sudeep ರೈತರಿಗಾಗಿ ತನ್ನ ಕಾರನ್ನೇ ಮಾರಿದ ಕಿಚ್ಚ ಸುದೀಪ್…! ಇವರ​ ಹೃದಯ ವೈಶ್ಯಾಲೆತೆಗೆ ಹಿಡಿದ ಕನ್ನಡಿ ಈ ನಿರ್ಧಾರ…!

ಅಭಿಮಾನಿಗಳ ಆರಾಧ್ಯ ದೈವ ಎಂದೇ ಖ್ಯಾತರಾಗಿರುವ ಸ್ಯಾಂಡಲ್​ವುಡ್​ನ ಕಿಚ್ಚ ಸುದೀಪ್​ ಎಲ್ಲರಿಗೂ ಇಷ್ಟವಾಗುವಂತಹ ಒಂದೊಳ್ಳೆ ವ್ಯಕ್ತಿತ್ವ, ಸದಾ ತಮ್ಮ ಅಭಿಮಾನಿಗಳಿಗೆ ಸಮಾಜ ಸೇವೆಯಲ್ಲಿ ತೊಡಕೊಳ್ಳುವಂತಹ ನಮ್ಮ ಕಿಚ್ಚ ಸುದೀಪ್​ ನಿನ್ನೆ ರೈತರಿಗಾಗಿ ಮಾಡಿರುವ ಟ್ರಸ್ಟ್​ ಒಂದಕ್ಕೆ ತಮ್ಮ ಪ್ರೀತಯ ಕಾರೊಂದನ್ನು ಮಾರಾಟ ಮಾಡಿ ಅದರಿಂದ ಬಂದಂತಹ ಹಣವನ್ನು ಇದಕ್ಕೆ ಧಾನ ನೀಡುವುದಾಗಿ ಹೇಳಿದ್ದಾರೆ.

ತಮ್ಮ ಧುಬಾರಿ ಬೆಲೆ ಬಾಳುವ ಕಾರನ್ನ ಮಾರಾಟ ಮಾಡಿ ಆ ಹಣವನ್ನು ನೀಡಿವುದಾಗಿ ಹೇಳಿರುವುದು ಅವರ ಹೃದಯ ವೈಶಾಲ್ಯತೆ ಎಂತಾದ್ದು ಎಂಬುದನ್ನ ತಿಳಿಸುತ್ತದೆ. ಸಾಮಾನ್ಯ ಕಾರಾಗಿದ್ದರೆ ಅದಕ್ಕೆ ಇಷ್ಟು ಪ್ರಾಮುಖ್ಯತೆ ಸಿಗುತ್ತಿರಲಿಲ್ಲ. ಆದರೆ ಇವರು ಮಾರಟಕ್ಕೆ ಇಟ್ಟಿರುವುದು ತಮ್ಮ ಬಿಎಂಡಬ್ಲ್ಯು ಎಕ್ಸ್​6, ಹೌದು ಈ ಕಾರನ್ನು ಅವರು ಮಾರಾಟ ಮಾಡಿ ಅದರಿಂದ ಬರುವಂತಹ ಹಣವನ್ನು ‘ರೈತರಿಗಾಗಿ ದುಡಿಯುವ ‘‘ವಿ ರೆಸ್ಪೆಕ್ಟ್​ ಫಾರ್ಮರ್ಸ್​ ಟ್ರಸ್ಟ್​’’ ಸರ್ಕಾರೇತರ ಸಂಸ್ಥೆಗೆ ನೀಡವುದಾಗಿ ಕಾರ್ಯಕ್ರಮದ ವೇದಿಕೆಯಲ್ಲಿಯೇ ಹೇಳಿರುವುದು ಅವರಿಗೆ ರೈತರ ಬಗ್ಗೆ ಇರುವ ಕಮಿಟ್​ ಮೆಂಟ್​ ಎಂತಹುದು ಎಂಬುದನ್ನ ತಿಳಿಸುತ್ತದೆ. ತಾವು ಹಲವು ವರ್ಷಗಳಿಂದ ಕನ್ನಡ ಚಿತ್ರ ರಂಗದಲ್ಲಿ ಕೆಲಸ ಮಾಡುತ್ತಿದ್ದರೂ ಹೆಚ್ಚಿನ ಹಣವನ್ನೇನು ಗಳಿಸಿಲ್ಲ ಆದರೂ ನನ್ನ ಬಳಿ ನಾಲ್ಕು ಐಶಾರಾಮಿ ಕಾರುಗಳಿವೆ ಅದರಲ್ಲಿ ಒಂದನ್ನು ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ನೀಡುವುದಾಗಿ ತಿಳಿಸಿದ್ದಾರೆ.

sudeep car

ನಿನ್ನೆ ನಡೆದ ಟ್ರಸ್ಟ್​ನ ಚಿಹ್ನೆ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸುದೀಪ್​ ಈ ಕಾರ್ಯ ಕೇವಲ ತೋರ್ಪಡಿಕೆಯಾಗಬಾರದು. ಈ ಟ್ರಸ್ಟ್​ ತನ್ನ ಟ್ರಸ್ಟ್​ ಅನ್ನು ಉಳಿಸಿಕೊಳ್ಳಬೇಕು ಸರಿಯಾದ ರತಿಯಲ್ಲಿ ರೈತರ ಕಷ್ಟಗಲಿಗೆ ಸ್ಪಂದಿಸಬೇಕು, ಯಾವುದೇ ಕಾರಣಕ್ಕೂ ಇಲ್ಲಿ ಅವ್ಯವಹಾರ ಮತ್ತಿತರ ಚಟುವಟಿಕೆಗಳು ನಡೆದರೆ ನಾನು ಸಹಿಸುವುದಿಲ್ಲ ಎಂದು ವಾರ್ನ್​ ಮಾಡಿದ್ದಾರೆ.

