ಮನುಷ್ಯನ ಮನಸ್ಸಿನಲ್ಲಿ ಮೂಡಿದ ಭಾವನೆಯನ್ನು ಹಸ್ತ ಕೌಶಲದ ಮೂಲಕ ವರ್ಣನಾತ್ಮಕವಾಗಿ ಚಿತ್ರಿಸಿರುವ ವರ್ಣಚಿತ್ರಗಳನ್ನು ನೋಡುತ್ತಿದ್ದರೆ ಎಂತವರನ್ನು ಮನಸೋರೆಗೊಳ್ಳುವಂತೆ ಮಾಡುತ್ತದೆ. ಇವರ ಮನಸ್ಸಿನಾಳದಲ್ಲಿ ಹುದುಗಿ ಹೋಗಿರುವ ನೋವು, ಮನಬಿಚ್ಚಿ ನಕ್ಕಾಗ ನಲಿವು, ಕಂಡ ಕನಸುಗಳ ಕನವರಿಕೆ, ಆಶಾಕಿರಣವಾಗಿ ಮೂಡಬೇಕಿದ್ದ ಆಶಾಭಾವನೆಗಳನ್ನು ಇವರು ಹಂಚಿಕೊಳ್ಳುವುದು ವರ್ಣಚಿತ್ರಗಳ ಮೂಲಕವೇ.. ಎಲ್ಲಾದಕ್ಕೂ ಚಿತ್ತವೇ ಕಾರಣ.

ಕಲಾವಿದ ಈ ಚಿತ್ರದ ಸೃಷ್ಟಿಕರ್ತನಾದರೆ ಅದನ್ನು ವೀಕ್ಷಕ, ಅಥವಾ ಗ್ರಾಹಕ ಅದರ ಒಡಯನಾಗಿರುತ್ತಾನೆ.. ಇವರು ರಚಿಸಿರುವ ಚಿತ್ರಕಲೆಗಳು ಮನಮೋಹಕವಾಗಿರುತ್ತವೆ,… ಆದರೆ ನಿಜಾರ್ಥದಲ್ಲಿ ಅವರ ಜೀವನ ಚರಿತ್ರೆಯನ್ನು ಈ ವರ್ಣ ಚಿತ್ರಗಳು ತಿಳಿಸುತ್ತ  ಎಲ್ಲಾರನ್ನು ಸೆಳೆಯುತ್ತದೆ.

ಉತ್ತರ ಭಾರತದ ಬಿಹಾರದ ಮಿಥಿಲಾ ಪ್ರದೇಶದಲ್ಲಿ ಮಹಿಳೆಯರು 1500 ವರ್ಷಗಳಿಂದಲೂ ಹೆಚ್ಚು ಕಾಲ ದಬ್ಬಾಳಿಕೆಯ ಜೀವನವನ್ನು ನಡೆಸುತ್ತಾ ಬಂದವರು.. ಅವರ ನಿಗ್ರಹಿಸಿದ ಆಸೆಗಳು, ಕನಸುಗಳು, ಅವರ ಜನ್ಮ, ಮದುವೆ, ಮತ್ತು ಜೀವನದ ಚಕ್ರಗಳಂತಹ ವಿವಿಧ ಘಟನೆಗಳನ್ನು ಏಕಾಗ್ರತೆ ಮತ್ತು ತನ್ಮಯತೆಯಿಂದ ಚಿತ್ರಿಸುತ್ತಾರೆ. ಇವರ ಕಲಾ ಕುಂಚದಲ್ಲಿ ಮೂಡಿಬಂದ ಚಿತ್ರಕಲೆಗಳು ನೋಡುಗರ ಮನಸ್ಸನ್ನು ಅರಳಿಸುತ್ತದೆ.

ಈ ವರ್ಣಚಿತ್ರಗಳನ್ನು ಮಧುಬಾನಿ ಚಿತ್ರಕಲೆ ಅಥವಾ ಮಿಥೀಲಿ ಚಿತ್ರಕಲೆ ಎಂದು ಕರೆಯುತ್ತಾರೆ.. ಭಾರತದ ಬಿಹಾರ ರಾಜ್ಯದಲ್ಲಿ ಮೈಥಿಲಿ ಎಂಬ ಪುಟ್ಟ ಗ್ರಾಮದಲ್ಲಿ ಹುಟ್ಟಿಕೊಂಡಿತ್ತು. ಶತಶತಮಾನಗಳಿಂದ ಈ ಜಾನಪದ ಕಲೆ ಇದ್ದಿತ್ತಾದರೂ ಕಳೆದ ಕೆಲವು ದಶಕಗಳಿಂದ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮನ್ನಣೆ ಪಡೆದಿದೆ.

