ಬೇಬಿ ಫ್ಯಾಕ್ಟರಿಸ್​ಶಾಕಿಂಗ್​…! ಕೋಳಿ ಫಾರಂ ರೀತಿ ಈ ದೇಶದಲ್ಲಿ ಬೇಬಿ ಫಾರಂಗಳಿವೆ – ದುಡ್ಡಿಗಾಗಿ ಮಕ್ಕಳನ್ನು ಹುಟ್ಟಿಸಿ ಮಾರುವ ಫ್ಯಾಕ್ಟರಿಗಳಿವೆ..! ನಮ್ಮ ದೇಶದಲ್ಲಿ ಕೋಳಿ ಫಾರಂ ಮೇಕೆ ಫಾರಂಗಳನ್ನು ನೋಡೊದ್ದೇವೆ ಇಲ್ಲಿ ಕೋಳಿ ಮೇಕೆಗಳನ್ನು ಚನ್ನಾಗಿ ಸಾಕಿ ನಂತರ ಕಟುಕರಿಗೆ ಮಾರಾಟ ಮಾಡುತ್ತಾರೆ. ಆದರೆ ಈ ದೇಶದಲ್ಲಿ ಬೇಬಿ ಫ್ಯಾಕ್ಟರಿಗಳೇ ತಲೆ ಎತ್ತಿವೆಯಂತೆ. ಇವುಗಳು ಮಾಡುವುದು ಮಕ್ಕಳನ್ನು ಹುಟ್ಟಿಸಿ ಅವುಗಳನ್ನು ಮಕ್ಕಳಿಲ್ಲದವರಿಗೆ ಮಾರಾಟ ಮಾಡುವ ದಂಧೆ ಎಂದರೆ ನಿಮಗೆ ಶಾಕ್​ ಆಗುತ್ತದೆ ಅಲ್ಲವೇ..!

ಹೌದು… ನೈಜೀರೀಯ ದೇಶದಲ್ಲಿ ಮಕ್ಕಳನ್ನು ಹುಟ್ಟಿಸಿ ಮಾರಾಟ ಮಾಡುವ ಬಹುದೊಡ್ಡ ದಂದೆಯೇ ನಡೆಯುತಿದ್ದು ಈ ಕೆಲಸವನ್ನು ರಾಜರೋಷವಾಗಿ ಅಲ್ಲಿನ ಕೆಲವರು ಮಾಡುತಿದ್ದಾರೆ.

ಅಪ್ರಾಪ್ತ ಯುವತಿಯರೇ ಇವರ ಟಾರ್ಗೆಟ್​…!

ಈ ದಂದೆಯಲ್ಲಿ ಹೆಚ್ಚಾಗಿ ಬಳಸಿಕೊಳ್ಳುತ್ತಿರುವುದು ಅನಾಥ ಹೆಣ್ಣು ಮಕ್ಕಳನ್ನು ಅದರಲ್ಲಿಯೂ ಅನಾಥಲಾಯ ಮತ್ತಿತರೆಡೆ ಸಿಗುವಂತಹ ಅಪ್ರಪ್ತಾ ಹೆಣ್ಣು ಮಕ್ಕಳನ್ನು ಇಲ್ಲಿಗೆ ಕರೆತಂದು ಅವರಿಗೆ ಅನೈತಿಕವಾಗಿ ಗರ್ಭ ಧರಿಸುವಂತೆ ಮಾಡಿ ನಂತರ ಅವರಿಗೆ ಹುಟ್ಟಿದ ಮಕ್ಕಳನ್ನು ಮಕ್ಕಳಿಲ್ಲದವರಿಗೆ ಲಕ್ಷ ಲಕ್ಷ ರೂ ಹಣಕ್ಕಾಗಿ ಮಾರಾಟ ಮಾಡುವ ದಂದೆ ಎಗ್ಗಿಲ್ಲದೇ ನಡೆಯುತ್ತಿರುವುದು ನಾಗರೀಕ ಸಮಾಜ ತಲೆ ತಗ್ಗಿಸುವಂತಹ ವಿಷಯ.

ಸುಮಾರು 13 ರಿಂದ 18 ವರ್ಷದ ಯುವತಿಯರೇ ಈ ಕರಾಳ ಕೂಪಕ್ಕೆ ಬಲಿಯಾಗುತ್ತಿರುವ ಯುತಿಯರು ಎಂದು ತಿಳಿದು ಬಂದಿದೆ, ಈ ಕೆಲಸಕ್ಕೆ ಮಹಿಳೆಯರು ತಾವಾಗಿಯೇ ಒಪ್ಪಿಕೊಂಡು ಬಂದರೆ ಅವರಿಗೆ ಸ್ವಲ್ಪ ಹಣವನ್ನಾದರೂ ನೀಡುತ್ತಾರೆ ಆದರೆ ಈ ಕೆಲಸಕ್ಕೆ ವಿರೋಧಿಸುವವರನ್ನು ಹಿಂಸಿಸುವ ಮೂಲಕ ಈ ಕೆಲಸಕ್ಕೆ ತಳ್ಳುತ್ತಾರೆ.

ಕೃಪೆ:Al Jazeera English

ಬೇಬಿ ಫ್ಯಾಕ್ಟರಿ ತಲೆ ಎತ್ತಲು ಕಾರಣ…?

