ಕೇತುಗ್ರಸ್ತ ಚಂದ್ರಗ್ರಹಣ ಲೇಖನ ಮಾಲೆ – ೨

ಗ್ರಹಣದ ಆಚರಣೆ ಶಾಸ್ತ್ರದ ಮಾತು ಅಂದರೆ ಭಗವಂತನ ಆದೇಶ. ಅದು ಯಾವ ತರಹ ಎಂದು ಬಿಡಿಸಿ ಹೇಳುವುದಾದರೆ ಪ್ರಜಾಪ್ರಭುತ್ವದಲ್ಲಿ ಸಂವಿಧಾನ ಹೇಗೋ ಅದೇ ರೀತಿ. ಇದು ಕೂಡ ಹಿಂದೂ ಸಂಪ್ರದಾಯದ ಒಂದು ಸಂವಿಧಾನ. ಅಂದರೆ ಗ್ರಹಣದ ಈ ಸಮಯವನ್ನು ಸೂತಕದ ಸಮಯ ಎಂದೂ ಪರಿಗಣಿಸಲಾಗುತ್ತದೆ. ಅದಕ್ಕಾಗಿ ಇದನ್ನು ಆಚರಿಸಲೇಬೇಕು. ಏಕೆಂದರೆ ಆ ಸಮಯ ಬಹಳ ಅಶುಭವಾಗಿರುತ್ತದೆ.

ಈ ತಿಂಗಳು 27ನೇ ತಾರೀಖಿನ ಕೊನೆಯ ಆರು ನಿಮಿಷಗಳು ಇರುವಾಗ ಅಂದರೆ 23-54 ಕ್ಕೆ  ಸ್ಪರ್ಶವಾಗಿ, ದಿನಾಂಕ 28, ಜುಲೈ, 2018ರ ಬೆಳಗಿನ ಜಾವ 03-49ಕ್ಕೆ ಮೋಕ್ಷವಾಗುತ್ತದೆ.

ಭೋಜನ ವಿಚಾರ: ಅಂದು ಅಪರಾಹ್ನ 12-30ರ ತನಕ ಭೋಜನ ಮಾಡಬಹುದು. ಚಿಕ್ಕ ಮಕ್ಕಳು, ವಯೋವೃದ್ಧರು, ಅನಾರೋಗ್ಯ ಉಂಟಾಗಿರುವವರು, ಅಶಕ್ತರು ಮಧ್ಯಾಹ್ನ 03-38ರ ತನಕ ಆಹಾರವನ್ನು ಸೇವಿಸಬಹುದು.

ತರ್ಪಣ ವಿಚಾರ: ಸಾಮಾನ್ಯವಾಗಿ ತರ್ಪಣ ಬಿಡುವವರು ಗ್ರಹಣದ ಮಧ್ಯ ಕಾಲದಲ್ಲಿ ಅಂದರೆ ರಾತ್ರಿ 01-51ರ ನಂತರ ನಡೆಸತಕ್ಕದ್ದು.

ಶ್ರಾದ್ಧ ವಿಚಾರ: ದಿನಾಂಕ 27 ಜುಲೈ 2018ಕ್ಕೆ ನಡೆಸುವ ಆಷಾಢ ಶುಕ್ಲ ಪೌರ್ಣಮಿಯ ಶ್ರಾದ್ಧವನ್ನು ಮರುದಿನ 28ನೇ ತಾರೀಖು ಶನಿವಾರದಂದು ನಡೆಸುವುದು.

ಸ್ಪರ್ಶ-ಮೋಕ್ಷ: ಈ ಗ್ರಹಣವು ಉತ್ತರಾಷಾಢ ನಕ್ಷತ್ರದ ಕೊನೆಯ ಭಾಗದಲ್ಲಿ ಮತ್ತು ಶ್ರವಣ ನಕ್ಷತ್ರದಲ್ಲಿ ಸಂಭವಿಸುತ್ತದೆ.

ಅಶುಭ ಯಾವ ನಕ್ಷತ್ರಗಳಿಗೆ?

ಉತ್ತರಾಷಾಢ, ಶ್ರವಣ, ಧನಿಷ್ಠಾ, ಪೂರ್ವಾಷಾಢ, ರೋಹಿಣಿ, ಹಸ್ತಾ (ಪೂರ್ವಾ ಫಲ್ಗುಣಿ), ಕೃತ್ತಿಕಾ, ಉತ್ತರಾ (ಉತ್ತರಾ ಫಲ್ಗುಣಿ) ನಕ್ಷತ್ರಗಳಿಗೆ ದೋಷ.

