದ್ದಾರೆ.

Please follow and like us:
0
https://kannadadalli.com/wp-content/uploads/2018/05/sudeepa.pnghttps://kannadadalli.com/wp-content/uploads/2018/05/sudeepa-150x100.pngKannadadalli Editorಸಿನೆಮಾkiccha sudeep,molakalmuru,roadside,sudeepಸುದೀಪ್ ಎಲ್ಲರಿಗೂ ಇಷ್ಟ ಆಗೋದು ಇದೇ ಕಾರಣಕ್ಕೆ - ಗೂಡಂಗಡಿಯಲ್ಲಿ ತಿಂಡಿ ತಿಂದು ಟೀ ಕುಡಿದು 10000 ಕೊಟ್ಟ ಕಿಚ್ಚ ಕಿಚ್ಚ ಸುದೀಪ್ ಮತ್ತೊಮ್ಮ ತಾನೆಷ್ಟು ಸರಳ ಎಂಬುದನ್ನು ಮತ್ತೊಮ್ಮೆ ಸಾಭೀತು ಮಾಡಿದ್ದಾರೆ. ಬಳ್ಳಾರಿ ಮತ್ತು ಚಿತ್ರದುರ್ಗದಲ್ಲಿ ಬಿಜೆಪಿ ಪರ ಪ್ರಚಾರಕೆ ಬಂದಿದ್ದ ವೇಳೆ ಸುದೀಪ್ ಆಂದ್ರ ಗಡಿಯ ಓಬಳಾಪುರಂ ಊರಿನಲ್ಲಿ ರಸ್ತೆಬದಿ ಇರುವ ಗೂಡಂಗಡಿಯಲ್ಲಿ ತಿಂಡಿ ತಿಂದು ಟೀಕುಡಿದು ತಾವೆಷ್ಟು ಸರಳ ಎನ್ನುವುದನ್ನ ತೋರಿಸಿದ್ದಾರೆ. ಆ ಬಡ ಹೋಟೆಲ್‍ನಲ್ಲಿ ತಿಂಡಿತಿಂದ...ಕನ್ನಡಿಗರ ವೆಬ್​ ಚಾನೆಲ್​