ಈ ಕಲೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ.. ಮಧುಬಾನಿ ಚಿತ್ರಕಲೆ.. ಉತ್ತರ ಭಾರತದ ಜನಪದ ಚಿತ್ರಕಲೆಯಾಗಿ ಹೆಚ್ಚು ಪ್ರಸಿದ್ಧಿ ಪಡೆದಿದೆ.. ಈ ಗ್ರಾಮದ ಮಹಿಳೆಯರು ತಮ್ಮ   ನೋವುಗಳು, ಮನಸ್ಸಿನ ಭಾವನೆಗಳು, ಆಲೋಚನೆಗಳು, ಮತ್ತು ತಮ್ಮ ಕನಸುಗಳನ್ನು ಯಾರೊಂದಿಗೂ ವ್ಯಕ್ತಪಡಿಸಲು ಸಾಧ್ಯವಾಗುತ್ತಿರಲಿಲ್ಲ.

ತಮ್ಮ ವೇಧನೆಯನ್ನು ಯಾರೊಂದಿಗಾದರೂ ಹೇಳಿಕೊಂಡು ಮನಸ್ಸನ್ನು ಹಗುರ ಮಾಡಿಕೊಳ್ಳಬೇಕು ಎಂದಿದ್ದರೂ ಅದಕ್ಕೆಲ್ಲಾ ಮನೆಯ ಮಂದಿಗಳು, ಪರಿಸ್ಥಿತಿಗಳು ಅವಕಾಶ ಕೊಡುತ್ತಿರಲಿಲ್ಲ.. ಆಗಲೇ ಹುಟ್ಟಿಕೊಂಡಿದ್ದು ಹೊಸ ಮಾರ್ಗ ಮನೆಯ ಗೋಡೆಗಳ ಮೇಲೆ, ನೆಲದ ಮೇಲೆ ಚಿತ್ರಿಸುವುದು..

ಆರಂಭದ ದಿನಗಳಲ್ಲಿ ಮಹಿಳೆಯರು ವರ್ಣಗಳ ಮೂಲಕ ತಮ್ಮ ವೈಯಕ್ತಿಕ ಬದುಕನ್ನು ಬಿಂಬಿಸುತ್ತಿತ್ತು.. ಕಾಲ ಕಳೆದಂತೆ ಹಬ್ಬ ಹರಿದಿನಗಳಲ್ಲಿ, ಶುಭ ಸಮಾರಂಭಗಳಲ್ಲಿ ಅಥವಾ ವಿಶೇಷ ಸಂಧರ್ಭಗಳಲ್ಲಿ ವರ್ಣಚಿತ್ರಗಳನ್ನು ಚಿತ್ರಿಸುವುದು ರೂಡಿಯಾಯಿತು. ಇಷ್ಟೇ ಅಲ್ಲದೇ ಪುರಾತನ ಕಾಲದ ಮದುವೆಯ ಆಚರಣೆಗಳು, ಧಾರ್ಮಿಕ ಆಚರಣೆಗಳು, ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು, ಪುರಾಣದ ಕಥೆಗಳ ದೃಶಗಳನ್ನು ಚಿತ್ರಿಸುತ್ತ, ವರ್ಣ ಚಿತ್ರಗಳಿಗೆ ಮೆರಗು ನೀಡುತ್ತಾ ಬದಲಾವಣೆ ತಂದರು.

ಮಧುಬಾನಿ ವರ್ಣ ಚಿತ್ರಗಳು ಆ ಕಾಲದ ಮಂಗಳಕರ ಚಿತ್ರಕಲೆ, ಸಂಸ್ಕøತಿ ಮತ್ತು ಸಂಪ್ರದಾಯವನ್ನು ಹೆಚ್ಚಾಗಿ ಪ್ರತಿಬಿಂಬಿಸುತ್ತಿತ್ತು.. ಹಿಂದಿನ ಕಾಲದಲ್ಲಿ ಗೋಡೆ ಹಾಗೂ ನೆಲದ ಮೇಲೆ ಬಿಡಿಸುತ್ತಿದ್ದ ವರ್ಣ ಚಿತ್ರಗಳನ್ನು ಇಂದೂ ಬಟ್ಟೆ, ಕಾಗದದ, ಕ್ಯಾನ್ವಸ್ ಮೇಲೆ ಚಿತ್ರಿಸುವುದರಿಂದ ಹೆಚ್ಚು ಪ್ರಖ್ಯಾತಿ ಹೊಂದಿರುವುದಲ್ಲದೇ ಪುರಾತನ ಕಾಲದಿಂದ ಬಂದ ಈ ಕಲೆಯೂ ಈಗ ಆಧುನಿಕ ಕಾಲದ ಸಮಸ್ಯೆಗಳ ಪ್ರತಿಫಲವಾಗಿ ವರ್ಣಚಿತ್ರಗಳು ಪ್ರತಿಬಿಂಬಿಸುತ್ತಾ ಸಮಾಜಕ್ಕೆ ಒಂದು ಒಳ್ಳೆಯ ವಿಷಯವನ್ನು ತಿಳಿಸುವ ಉದ್ದೇಶ ಹೊಂದಿದೆ.