ನೈಜೀರಿಯಾದಲ್ಲಿ ಒಮ್ಮೆ ಗರ್ಭವತಿಯಾದರೆ ಯಾವುದೇ ಕಾರಣಕ್ಕೂ ಅಭಾರ್ಷನ್​ ಮಾಡಿಸುವಂತಿಲ್ಲ, ಅಭಾರ್ಷನ್​ ಮಾಡಿಸುವುದು ಇಲ್ಲಿ ಕಾನೂನು ರೀತಿಯ ಅಪರಾಧ, ಇಲ್ಲಿನ ಮಕ್ಕಳಿಲ್ಲದ ದಂಪತಿಗಳು ಇಂತಹ ಬೇಬಿ ಫಾರ್ಮ್ ನಿಂದ ಮಕ್ಕಳನ್ನು ಕೊಂಡುಕೊಳ್ಳಲು ಆಸಕ್ತಿ ಹೊಂದಿದ್ದಾರೆ. ಈ ಕಾನೂನನ್ನು ದುರುಪಯೋಗ ಮಾಡಿಕೊಳ್ಳುವ ಮೂಲಕ ಇಲ್ಲನ ಕೆಲವರು ಮಕ್ಕಳನ್ನು ಹುಟ್ಟಿಸಿ ಮಾರುವ ಫ್ಯಾಕ್ಟರಿಗೆ ಅಮಾಯಕ ಹೆಣ್ಣು ಮಕ್ಕಳನ್ನು ಕರೆತಂದು ಅವರಿಗೆ ಹುಟ್ಟಿದ ಮಕ್ಕಳನ್ನು ಮಾರಾಟ ಮಾಡುವ ಮೂಲಕ ಹಣ ಮಾಡುತಿದ್ದಾರೆ.

ಭಾರತದಲ್ಲಿಯೂ ನಡೆಯುತ್ತಿದೆ ಮಕ್ಕಳ ಮಾರಾಟ ದಂದೆ..!

ಈಗಾಗಲೇ ಭಾರತದಲ್ಲಿ ಬಾಡಿಗೆ ಗರ್ಭಧಾರಣೆ ಮತ್ತು ಮಕ್ಕಳ ಮಾರಾಟ ಜಾಲಗಳು ಕಾರ್ಯ ನಿರ್ವಹಿಸುತಿದ್ದು ಅವುಗಳು ಕೂಡ ಮಕ್ಕಳಿಲ್ಲದವರಿಗೆ ಮಕ್ಕಳನ್ನು ಮಾರಾಟ ಮಾಡುವ ಮೂಲಕ ಹಣ ಮಾಡುತಿದ್ದಾರೆ. ಆದರೆ ಭಾರತದಲ್ಲಿ ಇದಾವುದಕ್ಕೂ ಅವಕಾಶ ಇಲ್ಲದಿದ್ದರೂ ಕೂಡ ತೆರೆ ಮರೆಯಲ್ಲಿ ಇಂತಹ ಕೆಲಸಗಳು ನಡೆಯುತಿದ್ದು ಆಗಾಗ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿರುತ್ತವೆ.

Please follow and like us:
0
https://kannadadalli.com/wp-content/uploads/2018/02/collage-2018-02-08-1-1.jpghttps://kannadadalli.com/wp-content/uploads/2018/02/collage-2018-02-08-1-1-150x100.jpgKannadadalli Editorಅಂತಾರಾಷ್ಟ್ರೀಯಸುದ್ದಿbaby factory,baby form,There are baby farms in this country as a chicken farm,ಬೇಬಿ ಫಾರಂ,ಬೇಬಿ ಫ್ಯಕ್ಟರಿಸ್​,ಬೇಬಿ ಫ್ಯಾಕ್ಟರಿಶಾಕಿಂಗ್​…! ಕೋಳಿ ಫಾರಂ ರೀತಿ ಈ ದೇಶದಲ್ಲಿ ಬೇಬಿ ಫಾರಂಗಳಿವೆ - ದುಡ್ಡಿಗಾಗಿ ಮಕ್ಕಳನ್ನು ಹುಟ್ಟಿಸಿ ಮಾರುವ ಫ್ಯಾಕ್ಟರಿಗಳಿವೆ..! ನಮ್ಮ ದೇಶದಲ್ಲಿ ಕೋಳಿ ಫಾರಂ ಮೇಕೆ ಫಾರಂಗಳನ್ನು ನೋಡೊದ್ದೇವೆ ಇಲ್ಲಿ ಕೋಳಿ ಮೇಕೆಗಳನ್ನು ಚನ್ನಾಗಿ ಸಾಕಿ ನಂತರ ಕಟುಕರಿಗೆ ಮಾರಾಟ ಮಾಡುತ್ತಾರೆ. ಆದರೆ ಈ ದೇಶದಲ್ಲಿ ಬೇಬಿ ಫ್ಯಾಕ್ಟರಿಗಳೇ ತಲೆ ಎತ್ತಿವೆಯಂತೆ. ಇವುಗಳು ಮಾಡುವುದು ಮಕ್ಕಳನ್ನು ಹುಟ್ಟಿಸಿ ಅವುಗಳನ್ನು ಮಕ್ಕಳಿಲ್ಲದವರಿಗೆ ಮಾರಾಟ ಮಾಡುವ ದಂಧೆ ಎಂದರೆ ನಿಮಗೆ ಶಾಕ್​...ಕನ್ನಡಿಗರ ವೆಬ್​ ಚಾನೆಲ್​