ಅಂದು ನನ್ನ ಹುಟ್ದಬ್ಬ. ಶುಭಾಶಯಗಳ ಹೊಳೆಯೇ ಹರಿದು ಬರುತ್ತಿತ್ತು. ಗೆಳೆಯನ ಮನೆಗೆಂದು ಹೋಗಿದ್ದ ನನಗೆ ಅನಿರೀಕ್ಷಿತವಾದ ಕರೆಯೊಂದು ಬಂದಿತು. ಏನಪ್ಪ ಇದು ಭಾನುವಾರವೂ ನೆಮ್ಮದಿಯಿಂದಿರಲು ಬಿಡುವುದಿಲ್ಲ ಎಂದು ಗೊಣಗುತ್ತಲೇ ಕರೆ ಸ್ವೀಕರಿಸಿದೆ. ಆ ಕಡೆಯ ಧ್ವನಿ ಕಚೇರಿಯ ಮ್ಯಾನೇಜರ್ ನದಾಗಿತ್ತು. ಮ್ಯಾನೇಜರ್ ಮಾತ್ರ ಹುಟ್ದಬ್ಬದ ಶುಭಾಶಯದ ಬದಲು ಅಭಿನಂದನೆಯೆನ್ನುತ್ತಿದ್ದಾರೆ ಎಂದುಕೊಂಡು ಧನ್ಯವಾದ ಎಂದು ಹೇಳಿದ.

ಮಾತು ಮುಂದುವರೆಸಿದ ಮ್ಯಾನೇಜರ್ ನಿನಗ್ಯಾಕೆ ಅಭಿನಂದನೆ ಹೇಳಿದೆ ಎಂದು ಗೊತ್ತಾಯಿತಾ? ಎಂದ. ಅದಕ್ಕೆ ನಾನು ಇಲ್ಲ ಎಂದೆ. ನಿಮಗೆ ಹೇಗೆ ಇಂದು ನನ್ನ ಹುಟ್ದಬ್ಬ ಎಂದು ತಿಳಿಯಿತು? ಎಂದು ತಿರುಗಿ ಕೇಳಿದೆ. ಮ್ಯಾನೇಜರ್, ಒಹ್ ಇಂದು ನಿನ್ನ ಹುಟ್ದಬ್ಬನಾ? ಹಾಗಾದ್ರೆ ನಿನಗೆ ಇಮ್ಮಡಿ ಖುಷಿ ಪಡುವ ಸಮಯ ಎಂದ.

ಏಕೆ ಹೀಗೆ ಹೇಳುತ್ತಿದ್ದಾರೆ? ಎಂದು ತಿಳಿಯದೇ, ಯಾಕೆ ಸರ್ ಹೀಗೆ ಹೇಳುತ್ತಿದ್ದೀರಿ? ನೀವು ನನ್ನ ಹುಟ್ದಬ್ಬಕ್ಕೆ ಶುಭಾಶಯ ಕೋರಲು ಕರೆ ಮಾಡಿದ್ದೀರಿ ಎಂದುಕೊಂಡೆ. ಆದರೆ ನಿಮ್ಮ ಮಾತು ಕೇಳಿ ನನಗೇನೂ ಅರ್ಥವಾಗುತ್ತಿಲ್ಲ. ದಯವಿಟ್ಟು ಸರಿಯಾಗಿ ತಿಳಿಸಿ ಎಂದೆ.

ಮೊದಲು ಹುಟ್ದಬ್ಬದ ಪಾರ್ಟಿ ಕೊಡು ನಂತರ ಹೇಳುತ್ತೇನೆ. ಸರಿ ಸಾರ್ ಇಂದು ಸಂಜೆ ಸಿಗಿ ಕೊಡಿಸುತ್ತೇನೆ. ನನಗೆ ನಿನ್ನ ಪಾರ್ಟಿ ಬೇಡ ಮೊದಲು ನೀನು ಪುಣೆಗೆ ಹೊರಡಲು ರೆಡಿಯಾಗು. ಆಫೀಸ್ ಕೆಲಸದ ನಿಮಿತ್ತ ಟೀಮ್ ಲೀಡರ್ ಆಗಿ ನೇಮಕಗೊಂಡಿದ್ದೀಯಾ. ಹಾಗಾಗಿ ನಾಳೆ ಬೆಳಗ್ಗೆಯೇ ನೀನು ಪುಣೆಯಲ್ಲಿರಬೇಕು ಎಂದ ಪುಣ್ಯಾತ್ಮ.

ಇದು ಅವಸರದ ಅವಶ್ಯಕತೆ. ಹಾಗಾಗಿ ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡ. ಇಂದು ರಾತ್ರಿಯೇ ಪುಣೆಯನ್ನು ತಲುಪು. ಕ್ಷಣ ಹೊತ್ತು ಕಕ್ಕಾಬಿಕ್ಕಾಯಂತಾಗಿ ಧನ್ಯೋಸ್ಮಿ ಎಂದಷ್ಟೆ ಹೇಳಿದೆ. ಈ ವಿಚಾರವನ್ನು ಕೇಳಿದ ನಾನು ನಿಜಕ್ಕೂ ಆಕಾಶದಲ್ಲಿ ಹಾರಾಡುತ್ತಿದ್ದೆ.

ಆದರೆ ನಾನು ಅದುವರೆಗೆ ಪುಣೆಯ ಹೆಸರನ್ನು ಮಾತ್ರ ಕೇಳಿದ್ದ ಒಮ್ಮೆಯೂ ಅಲ್ಲಿಗೆ ಹೋಗಿರಲಿಲ್ಲ. ಅಲ್ಲಿ ನನ್ನ ಪರಿಚಯದವರು ಯಾರೂ ಇರಲಿಲ್ಲ. ಆದರೂ ಧೈರ್ಯ ಮಾಡಿ ವಿಮಾನದಲ್ಲಿ ಹಾರಿ ಹೊಸ ಊರು ಸೇರಿದೆ. ಹಿಂದಿ ಭಾಷೆಯನ್ನು ಸುಟ್ಟುಕೊಂಡು ತಿನ್ನಲೂ ಸಹ ಬರುತ್ತಿರಲಿಲ್ಲ. ಹೊಸ ಊರು, ಹೊಸ ಜನರ ನೆಲದಲ್ಲಿ ವಿಳಾಸ ಅರಸಿ ತಲುಪಬೇಕಾದ ಸ್ಥಳ ತಲುಪಿದೆ. ಯಾವುದೋ ಒಂದು ಹೋಟೆಲ್ ನಲ್ಲಿ ಉಳಿದುಕೊಂಡೆ. ಆ ಹೋಟೆಲ್ ನ ಸೊಳ್ಳೆ ಸಂಗೀತ ಗಾನದ ಮಧ್ಯೆ, ಮಲಗಲು ಮಂಚವೂ ಸಿಗಲಿಲ್ಲ, ಹೊದೆಯಲು ಕೂಡ ಏನೂ ಇರಲಿಲ್ಲ. ಅಲ್ಲಿ ಇದ್ದದ್ದು, ಒಂದು ಚಾದರ ಮಾತ್ರ.

ಹಾಗೂ ಹೀಗೂ ಸೂರ್ಯ ರೂಮಿನ ಒಳಗೆ ಪ್ರವೇಶ ಮಾಡಿದ. ಮ್ಯಾನೇಜರ್ ಹೇಳಿದಂತೆ ಕಂಪನಿಯ ಹೊಸ ಆಫೀಸ್ ತಲುಪಿದೆ. ಆಫೀಸ್ ನಲ್ಲಿ ಒಂದಷ್ಟು ಫಾರ್ಮಾಲಿಟೀಸ್ ನಡುವೆ ಹುಟ್ದಬ್ಬ ಕಳೆದುಹೋಗಿತ್ತು. ಆದರೆ ಹುಟ್ದಬ್ಬಕ್ಕೆ ನೀಡಿದ ಉಡುಗೊರೆ ಮಾತ್ರ ಇನ್ನೂ ನೆನಪಿನ ಬುತ್ತಿಯಲ್ಲಿ ಹಸಿಯಾಗಿ ಉಳಿದಿದೆ.

-ವಿನಾಯಕ ಭಾಗ್ವತ, ನೀಲಕೋಡು

Please follow and like us:
0
https://kannadadalli.com/wp-content/uploads/2018/07/surprise-happy-birthday-gifts-5-810x430-e1530861757179.jpghttps://kannadadalli.com/wp-content/uploads/2018/07/surprise-happy-birthday-gifts-5-810x430-150x100.jpgSowmya KBWhatsApp Storysಅಂದು ನನ್ನ ಹುಟ್ದಬ್ಬ. ಶುಭಾಶಯಗಳ ಹೊಳೆಯೇ ಹರಿದು ಬರುತ್ತಿತ್ತು. ಗೆಳೆಯನ ಮನೆಗೆಂದು ಹೋಗಿದ್ದ ನನಗೆ ಅನಿರೀಕ್ಷಿತವಾದ ಕರೆಯೊಂದು ಬಂದಿತು. ಏನಪ್ಪ ಇದು ಭಾನುವಾರವೂ ನೆಮ್ಮದಿಯಿಂದಿರಲು ಬಿಡುವುದಿಲ್ಲ ಎಂದು ಗೊಣಗುತ್ತಲೇ ಕರೆ ಸ್ವೀಕರಿಸಿದೆ. ಆ ಕಡೆಯ ಧ್ವನಿ ಕಚೇರಿಯ ಮ್ಯಾನೇಜರ್ ನದಾಗಿತ್ತು. ಮ್ಯಾನೇಜರ್ ಮಾತ್ರ ಹುಟ್ದಬ್ಬದ ಶುಭಾಶಯದ ಬದಲು ಅಭಿನಂದನೆಯೆನ್ನುತ್ತಿದ್ದಾರೆ ಎಂದುಕೊಂಡು ಧನ್ಯವಾದ ಎಂದು ಹೇಳಿದ. ಮಾತು ಮುಂದುವರೆಸಿದ ಮ್ಯಾನೇಜರ್ ನಿನಗ್ಯಾಕೆ ಅಭಿನಂದನೆ ಹೇಳಿದೆ ಎಂದು ಗೊತ್ತಾಯಿತಾ? ಎಂದ. ಅದಕ್ಕೆ ನಾನು...ಕನ್ನಡಿಗರ ವೆಬ್​ ಚಾನೆಲ್​