ಸದ್ಯದ ಪರಿಸ್ಥಿತಿಯಲ್ಲಿ ನಡೆಯುತ್ತಿರುವ ಸಮಾಜದ ಹಳ್ಳಿಯ ಜೀವನ, ಪ್ರವಾಹ, ಭಯೋತ್ಪಾದನೆ, ಜಾಗತೀಕ ತಾಪಮಾನ, ವರದಕ್ಷಿಣೆ, ಅತ್ಯಾಚಾರ, ಹೆಣ್ಣಿನ ಶಿಶುಹತ್ಯೆ, ವೈಧ್ಯಕೀಯ ಆರೈಕೆ, ಬಾಲಕ ಬಾಲಕಿಯರ ಶಿಕ್ಷಣದಂತ ಸ್ರ್ತೀವಾದಿ ಸಮಸ್ಯಗೆಳು, ಹಾಗೂ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಘಟನೆಗಳ ವಾಸ್ತವ ಪ್ರಪಂಚವನ್ನು ವರ್ಣಚಿತ್ರಗಳ ಮೂಲಕ ತೆರೆದಿಡುತ್ತಾ ಸಮಾಜದಲ್ಲಿ ಅರಿವು ಮೂಡಿಸುತ್ತಿದೆ.

ಈ ಕಲೆಯ ಮತ್ತೊಂದು ವಿಶೇಷತೆ ಎಂದರೆ ವರ್ಣ ಚಿತ್ರಕಲೆಯನ್ನು ಮರಗಳ ಮೇಲೆ ಚಿತ್ರಿಸುವುದು.. ಇದಕ್ಕೆ ಕಾರಣ  ಮರಗಳ ಮೇಲೆ ವಿಭಿನ್ನ ರೀತಿಯ ಚಿತ್ರಗಳನ್ನು ಚಿತ್ರಿಸುವುದರಿಂದ ಮರ ಕಡೆಯುವುದನ್ನು ತಡೆಗಟ್ಟಬಹುದಾದ ಮಾರ್ಗವಾಗಿ ಬಳಸುತ್ತಿದ್ದಾರೆ. ಸರಳವಾದ ವರ್ಣಚಿತ್ರಗಳು ಜನರನ್ನು ಮರಗಳು ಕತ್ತರಿಸಿದಂತೆ ತಡೆಯುತ್ತದೆ.

ಮೊದಲೆಲ್ಲ ಚಿತ್ರಿಸುವುದಕ್ಕೆ ನೈಸರ್ಗಿಕ ಬಣ್ಣಗಳು ಹಾಗೂ ಬಿದಿರಿನಿ ಕೋಲಿನಿಂದ ತಯಾರಿಸಿದ ಬ್ರಷ್‍ಗಳನ್ನು ಬಳಸುತ್ತಿದ್ದರು. ಇದೀಗ ಆಧುನಿಕ ಬ್ರಷ್‍ಗಳು,ಸಿಂಥೇಟಿಕ್ ಬಣ್ಣಗಳನ್ನು  ಬಳಸುತ್ತಾರೆ. ಚಿತ್ರದ ನಂತರ ಉಳಿದ ಜಾಗವನ್ನು ಬಿಡದೆ ಪ್ರಾಣಿ ಪಕ್ಷಿಗಳು, ಹೂ ಹಣ್ಣುಗಳನ್ನು ಚಿತ್ರಿಸಿ ಮತ್ತಷ್ಟು ಕಳೆಕಟ್ಟುವಂತೆ ಮಾಡುತ್ತಾರೆ.. ಇನ್ನೂ ಮಕ್ಕಳಾಗಿಯೇ ಪ್ರಾಣಿ ಪಕ್ಷಿಗಳು, ಮೀನು, ಆಟಿಕೆಗಳ ಮಾಹಿತಿ, ಹೀಗೆ ಮತ್ತಿತ್ತರ ಚಿತ್ರಗಳಿಂದ ಮಕ್ಕಳನ್ನು ಆಕರ್ಷಿಸುತ್ತಾರೆ.

