ಆರ್​ಆರ್​ ನಗರ ಕ್ಕೆ ಕಾಂಗ್ರೆಸ್​ನ ‘ದಳ’ಪತಿಯಾಗಿ ಮುನಿರತ್ನ ಕಣಕ್ಕೆ – ಬಿಜೆಪಿ ಸಮ್ಮಿಶ್ರ ಸರ್ಕಾರದ ನಡುವೆ ನೇರ ಹಣಾಹಣಿ..!!!

muniratna

ಆರ್​.ಆರ್​ ನಗರದ ಕಾಂಗ್ರೆಸ್​ ಮತ್ತು ಜೆಡಿಎಸ್​ನ ಅಭ್ಯರ್ಥಿಯಾಗಿ ಮುನಿರತ್ನಾ ಸ್ಪರ್ಧೆ ಪಕ್ಕಾ ಆಗಿದ್ದು ಬಿಜೆಪಿಯ ಮುನಿರಾಜು ಗೌಡ ವಿರುದ್ಧ ಕಾಂಗ್ರೆಸ್​ ಮತ್ತು ಜೆಡಿಎಸ್​ನ ಸಮ್ಮಿಶ್ರ ಅಭ್ಯರ್ಥಿಯ ನಡುವೆ ನೇರ ಹಣಾಹಣಿ ನಡೆಯಲಿದೆ.

munirathna rr nagara

ಇತ್ತೀಚೆಗೆ ಆಪಾರ್ಟ್​ಮೆಂಟ್​ ಒಂದರಲ್ಲಿ 9640 ಕ್ಕೂ ಹೆಚ್ಚ ವೋಟರ್​ ಐಡಿಗಳು ಸಿಕ್ಕ ಕಾರಣದಿಂದಾಗಿ ರಾಜರಾಜೇಶ್ವರಿ ನಗರದ ಚುನಾವಣೆಯನ್ನು ಚುನಾವಣಾ ಆಯೋಗ ಮುಂದೂಡಿತ್ತು. ಆದರೆ ಈ ವಿಧಾನಸಭಾ ಕ್ಷೇತ್ರಕ್ಕೆ ಇದೇ ತಿಂಗಳ 31ನೇ ತಾರೀಖು ಚುನಾವಣೆ ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ನಡೆಯಲಿದ್ದು ಜೆಡಿಎಸ್​ನ ರಾಮಚಂದ್ರ ಅವರು ಮುನಿರತ್ನಾ ಅವರಿಗೆ ಬೆಂಬಲ ನೀಡಲಿದ್ದಾರೆ ಎಂದು ಹೇಳಲಾಗಿದೆ.

munirathna dk suresh

ಈ ಚುನಾವಣೆಯಲ್ಲಿ ಮುನಿರತ್ನಾ ಅವರನ್ನು ಚುನಾವಣೆಯಿಂದ ದೂರ ಇರುವಂತೆ ಮಾಡಿ ಅವರನ್ನು ಎಂಎಲ್​ಸಿ ಮಾಡುವ ಸ್ಟ್ರಾಟಜಿ ಮಾಡಿದ್ದರು ಎಂದು ಹೇಳಲಾಗಿತ್ತು. ಆದರೆ ಜೆಡಿಎಸ್,​ ಕಾಂಗ್ರೆಸ್​ ಒತ್ತಡಕ್ಕೆ ಮಣಿದು ಕಣದಿಂದ ತಮ್ಮ ಅಭ್ಯರ್ಥಿಯನ್ನು ವಾಪಸ್​ ಕರೆಸಿಕೊಂಡಿರುವುದನ್ನು ನೋಡಿದರೆ ಕಾಂಗ್ರೆಸ್​ ಗೇಮ್​ ಪ್ಲಾನ್​ ಸಖತ್​ ಆಗಿ ವರ್ಕ್ಔಟ್​ ಆಗಿದೆ ಎನಿಸುತ್ತದೆ.

ನಿನ್ನೆ ಮುಖ್ಯಮಂತ್ರಿಗಳನ್ನು ಡಿಕೆ ಸುರೇಶ್​ ಅವರೊಂದಿಗೆ ಮೀಟ್​ ಮಾಡಿದ್ದ ಮುನಿರತ್ನ ಅವರು ರಾಜರಾಜೇಶ್ವರಿ ನಗರದಲ್ಲಿ ಜೆಡಿಎಸ್​ ಕ್ಯಾಂಡಿಡೆಟ್​ ಹಾಕದಂತೆ ಮನವಿ ಮಾಡಿಕೊಂಡಿದ್ದರು.

