ತುರುವೇಕೆರೆ: ನಿವೃತ್ತ ಪ್ರಾಂಶುಪಾಲ ಟಿ.ಎಲ್. ನಾಗರಾಜು ಅವರ ಸವಿನೆನಪಿನಲ್ಲಿ ಸುರಭಿ ಸಂಗಮ, ಲಯನ್ಸ್ ಕ್ಲಬ್ ಹಾಗೂ ಇತರೆ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಟಿಎಲ್ಎನ್ ಸ್ಮೃತಿ ಚಿತ್ರ – ೨೦೧೯ ಎಂಬ ಕಾರ್ಯಕ್ರಮವನ್ನು ಪಟ್ಟಣದ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಫೆಬ್ರವರಿ ೧೭ ರಂದು ಬೆಳಿಗ್ಗೆ ೧೦ ಗಂಟೆಗೆ ಆಯೋಜಿಸಲಾಗಿದೆ.

ಶಿಕ್ಷಣ ತಜ್ಞರಾಗಿ, ಸಾಹಿತ್ಯ ಪರಿಚಾರಕರಾಗಿ ಹಾಗೂ ತುರುವೇಕೆರೆಯ ಬಹುತೇಕ ಸಂಘ ಸಂಸ್ಥೆಗಳ ಸೇವಾ ಚಟುವಟಿಕೆಯಲ್ಲಿ ಸೇವೆ ಸಲ್ಲಿಸಿದ್ದ ಟಿ.ಎಲ್.ನಾಗರಾಜು ಅವರು ೨೦೧೩ ರ ಅಕ್ಟೋಬರ್ ೧೫ ರಂದು ಇಹಲೋಕ ತ್ಯಜಿಸಿದ್ದರು. ಈಗ ಅವರ ಸವಿನೆನಪಿನಲ್ಲಿ ಸಂಘ ಸಂಸ್ಥೆಗಳು ಫೆಬ್ರವರಿ ೧೭ ರಂದು ಟಿಎಲ್ಎನ್ ಸ್ಮೃತಿ ಚಿತ್ರ ಕಾರ್ಯಕ್ರಮ ಏರ್ಪಡಿಸಿವೆ. ಕಾರ್ಯಕ್ರಮದಲ್ಲಿ ಟಿಎಲ್ಎನ್ ಅವರ ಜೀವನ ಕಥನ ಕೃತಿ ” ಅಪ್ಪನೊಳಗೊಬ್ಬ ಗಾಂಧಿ” ಲೋಕಾರ್ಪಣೆಗೊಳ್ಳಲಿದೆ. ನಂತರ ಕನ್ನಡ ಪೂಜಾರಿ ಎಂದೇ ಹೆಸರಾದ ಹಿರೇಮಗಳೂರು ಅವರೊಂದಿಗೆ ಲಘು ಹರಟೆ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎ.ಎಸ್ ಜಯರಾಮ್ ವಹಿಸಲಿದ್ದು, ತಿಪಟೂರು ಶಾಸಕ ಬಿ.ಸಿ.ನಾಗೇಶ್ ಉದ್ಘಾಟಿಸಲಿದ್ದಾರೆ. “ಅಪ್ಪನೊಳಗೊಬ್ಬ ಗಾಂಧಿ” ಕೃತಿಯನ್ನು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಲೋಕಾರ್ಪಣೆ ಮಾಡಲಿದ್ದಾರೆ. ನಿವೃತ್ತ ಪ್ರಾಂಶುಪಾಲ ತಮ್ಮಣ್ಣಗೌಡ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು, ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ, ಮಾಜಿ ಶಾಸಕರಾದ ಎಂ.ಟಿ.ಕೃಷ್ಣಪ್ಪ, ಹೆಚ್.ಬಿ. ನಂಜೇಗೌಡ, ಲಯನ್ಸ್ ಕ್ಲಬ್ ಸ್ಥಾಪಕ‌ ಕಾರ್ಯದರ್ಶಿ ಡಾ.ಎ. ನಾಗರಾಜ್, ಶ್ರೀ ಸತ್ಯಗಣಪತಿ ಸೇವಾ ಸಮಾಜದ ಅಧ್ಯಕ್ಷ ಆರ್. ಮಲ್ಲಿಕಾರ್ಜುನ್, ವಕೀಲ ಧನಪಾಲ್ ಆಗಮಿಸಲಿದ್ದಾರೆ.

ಟಿಎಲ್ಎನ್ ಅವರ ಮೊಮ್ಮಗಳಾದ ಟಿ.ಪಿ.ಶರಧಿ‌ ನೃತ್ಯನಮನ ಸಲ್ಲಿಸಲಿದ್ದಾರೆ. ಸಂಸಾರದಲ್ಲಿ ಸರಿಗಮ ಲಘು ಹರಟೆ ಕಾರ್ಯಕ್ರಮವನ್ನು ಹಿತಾನಾ ನಡೆಸಿಕೊಡಲಿದ್ದು, ಹಿರೇಮಗಳೂರು ಕಣ್ಣನ್ ನಿರ್ವಹಿಸಲಿದ್ದಾರೆ.

ವರದಿ: ಗಿರೀಶ್ ಕೆ ಭಟ್, ತುರುವೇಕೆರೆ

Please follow and like us:
0
https://kannadadalli.com/wp-content/uploads/2019/02/IMG-20190210-WA0009.jpghttps://kannadadalli.com/wp-content/uploads/2019/02/IMG-20190210-WA0009-150x100.jpgKannadadalli Editorಸುದ್ದಿತುರುವೇಕೆರೆ: ನಿವೃತ್ತ ಪ್ರಾಂಶುಪಾಲ ಟಿ.ಎಲ್. ನಾಗರಾಜು ಅವರ ಸವಿನೆನಪಿನಲ್ಲಿ ಸುರಭಿ ಸಂಗಮ, ