ಸ್ಯಾಂಡಲ್ ವುಡ್ : ಅಂದಹಾಗೆ, ಈಗಾಗಲೇ ಸ್ಯಾಂಡಲ್ ವುಡ್ ಮಾತ್ರವಲ್ಲದೇ ಟಾಲಿವುಡ್, ಮಾಲಿವುಡ್, ಕಾಲಿವುಡ್,

ಹಾಲಿವುಡ್ ಹಾಗೂ ಬಾಲಿವುಡ್ ನಲ್ಲೂ ನಟಿಸಿ ಸೈ ಎನಿಸಿಕೊಂಡಿರುವ ನಟ ‘ಕಿಚ್ಚ ಸುದೀಪ್’ ಅವರಿಗೆ ಇದೀಗ ಮತ್ತೆ ಬಾಲಿವುಡ್ ನಲ್ಲಿ ನಟಿಸುವ ಅವಕಾಶ ಹುಡುಕಿಕೊಂಡು ಬಂದಿದೆಯಂತೆ. ಅರೇ ಹೌದಾ..? ಹಾಗಾದ್ರೆ ನಮ್ಮ ಕಿಚ್ಚ ಮತ್ತೆ ಬಾಲಿವುಡ್ ನಲ್ಲಿ ನಟಿಸುತ್ತಿದ್ದಾರಾ..? ಅನ್ನೋದೆ ಅಭಿಮಾನಿಗಳ ಪ್ರಶ್ನೆಯಾಗಿಬಿಟ್ಟಿದೆ. ಇದಕ್ಕೆಲ್ಲ ಉತ್ತರ ಇಲ್ಲಿದೆ ಮುಂದೆ ಓದಿ…

ಹೌದು, ಈ ಹಿಂದೆ ನಟ ಸುದೀಪ್ ಅವರು ನಟ ಸಲ್ಮಾನ್ ಖಾನ್ ಅವರ ಟೈಗರ್ ಜಿಂದಾ ಹೈ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿತ್ತು. ಆದರೆ, ಕಾರಣಾಂತರಗಳಿಂದ ಸುದೀಪ್ ಅವರು ಈ ಚಿತ್ರದಲ್ಲಿ ನಟಿಸಲಿಲ್ಲ. ಆದರೆ ಇದೀಗ ಸಲ್ಮಾನ್ ಖಾನ್ ಅವರು ನಟಿಸುತ್ತಿರುವ ಮತ್ತೊಂದು ಸಿನಿಮಾ ‘ದಬಾಂಗ್ 3′ ಯಲ್ಲಿ ನಟಿಸಲು ಆಹ್ವಾನ ಬಂದಿದೆಯಂತೆ.

ಅಂದಹಾಗೆ, ಈ ಚಿತ್ರದಲ್ಲಿ ಸುದೀಪ್ ಅವರು ಅಭಿನಯ ಮಾಡಬೇಕೆಂದು ಸ್ವತಃ ಸಲ್ಮಾನ್ ಅವರೇ ಚಿತ್ರತಂಡಕ್ಕೆ ಸಲಹೆ ಕೊಟ್ಟಿದ್ದಾರಂತೆ. ಇನ್ನು, ಮೂಲಗಳ ಪ್ರಕಾರ ಸುದೀಪ್ ಅವರು ಈ ಚಿತ್ರದಲ್ಲಿ ನೆಗೆಟಿವ್ ರೋಲ್ನಲ್ಲಿ ನಟಿಸಲಿದ್ದಾರಂತೆ. ಆದರೆ, ಇದುವರೆಗೂ ಈ ಕುರಿತು ಸುದೀಪ್ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಒಟ್ಟಾರೆ ಹೇಳೋದಾದ್ರೆ, ಬಾಲಿವುಡ್ ನಲ್ಲಿ ಕಿಚ್ಚನ ಎಂಟ್ರಿ ಆಗೋದು ಅಭಿಮಾನಿಗಳಿಗೆ ಸಂತಷದ ಸುದ್ದಿಯೇ. ಆದ್ದರಿಂದ ಈ ಬಗ್ಗೆ ಕಿಚ್ಚನ ಮಾತೇನು ಅನ್ನೋದನ್ನ ತಿಳಿದುಕೊಳ್ಳಲು ಅಭಿಮಾನಿಗಳು ಬಹು ಕಾತುರದಿಂದ ಕಾದಿದ್ದಾರೆ ಎಂದರೆ ತಪ್ಪಾಗಲಾರದು.Please follow and like us:
0
https://kannadadalli.com/wp-content/uploads/2018/07/Sudeep-to-Work-with-Krishna-Again.jpghttps://kannadadalli.com/wp-content/uploads/2018/07/Sudeep-to-Work-with-Krishna-Again-150x100.jpgSindhuಸಿನೆಮಾಕಿಚ್ಚ ಸುದೀಪ್,ದಬಾಂಗ್ 3,ಬಾಲಿವುಡ್,ಸಲ್ಮಾನ್ ಖಾನ್,ಸ್ಯಾಂಡಲ್ ವುಡ್ಸ್ಯಾಂಡಲ್ ವುಡ್ : ಅಂದಹಾಗೆ, ಈಗಾಗಲೇ ಸ್ಯಾಂಡಲ್ ವುಡ್ ಮಾತ್ರವಲ್ಲದೇ ಟಾಲಿವುಡ್, ಮಾಲಿವುಡ್, ಕಾಲಿವುಡ್, ಹಾಲಿವುಡ್ ಹಾಗೂ ಬಾಲಿವುಡ್ ನಲ್ಲೂ ನಟಿಸಿ ಸೈ ಎನಿಸಿಕೊಂಡಿರುವ ನಟ ‘ಕಿಚ್ಚ ಸುದೀಪ್’ ಅವರಿಗೆ ಇದೀಗ ಮತ್ತೆ ಬಾಲಿವುಡ್ ನಲ್ಲಿ ನಟಿಸುವ ಅವಕಾಶ ಹುಡುಕಿಕೊಂಡು ಬಂದಿದೆಯಂತೆ. ಅರೇ ಹೌದಾ..? ಹಾಗಾದ್ರೆ ನಮ್ಮ ಕಿಚ್ಚ ಮತ್ತೆ ಬಾಲಿವುಡ್ ನಲ್ಲಿ ನಟಿಸುತ್ತಿದ್ದಾರಾ..? ಅನ್ನೋದೆ ಅಭಿಮಾನಿಗಳ ಪ್ರಶ್ನೆಯಾಗಿಬಿಟ್ಟಿದೆ. ಇದಕ್ಕೆಲ್ಲ ಉತ್ತರ ಇಲ್ಲಿದೆ ಮುಂದೆ ಓದಿ... ಹೌದು, ಈ ಹಿಂದೆ ನಟ...ಕನ್ನಡಿಗರ ವೆಬ್​ ಚಾನೆಲ್​