dunbai kannadigara balagaನಮ್ಮ ನಡಿಗೆ ಸೌಹಾರ್ದದ ಕಡೆಗೆ ಎಂಬ ದ್ಯೇಯ ವಾಕ್ಯದೊಂದಿಗೆ ಇದೆ ಫೆಬ್ರವರಿ ತಿಂಗಳ 2ನೇ ತಾರೀಖಿನಂದು ಶುಕ್ರವಾರ ಸಂಜೆ ದೇರಾ ದುಬೈಯಲ್ಲಿರುವ ಬೆಸ್ಟ್ ವೆಸ್ಟೆರ್ನ್ ಪ್ಲಸ್ ಪರ್ಲ್ ಕ್ರೀಕ್ ಹೋಟೆಲ್ ಸಭಾಂಗಣದಲ್ಲಿ ಗಲ್ಫ್ ಕನ್ನಡಿಗರ ಭಾವೈಕ್ಯತೆಯ ಕೂಟವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ದುಬೈನ ಬೇರೆ ಬೇರೆ ಭಾಗಗಳಲ್ಲಿ ನೆಲೆಸಿರುವ ಕನ್ನಡಿಗರು ಒಂದೆಡೆ ಸೇರಿ ಖುಷಿ ಹಂಚಿಕೊಂಡಿದ್ದಾರೆ.


ಈ ಕಾರ್ಯಕ್ರಮದಲ್ಲಿ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸರ್ವೋತಮ ಶೆಟ್ಟಿಯವರು ಹಾಗೂ ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸುಂಗಂಧರಾಜ್ ಬೇಕಲ್ ಅವರು ಸಹ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ನಮ್ಮ ರಾಜ್ಯದಲ್ಲಿ ಆಚರಿಸುವ ಸಂಕ್ರಾಂತಿ ಹಬ್ಬ ಸೇರಿದಂತೆ ಹೊಸ ವರ್ಷ, ಕ್ರಿಸ್ಮಸ್, ಗಣರಾಜ್ಯೋತ್ಸವ ಹಬ್ಬಗಳನ್ನು ಎಲ್ಲಾ ಕನ್ನಡಿಗರು ಒಂದೆಡೆ ಸೇರಿ ವಿಶೇಷ ರೀತಿಯಲ್ಲಿ ಆಚರಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಯು ಎ ಇ ಯಲ್ಲಿ ನೆಲಸಿರುವ ಕನ್ನಡಿಗರ ಪುಟಾಣಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ್ದು ಈ ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳು ನೃತ್ಯ, ಹಾಡುಗಳನ್ನು ಹಾಡಿ ಮನೋರಂಜನ ಕಾರ್ಯಕ್ರಮವನ್ನು ನೀಡಿದ್ದಾರೆ.

ಯು ಎ ಇ ಯಲ್ಲಿ ನೆಲೆಸಿರುವ ಅನೇಕ ಕನ್ನಡಿಗರು ವಿವಿಧ ಭಾಗಗಳಿಂದ ಬಂದು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ ಈ ಮೂಲಕ ಕನ್ನಡಿಗರ ಐಕ್ಯತೆಗೆ ಸಾಕ್ಷಿಯಾಗಿದ್ದರೆ. ಈ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ಹಾಗೂ ಆಯೋಜಿಸಿದ್ದು ದುಬೈ ಕನ್ನಡಿಗರ ಬಳಗ ವಾಟ್ಸಾಪ್ ಗ್ರೂಪ್ ಅಡ್ಮಿನ್ಸ್ ಗಳಾದ ಶ್ರೀ ಪೀಟರ್ ಜೊಯ್ಸೊನ್, ಶ್ರೀಮತಿ ಯಮುನಾ ಮನೋಜ್ ಕುಮಾರ್, ಶ್ರೀ ರಫೀಕ್ ಅಲಿ ಕೊಡಗು ಹಾಗೂ ನಾಸೀರ್ ಜಮಾದಾರ್.

ದುಬೈ ಕನ್ನಡಿಗರ ಬಳಗ ವಾಟ್ಸಾಪ್ ಗ್ರೂಪ್ ದುಬೈನಲ್ಲಿ ನೆಲೆಸಿರುವ ಕನ್ನಡಿಗರಿಗಾಗಿ ಅನೇಕ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದ್ದು, ಅಲ್ಲಿನ ಕನ್ನಡಿಗರನ್ನು ಒಟ್ಟು ಗೂಡಿಸುವ ಕೆಲಸವನ್ನು ಮಾಡಿಕೊಂಡು ಬರುತ್ತಿದೆ.

dubai kannadigara balagadubai kannadigara balagadubai kannadigara balagadubai kannadigara balaga

Please follow and like us:
0
https://kannadadalli.com/wp-content/uploads/2018/02/collage-2018-02-05.jpghttps://kannadadalli.com/wp-content/uploads/2018/02/collage-2018-02-05-150x100.jpgKannadadalli Editorಅಂತಾರಾಷ್ಟ್ರೀಯಸುದ್ದಿdubai kannadigara balaga,Dubai kannadigas Cultural program,kannadigar balaga,kannadigas in UAE,ದುಬೈ ಕನ್ನಡಿಗರ ಬಳಗ,ಯುಎಇ,ಯುಎಇ ಕನ್ನಡಿಗರ ಬಳಗನಮ್ಮ ನಡಿಗೆ ಸೌಹಾರ್ದದ ಕಡೆಗೆ ಎಂಬ ದ್ಯೇಯ ವಾಕ್ಯದೊಂದಿಗೆ ಇದೆ ಫೆಬ್ರವರಿ ತಿಂಗಳ 2ನೇ ತಾರೀಖಿನಂದು ಶುಕ್ರವಾರ ಸಂಜೆ ದೇರಾ ದುಬೈಯಲ್ಲಿರುವ ಬೆಸ್ಟ್ ವೆಸ್ಟೆರ್ನ್ ಪ್ಲಸ್ ಪರ್ಲ್ ಕ್ರೀಕ್ ಹೋಟೆಲ್ ಸಭಾಂಗಣದಲ್ಲಿ ಗಲ್ಫ್ ಕನ್ನಡಿಗರ ಭಾವೈಕ್ಯತೆಯ ಕೂಟವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ದುಬೈನ ಬೇರೆ ಬೇರೆ ಭಾಗಗಳಲ್ಲಿ ನೆಲೆಸಿರುವ ಕನ್ನಡಿಗರು ಒಂದೆಡೆ ಸೇರಿ ಖುಷಿ ಹಂಚಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸರ್ವೋತಮ ಶೆಟ್ಟಿಯವರು ಹಾಗೂ...ಕನ್ನಡಿಗರ ವೆಬ್​ ಚಾನೆಲ್​