HD ದೇವೇಗೌಡರ ಎಂಟ್ರಿಯಿಂದ ಬಗೆಹರಿದ ಸಚಿವ ಸಂಪುಟ ವಿಸ್ತರಣೆಯ ಕಗ್ಗಂಟು…!!!

hd devegowda gulam

ಕಳೆದೊಂದು ವಾರದಿಂದ ಕಗ್ಗಂಟಾಗಿದ್ದ ಸಚಿವ ಸಂಪುಟ ವಿಸ್ತರಣೆಯ ಸರ್ಕಸ್​ ಅನ್ನು ಫೈನಲ್​ ಮಾಡುವುದಕ್ಕೆ ಕೊನೆಗೂ ದೇವೇಗೌಡರೇ ಅಖಾಡಕ್ಕೆ ಇಳಿಯಬೇಕಾಯಿತು. ಹಣಕಾಸು ಹಾಗೂ ಗೃಹ ಇಲಾಖೆಗೆ ಎರಡೂ ಪಕ್ಷಗಳು ಪಟ್ಟು ಹಿಡಿದಿದ್ದವು. ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ಅವರು ನಡೆಸಿದ ಮಾತುಕತೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲಾಗಿದೆ.

ಸದ್ಯಕ್ಕೆ ಪ್ರಮುಖ ಖಾತೆಗಳಲ್ಲಿ ಒಂದೊಂದು ಹಂಚಿಕೊಳ್ಳಲು ನಿರ್ಧರಿಸಿರುವ ಕಾಂಗ್ರೆಸ್​ ಮತ್ತು ಜೆಡಿಎಸ್​ ಮೊದಲ ಹಂತದ ಸಂಪುಟ ವಿಸ್ತರಣೆಗೆ ಚಾಲನೆ ನೀಡಲಿದೆ. ಮೇ. 30 ಅಥವಾ 31ರಂದು ಜೆಡಿಎಸ್’ನಿಂದ 8 ಹಾಗೂ ಕಾಂಗ್ರೆಸ್’ನಿಂದ 10 ಮಂದಿ ಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಜೆಡಿಎಸ್ ಮತ್ತು ಕಾಂಗ್ರೆಸ್​ ಪಕ್ಷದ ನಡುವೆ ಯಾವೆಲ್ಲ ಖಾತೆಗಳನ್ನು ಹಂಚಿಕೊಳ್ಳಬಹುದಾದ ಸಾಂಭವನೀಯ ಪಟ್ಟಿ ಇಲ್ಲಿದೆ.

