ನಾವು ಈಗಾಗಲೇ ನಿತ್ಯ ದೇವರಿಗೆ ಪೂಜೆ ಮಾಡುವಾಗ ತಿಳಿದೊ ತಿಳಿಯದೆಯೋ ಮಾಡುವ ತಪ್ಪುಗಳ ಬಗ್ಗೆ ತಿಳಿದುಕೊಂಡೆವು. ಈಗ ನಾವು ದೇವರಿಗೆ ಪೂಜೆ ಮಾಡುವಾಗ ನಮ್ಮ ಗಮನಕ್ಕೆ ಬಾರದೇ ಹೋಗುವ ಕೆಲವು ಸಂಗತಿಗಳ ತಿಳಿದುಕೊಳ್ಳೋಣ.

ಈ ವಿಚಾರಗಳನ್ನು ತಿಳಿಯುವ ಮೂಲಕ ಕ್ರಮವಾಗಿ ನಿತ್ಯ ಪೂಜೆ ಮಾಡುವುದರಿಂದ ನಮ್ಮ ಇಷ್ಟಾರ್ಥಗಳನ್ನು ಆ ಭಗವಂತನಿಂದ ಪಡೆದುಕೊಳ್ಳೋಣ. ಅಲ್ಲದೇ ಪೂಜೆಯ ಸಂಪೂರ್ಣ ಅನುಕೂಲಗಳನ್ನು ಪಡೆದು ಧನ್ಯರಾಗೋಣ.

  • ಪಂಚಾಮೃತವೂ ಕೂಡ ಅಮೃತದಷ್ಟೇ ಪವಿತ್ರವಾದುದು ಎಂದು ಶಾಸ್ತ್ರ ವಿಧಿಗಳು ಹೇಳುತ್ತದೆ. ಹಾಗಾಗಿ ದೇವರಿಗೆ ಪಂಚಾಮೃತ ಅಭಿಷೇಕ ಮಾಡಿದ ನಂತರ ತೀರ್ಥ ತೆಗೆದುಕೊಂಡರೆ ಅಮೃತವನ್ನು ಸೇವಿಸಿದಷ್ಟೇ ಶ್ರೇಷ್ಠವಾಗಿರುತ್ತದೆ. ಅಲ್ಲದೇ, ಪೂಜೆಯ ವೇಳೆ ಪಂಚಾಮೃತವನ್ನು ಬಳಕೆ ಮಾಡುವುದರಿಂದ ದೇವರ ಅನುಗ್ರಹವನ್ನು ಪಡೆಯಬಹುದು.
  • ಲಕ್ಷ್ಮೀಪೂಜೆಯಲ್ಲಿ ಕೆಂಪು ಬಣ್ಣವನ್ನು ಬಳಕೆ ಮಾಡುವುದು ಶ್ರೇಷ್ಠ. ಹಾಗಾಗಿ ನಿತ್ಯ ಪೂಜೆಗೆ ಬಳಸುವ ದೀಪಕ್ಕೆ ಕೆಂಪು ಬತ್ತಿಯನ್ನು ಬಳಸುವುದರಿಂದ ಅನುಕೂಲವಾಗುತ್ತದೆ. ದೇವರಿಗೆ ದೀಪ ಬೆಳಗಿದ ಬಳಿಕ ಬಲಭಾಗದಲ್ಲಿ ಇರಿಸುವುದು ಉತ್ತಮ.
  • ನಿತ್ಯ ದೇವರ ಪೂಜೆ ಮಾಡುವಾಗ ಶಂಖನಾದ ಮಾಡುವುದರಿಂದ ಮನೆಯಲ್ಲಿರುವ ಋಣಾತ್ಮಕ ಶಕ್ತಿಗಳನ್ನು ಹೊರ ಹಾಕಲು ನೆರವಾಗುತ್ತದೆ. ಅಲ್ಲದೇ ಮನೆಯಲ್ಲಿ ಧನಾತ್ಮಕ ಶಕ್ತಿಗಳ ಸಂಚಯವಾಗುತ್ತದೆ. ಇದೇ ಕಾರಣಕ್ಕಾಗಿ ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಶಂಖನಾದ ಮೊಳಗಿಸಲಾಗುತ್ತದೆ. ಶಂಖನಾದದಿಂದ ಲಕ್ಷ್ಮಿದೇವಿಯೂ ಪ್ರಸನ್ನಳಾಗುತ್ತಾಳೆ.
