ತೋಳುಗಳಲ್ಲಿ ಕೆಂಪು ಬಣ್ಣದ ಗುಳ್ಳೇಗಳಾಗಿದೆಯೇ? ಅದರಲ್ಲೂ ಹೆಣ್ಣು ಮಕ್ಕಳು ಈ ಗುಳ್ಳೆಗಳನ್ನು ಸಾಕಷ್ಟು ಬಾರಿ ಶಪಿಸಿರಲೂಬಹುದು. ಏಕೆಂದರೆ ಈ ಗುಳ್ಳೆಗಳಿಂದಾಗಿ ಸ್ಲೀವ್ ಲೆಸ್ ಟಾಪ್ ಗಳನ್ನು ಹಾಕಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಒದ್ದಾಡುತ್ತಿರುತ್ತಾರೆ.

ಒಂದು ವೇಳೆ ಹಾಗೆನಾದರೂ ನಿಮ್ಮ ತೋಳು, ಭುಜದ ಭಾಗಗಳಲ್ಲಿ ಈ ರೀತಿಯ ಕೆಂಪು ಗುಳ್ಳೆಗಳು ಕಾಣಿಸಕೊಂಡರೆ ನೀವು ಕೂಡಲೇ ಎಚ್ಚೆತ್ತು ಕೊಳ್ಳುವುದು ಒಳ್ಳೆಯದು. ಈ ಕೆಂಪು ಗುಳ್ಳೆಗಳು ಕೆರಟೋಸಿಸ್ ಪಿಲರೀಸ್ ಅಥವಾ ಚಿಕನ್ ಸ್ಕಿನ್ ಎಂದು ಕರೆಯುತ್ತಾರೆ.

ಕೆರೋಟಿನ್ ಎಂಬ ಪ್ರೋಟೀನ್ ಹೇರ್ ಫಾಲಿಕಲ್ಸ್ ಗಳನ್ನು ಬ್ಲಾಕ್ ಮಾಡುವುದಿರಂದ ಈ ರೀತಿಯ ಗುಳ್ಳೆಗಳು ಕಾಣಿಸಿಕೊಳ್ಳುತ್ತದೆ. ಇದು ತೋಳುಗಳಲ್ಲಿ ಮಾತ್ರವಲ್ಲದೇ ದೇಹದ ಯಾವುದೇ ಭಾಗದಲ್ಲೂ ಕಾಣಿಸಿಕೊಳ್ಳಬಹುದು.

ಸಾಮಾನ್ಯವಾಗಿ ಇದು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ವಯಸ್ಕರಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಇದನ್ನು ಸರಳ ವಿಧಾನಗಳ ಮೂಲಕ ನಿವಾರಣೆ ಮಾಡಿಕೊಳ್ಳಬಹುದು. ಇದಕ್ಕೆ ಮನೆ ಮದ್ದನ್ನು ಕೂಡ ಅನುಸರಿಸಬಹುದು. ಇತರೆ ಚರ್ಮದ ಸಮಸ್ಯೆಯನ್ನು ನಿವಾರಣೆ ಮಾಡಿಕೊಂಡಂತೆ ಈ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು.

ಕೊಬ್ಬರಿ ಎಣ್ಣೆಯಲ್ಲಿ ಮಾಯಿಶ್ಚರೈಸಿಂಗ್ ಅಂದರೆ ಆರ್ಧ್ರತೆಯ ಗುಣವಿದೆ. ಹಾಗಾಗಿ ಕೊಬ್ಬರಿ ಎಣ್ಣೆಯನ್ನು ಗುಳ್ಳೆಗಳ ಮೇಲೆ ನಿಯಮಿತವಾಗಿ ಹಚ್ಚುವುದರಿಂದ ಉರಿಯುವುದು, ಚರ್ಮ ಒಣಗುವುದನ್ನು ತಪ್ಪಿಸುತ್ತದೆ. ಅಲ್ಲದೇ ಗುಳ್ಳೆಗಳು ದೇಹದ ಮೇಲೆ ಕಾಣಿಸದಂತೆ ಮಾಡುತ್ತದೆ.

ಕೊಬ್ಬರಿ ಎಣ್ಣೆಯನ್ನು ಸ್ವಲ್ಪ ಪ್ರಮಾಣದಲ್ಲಿ ಬಿಸಿ ಮಾಡಿ ಗುಳ್ಳೆಗಳು ಎದ್ದಿರುವ ಜಾಗಕ್ಕೆ ಹಚ್ಚಿ ನಯವಾಗಿ ಮಸಾಜ್ ಮಾಡಿ. ದಿನಕ್ಕೆ ಎರಡು ನಾರಿ ಈ ರೀತಿ ಮಾಡಿದರೆ ಗುಳ್ಳೆಗಳು ಮಾಯವಾಗುತ್ತವೆ.