ಈ ರೀತಿಯ ಕಾರ್ಯಕ್ರಮಗಳು ಕೇವಲ ವೇದಿಕೆಯ ಕಾರ್ಯಕ್ರಮವಾಗಬಾರದು, ನಾವು ಇಂದು ಲೋಗೊ ಬಿಡುಗಡೆ ಮಾಡಿ ನಾಲ್ಕು ಜನ ರೈತರನ್ನು ಸನ್ಮಾನಿಸಿದರೆ ಸಾಲದು, ರೈತರ ಕಷ್ಟಕ್ಕೆ ನೀವು ಹೇಗೆ ಸ್ಪಂದಿಸುತ್ತೀರಿ ನಿಮ್ಮ ಕಾರ್ಯ ಯೋಜನೆಗಳೇನು ಎಂದು ಆಯೋಜಕರನ್ನು ಪ್ರಶ್ನಿಸಿದರು.

ಒಬ್ಬ ರೈತನ ಕಷ್ಟ ಮತ್ತೊಬ್ಬ ರೈತನಿಗೆ ಮಾತ್ರ ಗೊತ್ತಾಗುತ್ತದೆ, ನಾವು ಮಳೆಯನ್ನು ತರಿಸುವುದಕ್ಕೆ ಸಾಧ್ಯವಿಲ್ಲ ಆದರೆ ಹಗಲಿರುಳೆನ್ನದೆ ದುಡಿಯುವ ಆಹಾರ ಉತ್ಪಾದಿಸುವ ಅವರ ಕಷ್ಟ ಮತ್ತೊಬ್ಬ ರೈತನಿಗೆ ಮಾತ್ರ ಗೊತ್ತಾಗುತ್ತದೆ ಎಂದರು. ನನಗೂ ರೈತರ ಕಷ್ಟ ಏನು ಎಂದು ಗೊತ್ತು ಹಾಗಾಗಿ ನನ್ನಿಂದಾದ ಒಂದು ಚಿಕ್ಕ ಕಾಣಿಕೆಯನ್ನು ನೀಡಿದ್ದೇನೆ ಎಂದು ರೈತರ ಬಗ್ಗೆ ಅವರಲ್ಲಿರುವ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ.

ಈ ಒಂದು ಸನ್ನಿವೇಶವೇ ಸಾಕು ಕಿಚ್ಚ ಸುದೀಪ್​ ಎಂತ ಹೃದಯ ವೈಶಾಲ್ಯತೆ ಇದೆ ಎಂಬುದನ್ನು ನಾವು ಕಾಣಬಹುದು, ತಾನೂ ಸೂಪರ್​ ಸ್ಟಾರ್​ ಆಗಿದ್ದರೂ ಕೂಡ ರಾಜ್ಯದ ಜನರ ಸಮಸ್ಯೆಗೆ ತಾನು ಸ್ಪಂದಿಸುತ್ತೇನೆ ಎಂಬ ಸಂದೇಶವನ್ನು ನೀಡಿದ್ದಾರೆ.

Please follow and like us:
0
https://kannadadalli.com/wp-content/uploads/2017/12/dc-Cover-92v9ggghpuf1ckjvi9058h1rr1-20171214023520.Medi_.jpeghttps://kannadadalli.com/wp-content/uploads/2017/12/dc-Cover-92v9ggghpuf1ckjvi9058h1rr1-20171214023520.Medi_-150x100.jpegKannadadalli Editorಸಿನೆಮಾಸುದ್ದಿkiccha sudeep,sudeep,sudeep sell his car for former's,sudeep's BMW X6ರೈತರಿಗಾಗಿ ತನ್ನ ಕಾರನ್ನೇ ಮಾರಿದ ಕಿಚ್ಚ ಸುದೀಪ್…! ಇವರ​ ಹೃದಯ ವೈಶ್ಯಾಲೆತೆಗೆ ಹಿಡಿದ ಕನ್ನಡಿ ಈ ನಿರ್ಧಾರ…! ಅಭಿಮಾನಿಗಳ ಆರಾಧ್ಯ ದೈವ ಎಂದೇ ಖ್ಯಾತರಾಗಿರುವ ಸ್ಯಾಂಡಲ್​ವುಡ್​ನ ಕಿಚ್ಚ ಸುದೀಪ್​ ಎಲ್ಲರಿಗೂ ಇಷ್ಟವಾಗುವಂತಹ ಒಂದೊಳ್ಳೆ ವ್ಯಕ್ತಿತ್ವ, ಸದಾ ತಮ್ಮ ಅಭಿಮಾನಿಗಳಿಗೆ ಸಮಾಜ ಸೇವೆಯಲ್ಲಿ ತೊಡಕೊಳ್ಳುವಂತಹ ನಮ್ಮ ಕಿಚ್ಚ ಸುದೀಪ್​ ನಿನ್ನೆ ರೈತರಿಗಾಗಿ ಮಾಡಿರುವ ಟ್ರಸ್ಟ್​ ಒಂದಕ್ಕೆ ತಮ್ಮ ಪ್ರೀತಯ ಕಾರೊಂದನ್ನು ಮಾರಾಟ ಮಾಡಿ ಅದರಿಂದ ಬಂದಂತಹ ಹಣವನ್ನು ಇದಕ್ಕೆ ಧಾನ ನೀಡುವುದಾಗಿ...ಕನ್ನಡಿಗರ ವೆಬ್​ ಚಾನೆಲ್​