  • ಸಾಮಾನ್ಯವಾಗಿ ದೇವರಿಗೆ ಪೂಜೆ ಮಾಡುವಾಗ ಉಣ್ಣೆಯ ಚಾಪೆ ಮೇಲೆ ಕುಳಿತುಕೊಳ್ಳುವುದು ಶ್ರೇಯಸ್ಕರ.
  • ಲಕ್ಷ್ಮೀದೇವಿಗೆ ಪೂಜೆ ಮಾಡುವಾಗ ಕಮಲದ ಹೂವನ್ನು ಪೂಜೆ ಮಾಡುವುದು ಪವಿತ್ರವಾದುದಾಗಿದೆ.
  • ದೇವರಿಗೆ ವೀಳ್ಯದೆಲೆ ಹಾಗೂ ಗುಲ್ಕಂದ್ ಸಹಾ ಇಷ್ಟವಾಗುವುದರಿಂದ ಪೂಜೆಯ ವೇಳೆ ಬಳಸಬಹುದು.
  • ವಿಷ್ಣುದೇವರನ್ನು ಆರಾಧಿಸುವಾಗ ಹಳದಿ ವಸ್ತ್ರಗಳನ್ನು ಅರ್ಪಿಸಿ. ಸಾಧ್ಯವಾದಷ್ಟೂ ಹಳದಿ ಬಣ್ಣದ ಬಟ್ಟೆಗಳನ್ನೇ ತೊಟ್ಟು ಪೂಜೆ ಮಾಡಿ. ಇದರಿಂದ ಸಾಕಷ್ಟು ಅನುಕೂಲವಾಗಲಿದೆ.
  • ಸಾಮಾನ್ಯವಾಗಿ ಪೂಜೆ ಮಾಡುವಾಗ ಗಣಪತಿ, ರವಿ, ಹರಿ, ಹರ ಹಾಗೂ ದುರ್ಗಾ ದೇವಿಯನ್ನು ಸ್ತುತಿಸುವುದು ಒಳ್ಳೆಯದು. ಈ ಪಂಚ ದೇವರ ಸ್ತುತಿ ಪ್ರತಿ ಪೂಜೆಯಲ್ಲಿಯೂ ಕಡ್ಡಾಯ ದು ಹಿಂದೂ ಶಾಸ್ತ್ರ ವಿಧಾನಗಳು ಹೇಳುತ್ತವೆ.
Please follow and like us:
0
https://kannadadalli.com/wp-content/uploads/2018/06/god-idols-02-7-1519276876-296100-khaskhabar.jpghttps://kannadadalli.com/wp-content/uploads/2018/06/god-idols-02-7-1519276876-296100-khaskhabar-150x100.jpgSowmya KBಜೀವನಶೈಲಿನಾವು ಈಗಾಗಲೇ ನಿತ್ಯ ದೇವರಿಗೆ ಪೂಜೆ ಮಾಡುವಾಗ ತಿಳಿದೊ ತಿಳಿಯದೆಯೋ ಮಾಡುವ ತಪ್ಪುಗಳ ಬಗ್ಗೆ ತಿಳಿದುಕೊಂಡೆವು. ಈಗ ನಾವು ದೇವರಿಗೆ ಪೂಜೆ ಮಾಡುವಾಗ ನಮ್ಮ ಗಮನಕ್ಕೆ ಬಾರದೇ ಹೋಗುವ ಕೆಲವು ಸಂಗತಿಗಳ ತಿಳಿದುಕೊಳ್ಳೋಣ. ಈ ವಿಚಾರಗಳನ್ನು ತಿಳಿಯುವ ಮೂಲಕ ಕ್ರಮವಾಗಿ ನಿತ್ಯ ಪೂಜೆ ಮಾಡುವುದರಿಂದ ನಮ್ಮ ಇಷ್ಟಾರ್ಥಗಳನ್ನು ಆ ಭಗವಂತನಿಂದ ಪಡೆದುಕೊಳ್ಳೋಣ. ಅಲ್ಲದೇ ಪೂಜೆಯ ಸಂಪೂರ್ಣ ಅನುಕೂಲಗಳನ್ನು ಪಡೆದು ಧನ್ಯರಾಗೋಣ. ಪಂಚಾಮೃತವೂ ಕೂಡ ಅಮೃತದಷ್ಟೇ ಪವಿತ್ರವಾದುದು ಎಂದು ಶಾಸ್ತ್ರ ವಿಧಿಗಳು...ಕನ್ನಡಿಗರ ವೆಬ್​ ಚಾನೆಲ್​