ಅಲೋವೆರಾ ಜೆಲ್ ಅನ್ನು ಇಂತಹ ಗುಳ್ಳೆಗಳ ಮೇಲೆ ಹಚ್ಚುವುದರಿಂದಲೂ ಗುಳ್ಳೆಗಳಿಂದ ಮುಕ್ತಿ ಪಡೆಯಬಹದು. ಅಲೋವೆರಾಗೆ ಚರ್ಮವನ್ನು ಶುಷ್ಕವಾಗಿಡುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೇ ಚರ್ಮದ ಮೇಲೆ ಯಾವುದೇ ಗುಳ್ಳೆಗಳನ್ನು ಏಳದಂತೆ ನೋಡಿಕೊಳ್ಳುತ್ತದೆ. ಜೆಲ್ ಅನ್ನು ಅಪ್ಲೈ ಮಾಡಿದ ನಂತರ 30 ನಿಮಿಷ ಹಾಗೆಯೇ ಬಿಡಿ. ಆ ನಂತರ ಅದನ್ನು ತಣ್ಣೀರಿನಿಂದ ಶುದ್ಧವಾಗಿ ತೊಳೆಯಿರಿ.

ಆಲೀವ್ ಆಯಿಲ್ ನಲ್ಲಿ ವಿಟಮಿನ್ ಇ ಅಂಶವಿದೆ. ಇದು ದೇಹದಲ್ಲಿ ಉಂಟಾಗುವ ಉರಿಯನ್ನು ವಾಸಿ ಮಾಡುತ್ತದೆ. ದೇಹದ ಯಾವುದೇ ಭಾಗದಲ್ಲಿ ಕಾಣಿಸಿಕೊಳ್ಳುವ ತುರಿಕೆ, ಚರ್ಮ ಕೆಂಪಗಾಗುವುದನ್ನು ಆದಷ್ಟು ಬೇಗನೇ ವಾಸಿ ಮಾಡುತ್ತದೆ. ಆಲಿವ್ ಆಯಿಲ್ ಅನ್ನು ಹದವಾಗಿ ಬಿಸಿ ಮಾಡಿ ಕೆಂಪು ಗುಳ್ಳೆಗಳು ಎದ್ದಿರುವ ಜಾಗದಲ್ಲಿ ನಯವಾಗಿ ಮಸಾಜ್ ಮಾಡುವುದರಿಂದ ಕೆಂಪು ಗುಳ್ಳೆಗಳು ವಾಸಿಯಾಗುತ್ತದೆ.

ಮೊಸರಿನಲ್ಲಿ ಲ್ಯಾಕ್ಟಿಕ್ ಆಸಿಡ್ ಇರುತ್ತದೆ. ಇದು ಸತ್ತ ಜೀವಕೋಶಗಳನ್ನು ತೆಗೆದು ಹಾಕಲು ನೆರವಾಗುತ್ತದೆ. ತಾಜಾ ಮೊಸರಿನಿಂದ ಕೆಂಪು ಗುಳ್ಳೆಗಳಾಗಿರುವ ಜಾಗದಲ್ಲಿ 3 ನಿಮಿಷ ಮಸಾಜ್ ಮಾಡಿ. 10 ನಿಮಿಷದ ನಂತರ ನೀರಿನಿಂದ ಮುಖ ತೊಳೆದರೂ ಈ ಸಮಸ್ಯೆ ನಿವಾರಣೆಯಾಗುತ್ತದೆ.

 Please follow and like us:
0
https://kannadadalli.com/wp-content/uploads/2018/07/p-2-heat-rash-post-workout-1517405766.jpghttps://kannadadalli.com/wp-content/uploads/2018/07/p-2-heat-rash-post-workout-1517405766-150x100.jpgSowmya KBಆರೋಗ್ಯaloe vera gel,coconut oil,curd,olive oil,red bubblesತೋಳುಗಳಲ್ಲಿ ಕೆಂಪು ಬಣ್ಣದ ಗುಳ್ಳೇಗಳಾಗಿದೆಯೇ? ಅದರಲ್ಲೂ ಹೆಣ್ಣು ಮಕ್ಕಳು ಈ ಗುಳ್ಳೆಗಳನ್ನು ಸಾಕಷ್ಟು ಬಾರಿ ಶಪಿಸಿರಲೂಬಹುದು. ಏಕೆಂದರೆ ಈ ಗುಳ್ಳೆಗಳಿಂದಾಗಿ ಸ್ಲೀವ್ ಲೆಸ್ ಟಾಪ್ ಗಳನ್ನು ಹಾಕಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಒದ್ದಾಡುತ್ತಿರುತ್ತಾರೆ. ಒಂದು ವೇಳೆ ಹಾಗೆನಾದರೂ ನಿಮ್ಮ ತೋಳು, ಭುಜದ ಭಾಗಗಳಲ್ಲಿ ಈ ರೀತಿಯ ಕೆಂಪು ಗುಳ್ಳೆಗಳು ಕಾಣಿಸಕೊಂಡರೆ ನೀವು ಕೂಡಲೇ ಎಚ್ಚೆತ್ತು ಕೊಳ್ಳುವುದು ಒಳ್ಳೆಯದು. ಈ ಕೆಂಪು ಗುಳ್ಳೆಗಳು ಕೆರಟೋಸಿಸ್ ಪಿಲರೀಸ್ ಅಥವಾ ಚಿಕನ್ ಸ್ಕಿನ್ ಎಂದು ಕರೆಯುತ್ತಾರೆ. ಕೆರೋಟಿನ್...ಕನ್ನಡಿಗರ ವೆಬ್​ ಚಾನೆಲ್​