munirathnaಆದರೆ ಚುನಾವಣೆಯ ನಂತರ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್​ ಮತ್ತು ಕಾಂಗ್ರೆಸ್​ ಆರ್​ ಆರ್​ ನಗರದ ಚುನಾವಣೆಯಲ್ಲಿ ಚುನಾವಣಾ ಪೂರ್ವ ಮೈತ್ರಿಯನ್ನು ಮಾಡಿಕೊಂಡಿವೆ. ಜಯನಗರದ ಚುನಾವಣೆಯಲ್ಲಿಯೂ ಕೂಡ ಕಾಂಗ್ರೆಸ್​ ಮತ್ತು ಜೆಡಿಎಸ್​ ಮೈತ್ರಿ ಮಾಡಿಕೊಳ್ಳುತ್ತದೆಯೇ ಎಂದು ನೋಡಬೇಕಿದೆ.

jds-congress

ಮುನಿರತ್ನಾ ಅವರು ಚುನಾವಣಾ ಅಕ್ರಮ ನಡೆಸುತ್ತಿದ್ದಾರೆ ಎಂದು ಹುಚ್ಚಾ ವೆಂಕಟ್​ ಸಾಕ್ಷಿ ಸಮೇತ ಮಾಧ್ಯಮಗಳಲ್ಲಿ ಬಂದು ಮುನಿರತ್ನಾ ವಿರುದ್ಧ ರಾಜ್ಯಾಧ್ಯಂತ ಪ್ರಚಾರ ಮಾಡಿದ್ದರು. ಆದರೆ ಈಗ ಅದೇ ಮುನಿರತ್ನ ಅವರನ್ನು ಜೆಡಿಎಸ್​ ಮತ್ತು ಕಾಂಗ್ರೆಸ್​ ತನ್ನ ಅಭ್ಯರ್ಥಿ ಎಂದು ತೀರ್ಮಾನಿಸಿದೆ.

ಲಾಸ್ಟ್​ ಪಂಚ್​

nikhil kumarswamiಮುನಿರತ್ನಾ ಅವರು ತಾವು ನಿರ್ಮಾಣ ಮಾಡುತ್ತಿರುವ ಕುರುಕ್ಷೇತ್ರ ಸಿನಿಮಾದಲ್ಲಿ ನಿಖಿಲ್​ ಕುಮಾರಸ್ವಾಮಿ ಅವರನ್ನು ಅಭಿಮನ್ಯು ಪಾತ್ರದಲ್ಲಿ ಮಿಂಚಿಸಿರುವುದು ಕೂಡ ಮನಸ್ಸಿನಲ್ಲಿ ಸಂತೋಷವನ್ನುಂಟು ಮಾಡಿ ಆರ್​ ಆರ್​ ನಗರ ಕ್ಷೇತ್ರವನ್ನು ಮುನಿರತ್ನಾ ಅವರಿಗೆ ಬಿಟ್ಟು ಕೊಟ್ಟಿದ್ದಾರೆ ಎಂದು ಜನ ಮಾತನಾಡುಕೊಳ್ಳುತ್ತಿದ್ದಾರೆ.

Please follow and like us:
0
https://kannadadalli.com/wp-content/uploads/2018/05/muniratna.jpghttps://kannadadalli.com/wp-content/uploads/2018/05/muniratna-150x100.jpgKannadadalli EditorರಾಜಕೀಯCongress,munirathna,rr nagaraಆರ್​ಆರ್​ ನಗರ ಕ್ಕೆ ಕಾಂಗ್ರೆಸ್​ನ ‘ದಳ’ಪತಿಯಾಗಿ ಮುನಿರತ್ನ ಕಣಕ್ಕೆ - ಬಿಜೆಪಿ ಸಮ್ಮಿಶ್ರ ಸರ್ಕಾರದ ನಡುವೆ ನೇರ ಹಣಾಹಣಿ..!!! ಆರ್​.ಆರ್​ ನಗರದ ಕಾಂಗ್ರೆಸ್​ ಮತ್ತು ಜೆಡಿಎಸ್​ನ ಅಭ್ಯರ್ಥಿಯಾಗಿ ಮುನಿರತ್ನಾ ಸ್ಪರ್ಧೆ ಪಕ್ಕಾ ಆಗಿದ್ದು ಬಿಜೆಪಿಯ ಮುನಿರಾಜು ಗೌಡ ವಿರುದ್ಧ ಕಾಂಗ್ರೆಸ್​ ಮತ್ತು ಜೆಡಿಎಸ್​ನ ಸಮ್ಮಿಶ್ರ ಅಭ್ಯರ್ಥಿಯ ನಡುವೆ ನೇರ ಹಣಾಹಣಿ ನಡೆಯಲಿದೆ. ಇತ್ತೀಚೆಗೆ ಆಪಾರ್ಟ್​ಮೆಂಟ್​ ಒಂದರಲ್ಲಿ 9640 ಕ್ಕೂ ಹೆಚ್ಚ ವೋಟರ್​ ಐಡಿಗಳು ಸಿಕ್ಕ ಕಾರಣದಿಂದಾಗಿ ರಾಜರಾಜೇಶ್ವರಿ ನಗರದ ಚುನಾವಣೆಯನ್ನು ಚುನಾವಣಾ...ಕನ್ನಡಿಗರ ವೆಬ್​ ಚಾನೆಲ್​