ಅಶುಭ ರಾಶಿಗಳು:

ಮಕರ, ವೃಷಭ, ಸಿಂಹ, ಧನು

ಈ ನಕ್ಷತ್ರಗಳಿಗೆ ಮತ್ತು ರಾಶಿಗಳಿಗೆ ಈ ಗ್ರಹಣದ ದೋಷ ಹೆಚ್ಚಾಗಿ ಆಗುತ್ತದೆ.

ಪರಿಹಾರ ಶ್ಲೋಕ:

ಯೋ ಸೌ ವಜ್ರಧರೋ ದೇವಃ ಆದಿತ್ಯಾನಾಂ ಪ್ರಭುರ್ಮತಃ |

ಚಂದ್ರಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 1 ||

ಯೋ ಸೌ ದಂಡಧರೋ ದೇವಃ ಯಮೋ ಮಹಿಷವಾಹನಃ |

ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 2 ||

ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷವಾಹನಃ |

ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 3 ||  ‌

ಇದನ್ನು ಒಂದು ಬಿಳಿಯ ಕಾಗದದಲ್ಲಿ ಬರೆದು ಗ್ರಹಣದ ಸಮಯದಲ್ಲಿ ಹೇಳಿಕೊಂಡು ಗ್ರಹಣ ಮೋಕ್ಷದ ನಂತರ ದಕ್ಷಿಣೆ ಧಾನ್ಯ ಸಮೇತ ದಾನ ಮಾಡಬೇಕು. ಇನ್ನು ಹನ್ನೆರಡು ರಾಶಿಯವರಿಗೆ ಈ ಗ್ರಹಣದಿಂದ ಏನು ಫಲ ಎಂದು ಮುಂದಿನ ಲೇಖನದಲ್ಲಿ ತಿಳಿಸಲಾಗುವುದು.

ಇನ್ನೂ ಬೇರೆ  ವಿಚಾರಗಳನ್ನು ತಿಳಿಯಲು ನಿಮಗೆ ಕಾತುರತೆ ಇದ್ದರೆ ಅದು ಯಾವುದೆಂದು ಕಾಮೆಂಟ್ ಮಾಡಿ ತಿಳಿಸಿ.

-ಜ್ಯೋ|| ವಿ|| ವಿನಯ್ ಕುಮಾರ್ ಕಣ್ಣಿ

ಮೊ. 8660831231

Please follow and like us:
0
https://kannadadalli.com/wp-content/uploads/2018/07/987116.jpghttps://kannadadalli.com/wp-content/uploads/2018/07/987116-150x100.jpgSowmya KBಆಧ್ಯಾತ್ಮcelebration,food issues,lunar eclipse,zodiac signಕೇತುಗ್ರಸ್ತ ಚಂದ್ರಗ್ರಹಣ ಲೇಖನ ಮಾಲೆ - ೨ ಗ್ರಹಣದ ಆಚರಣೆ ಶಾಸ್ತ್ರದ ಮಾತು ಅಂದರೆ ಭಗವಂತನ ಆದೇಶ. ಅದು ಯಾವ ತರಹ ಎಂದು ಬಿಡಿಸಿ ಹೇಳುವುದಾದರೆ ಪ್ರಜಾಪ್ರಭುತ್ವದಲ್ಲಿ ಸಂವಿಧಾನ ಹೇಗೋ ಅದೇ ರೀತಿ. ಇದು ಕೂಡ ಹಿಂದೂ ಸಂಪ್ರದಾಯದ ಒಂದು ಸಂವಿಧಾನ. ಅಂದರೆ ಗ್ರಹಣದ ಈ ಸಮಯವನ್ನು ಸೂತಕದ ಸಮಯ ಎಂದೂ ಪರಿಗಣಿಸಲಾಗುತ್ತದೆ. ಅದಕ್ಕಾಗಿ ಇದನ್ನು ಆಚರಿಸಲೇಬೇಕು. ಏಕೆಂದರೆ ಆ ಸಮಯ ಬಹಳ ಅಶುಭವಾಗಿರುತ್ತದೆ. ಈ ತಿಂಗಳು 27ನೇ ತಾರೀಖಿನ ಕೊನೆಯ...ಕನ್ನಡಿಗರ ವೆಬ್​ ಚಾನೆಲ್​