ಜೆಡಿಎಸ್​ ಪಕ್ಷಕ್ಕೆ ಸಿಗುವ ಸಂಭಾವ್ಯ ಖಾತೆಗಳು

ಹಣಕಾಸು ಇಲಾಖೆ : ಸಿಎಂ ಎಚ್ ಡಿ ಕುಮಾರಸ್ವಾಮಿ,ಡಿಎಪಿಆರ್, ಗುಪ್ತಚರ

ಕಂದಾಯ ಇಲಾಖೆ : ಎಚ್.ವಿಶ್ವನಾಥ್

ಲೋಕೋಪಯೋಗಿ ಇಲಾಖೆ : ಎಚ್ ಡಿ ರೇವಣ್ಣ

ಪ್ರಾಥಮಿಕ ಶಿಕ್ಷಣ ಹಾಗೂ ಪ್ರೌಢ ಶಿಕ್ಷಣ ಇಲಾಖೆ : ಬಸವರಾಜ್ ಹೊರಟ್ಟಿ

ವೈದ್ಯಕೀಯ ಶಿಕ್ಷಣ ಇಲಾಖೆ : ಡಾ.ಕೆ.ಶ್ರೀನಿವಾಸ್ ಮೂರ್ತಿ

ಕೃಷಿ ಖಾತೆ : ಬಂಡೆಪ್ಪ ಕಾಶೆಂಪೂರ್

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ : ಸಿ.ಎಸ್.ಪುಟ್ಟರಾಜು

ಸಹಕಾರ ಇಲಾಖೆ :ಜಿ.ಟಿ.ದೇವೇಗೌಡ

ಕಾಂಗ್ರೆಸ್ ಪಕ್ಷಕ್ಕೆ ಸಿಗುವ ಸಂಭಾವ್ಯ ಖಾತೆಗಳು

ಗೃಹ ಇಲಾಖೆ : ಡಿಸಿಎಂ ಡಾ.ಜಿ.ಪರಮೇಶ್ವರ್

ಇಂಧನ ಇಲಾಖೆ: ಡಿ.ಕೆ.ಶಿವಕುಮಾರ್

ಬೃಹತ್ ಕೈಗಾರಿಕೆ ಇಲಾಖೆ: ಆರ್.ವಿ.ದೇಶಪಾಂಡೆ

ಜಲ ಸಂಪನ್ಮೂಲ ಇಲಾಖೆ : ಎಂ.ಬಿ.ಪಾಟೀಲ್ ಅಥವಾ ಎಸ್.ಆರ್.ಪಾಟೀಲ್

ಬೆಂಗಳೂರು ಅಭಿವೃದ್ಧಿ ಹಾಗೂ ನಗರಾಭಿವೃದ್ಧಿ ಖಾತೆ: ಕೆ.ಜೆ.ಜಾರ್ಜ್

ಉನ್ನತ ಶಿಕ್ಷಣ ಇಲಾಖೆ: ಎಚ್.ಕೆ.ಪಾಟೀಲ್ ಅಥವಾ ಡಾ.ಕೆ.ಸುಧಾಕರ್

ಆರೋಗ್ಯ ಖಾತೆ: ಯು.ಟಿ.ಖಾದರ್ ಅಥವಾ ಡಾ.ಕೆ.ಸುಧಾಕರ್

ಸಮಾಜ ಕಲ್ಯಾಣ ಇಲಾಖೆ: ಟಿ.ರಘುಮೂರ್ತಿ

ವಸತಿ ಇಲಾಖೆ : ಎಂ.ಕೃಷ್ಣಪ್ಪ

ಅಬಕಾರಿ ಇಲಾಖೆ: ಸತೀಶ್ ಜಾರಕಿಹೊಳಿ

jd-s-mla-h-d-kumaraswamy-and-congress-mla-d-k-688185

ಈ ಖಾತೆ ಹಂಚಿಕೆಯಲ್ಲಿ ಬದಲಾವಣೆ ಆದರೂ ಆಗಬಹುದು ಏಕೆಂದರೆ ಕಾಂಗ್ರೆಸ್​ ಮತ್ತು ಜೆಡಿಎಸ್​ನಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದು ಪಕ್ಷದ ವಿರುದ್ಧ ರೆಬಲ್​ ಆಗುವವರನ್ನು ತಡೆಯಲಿಕ್ಕೆ ಕೊಂಚ ಚೇಂಜ್​ ಮಾಡಿಕೊಂಡರೂ ಅಚ್ಚರಿ ಪಡಬೇಕಿಲ್ಲ.

jds-congress

Please follow and like us:
0
https://kannadadalli.com/wp-content/uploads/2018/05/hd-devegowda-gulam.jpghttps://kannadadalli.com/wp-content/uploads/2018/05/hd-devegowda-gulam-150x100.jpgKannadadalli Editorಸುದ್ದಿgulam nabhi ajad,HD Devegowda,The Cabinet expansion of the dispute with HD Deve Gowda's entry was a messHD ದೇವೇಗೌಡರ ಎಂಟ್ರಿಯಿಂದ ಬಗೆಹರಿದ ಸಚಿವ ಸಂಪುಟ ವಿಸ್ತರಣೆಯ ಕಗ್ಗಂಟು...!!! ಕಳೆದೊಂದು ವಾರದಿಂದ ಕಗ್ಗಂಟಾಗಿದ್ದ ಸಚಿವ ಸಂಪುಟ ವಿಸ್ತರಣೆಯ ಸರ್ಕಸ್​ ಅನ್ನು ಫೈನಲ್​ ಮಾಡುವುದಕ್ಕೆ ಕೊನೆಗೂ ದೇವೇಗೌಡರೇ ಅಖಾಡಕ್ಕೆ ಇಳಿಯಬೇಕಾಯಿತು. ಹಣಕಾಸು ಹಾಗೂ ಗೃಹ ಇಲಾಖೆಗೆ ಎರಡೂ ಪಕ್ಷಗಳು ಪಟ್ಟು ಹಿಡಿದಿದ್ದವು. ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ಅವರು ನಡೆಸಿದ ಮಾತುಕತೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲಾಗಿದೆ. ಸದ್ಯಕ್ಕೆ ಪ್ರಮುಖ ಖಾತೆಗಳಲ್ಲಿ ಒಂದೊಂದು ಹಂಚಿಕೊಳ್ಳಲು...ಕನ್ನಡಿಗರ ವೆಬ್​ ಚಾನೆಲ್​