ಹಿಂದಿನ ಬಹು ತಲೆಮಾರುಗಳಿಂದ ಈ ಕಲೆಯನ್ನು ತಮ್ಮ ಹೆಣ್ಣು ಮಕ್ಕಳಿಗೆ ಹೆಚ್ಚಾಗಿ ಅಭ್ಯಾಸಿಸುತ್ತಾ ಬಂದಿದ್ದಾರೆ. ಇದೀಗ ಬಿಹಾರ ರಾಜ್ಯದೆಲ್ಲೆಡೆ ವರ್ಣ ಚಿತ್ರಕಲೆಗಳ ತರಬೇತಿ ಶಾಲೆಯನ್ನು ಕೆಲವು ಸಂಘ ಸಂಘಟನೆಗಳು ಬಾಗಿಲು ತೆರೆದಿದ್ದಾರೆ. ಗೃಹಿಣಿಯರು, ವಯಸ್ಕ ಮಹಿಳೆಯರು, ನಿರುಧ್ಯೋಗ ಸಮಸ್ಯೆಯನ್ನು ಎದುರಿಸುತ್ತಿರುವ ಮಹಿಳೆಯರು ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆದುಕೊಂಡು ವರ್ಣ ಚಿತ್ರಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಇನ್ನು ಕೆಲವು ಮಹಿಳೆಯರು ತಮ್ಮ ಕುಟುಂಬಗಳಲ್ಲಿನ ಹಳೆಯ ಮಹಿಳೆಯರಿಂದ ಸಾಂಪ್ರದಾಯಿಕ ರೀತಿಯಲ್ಲಿ ಚಿತ್ರಿಸುವುದರಲ್ಲಿ ಪರಿಣಿತಿ ಹೊಂದಿದ್ದಾರೆ.

ಪ್ರಶಾಂತ್.ಎಸ್
ಪ್ರಶಾಂತ್.ಎಸ್
Please follow and like us:
0
https://kannadadalli.com/wp-content/uploads/2017/12/d3e9dfd0a80e6f5c06fbfd9b83b476d7-madhubani-paintings-madhubani-art-546x683.jpghttps://kannadadalli.com/wp-content/uploads/2017/12/d3e9dfd0a80e6f5c06fbfd9b83b476d7-madhubani-paintings-madhubani-art-150x100.jpgKannadadalli EditorಮಾಹಿತಿಲೇಖನThe Madhubani art of mirror man's feelings,ಚಿತ್ರ ಕಲೆ,ಮಧುಬಾನಿ ಕಲೆಮನುಷ್ಯನ ಮನಸ್ಸಿನಲ್ಲಿ ಮೂಡಿದ ಭಾವನೆಯನ್ನು ಹಸ್ತ ಕೌಶಲದ ಮೂಲಕ ವರ್ಣನಾತ್ಮಕವಾಗಿ ಚಿತ್ರಿಸಿರುವ ವರ್ಣಚಿತ್ರಗಳನ್ನು ನೋಡುತ್ತಿದ್ದರೆ ಎಂತವರನ್ನು ಮನಸೋರೆಗೊಳ್ಳುವಂತೆ ಮಾಡುತ್ತದೆ. ಇವರ ಮನಸ್ಸಿನಾಳದಲ್ಲಿ ಹುದುಗಿ ಹೋಗಿರುವ ನೋವು, ಮನಬಿಚ್ಚಿ ನಕ್ಕಾಗ ನಲಿವು, ಕಂಡ ಕನಸುಗಳ ಕನವರಿಕೆ, ಆಶಾಕಿರಣವಾಗಿ ಮೂಡಬೇಕಿದ್ದ ಆಶಾಭಾವನೆಗಳನ್ನು ಇವರು ಹಂಚಿಕೊಳ್ಳುವುದು ವರ್ಣಚಿತ್ರಗಳ ಮೂಲಕವೇ.. ಎಲ್ಲಾದಕ್ಕೂ ಚಿತ್ತವೇ ಕಾರಣ. ಕಲಾವಿದ ಈ ಚಿತ್ರದ ಸೃಷ್ಟಿಕರ್ತನಾದರೆ ಅದನ್ನು ವೀಕ್ಷಕ, ಅಥವಾ ಗ್ರಾಹಕ ಅದರ ಒಡಯನಾಗಿರುತ್ತಾನೆ.. ಇವರು ರಚಿಸಿರುವ ಚಿತ್ರಕಲೆಗಳು ಮನಮೋಹಕವಾಗಿರುತ್ತವೆ,… ಆದರೆ...ಕನ್ನಡಿಗರ ವೆಬ್​ ಚಾನೆಲ್​