ಸಾಮಾನ್ಯವಾಗಿ ಈಗಿನ ಜನರಂತು ತುಂಬಾನೆ ಬ್ಯುಸಿ. ಯಾಕಂದ್ರೆ, ತಮಗಾಗಿ ಇರುವ ಕೆಲಸದ ಒತ್ತಡಗಳ ನಡುವೆ ಈ ಶುದ್ಧೀಕರಣವನ್ನೇ ಮರೆತುಬಿಡುತ್ತಾರೆ. ಅದರಲ್ಲೂ ತಲೆ ಸ್ನಾನ ಮಾಡೋದು ಅಂದ್ರೆ ಅದೆಷ್ಟೋ ಮಂದಿಗೆ ಕಷ್ಟ..

ಕೆಲಸದ ಒತ್ತಡದಲ್ಲಿ ಕೂದಲನ್ನು ಸರಿಯಾಗಿ ತೊಳೆಯಲು ಸಮಯವಿರೋದಿಲ್ಲ. ಪಾರ್ಟಿಗೆ ಹೋಗಬೇಕು. ಆದ್ರೆ ತಲೆ ಸ್ನಾನ ಮಾಡಿಲ್ಲ ಎಂದು ಗೊಣಗುವವರಿದ್ದಾರೆ. ಅಂಥವರಿಗೆ ಇಲ್ಲೊಂದು ಖುಷಿ ಸುದ್ದಿ ಇದೆ.

ಹೌದಾ.. ? ಅದೇನು ಅಂತೀರಾ..? ಮುಂದೆ ಓದಿ…ಬ್ಯೂಟಿ ತಜ್ಞ ಶಹನಾಜ್ ಹುಸೇನ್ ಕಂಪನಿ ನೀರಿನ ಅಗತ್ಯವಿಲ್ಲದೆ ಕೂದಲ ಸ್ವಚ್ಛಗೊಳಿಸುವ ಶಾಂಪೂ ಒಂದನ್ನು ಬಿಡುಗಡೆ ಮಾಡಿದೆ. ಆಯುರ್ವೇದದ ಡ್ರೈ ಶಾಂಪೂ ಇದಾಗಿದೆ. ಭಾರತ ಹಾಗೂ ಸಾಗರೋತ್ತರ ಮಾರುಕಟ್ಟೆಯಲ್ಲಿ ಈ ಶಾಂಪೂವನ್ನು ಬಿಡುಗಡೆ ಮಾಡಲಾಗಿದೆ.

washing-hair

ಹೌದು, ರೋಸ್ಮರಿ ಹಾಗೂ ಚಹಾ ತೈಲ ಬೆರೆಸಿ ಈ ಶಾಂಪೂ ತಯಾರಿಸಲಾಗಿದೆ. ರೋಸ್ಮರಿ ಕೂದಲನ್ನು ಬಲಪಡಿಸುವ ಜೊತೆಗೆ ಕೂದಲನ್ನು ಸ್ವಚ್ಛಗೊಳಿಸುತ್ತದೆ. ಈ ಶಾಂಪೂವಿನಿಂದ ಕೂದಲು ಉದುರುತ್ತೆ, ಬೆಳ್ಳಗಾಗುತ್ತೆ ಎನ್ನುವ ಭಯ ಬೇಡ ಎನ್ನುತ್ತಾರೆ ಶಹನಾಜ್.

 

ಅಂದಹಾಗೆ, ಶಾಂಪೂವಿನ ಗುಣ ಲಕ್ಷಣಗಳನ್ನು ಇದು ಹೊಂದಿದ್ದು ಸಾಮಾನ್ಯ ಶಾಂಪೂವಿಗಿಂತ ಸೌಮ್ಯವಾಗಿರುತ್ತದೆ. ನೀರಿಲ್ಲದೆ ತಲೆ ಸ್ನಾನ ಮಾಡಲು ಈ ಶಾಂಪೂ ಬೆಸ್ಟ್ ಎನ್ನುತ್ತಾರೆ ಇವರು. ನೀವು ಒಮ್ಮೆ ಟ್ರೈ ಮಾಡಿ ನೋಡಿ.

Please follow and like us:
0
https://kannadadalli.com/wp-content/uploads/2018/01/washing-hair.jpghttps://kannadadalli.com/wp-content/uploads/2018/01/washing-hair-150x100.jpgKannadadalli Editorಆರೋಗ್ಯhealth problems,health tipsಸಾಮಾನ್ಯವಾಗಿ ಈಗಿನ ಜನರಂತು ತುಂಬಾನೆ ಬ್ಯುಸಿ. ಯಾಕಂದ್ರೆ, ತಮಗಾಗಿ ಇರುವ ಕೆಲಸದ ಒತ್ತಡಗಳ ನಡುವೆ ಈ ಶುದ್ಧೀಕರಣವನ್ನೇ ಮರೆತುಬಿಡುತ್ತಾರೆ. ಅದರಲ್ಲೂ ತಲೆ ಸ್ನಾನ ಮಾಡೋದು ಅಂದ್ರೆ ಅದೆಷ್ಟೋ ಮಂದಿಗೆ ಕಷ್ಟ.. ಕೆಲಸದ ಒತ್ತಡದಲ್ಲಿ ಕೂದಲನ್ನು ಸರಿಯಾಗಿ ತೊಳೆಯಲು ಸಮಯವಿರೋದಿಲ್ಲ. ಪಾರ್ಟಿಗೆ ಹೋಗಬೇಕು. ಆದ್ರೆ ತಲೆ ಸ್ನಾನ ಮಾಡಿಲ್ಲ ಎಂದು ಗೊಣಗುವವರಿದ್ದಾರೆ. ಅಂಥವರಿಗೆ ಇಲ್ಲೊಂದು ಖುಷಿ ಸುದ್ದಿ ಇದೆ. ಹೌದಾ.. ? ಅದೇನು ಅಂತೀರಾ..? ಮುಂದೆ ಓದಿ...ಬ್ಯೂಟಿ ತಜ್ಞ ಶಹನಾಜ್ ಹುಸೇನ್ ಕಂಪನಿ...ಕನ್ನಡಿಗರ ವೆಬ್​ ಚಾನೆಲ್​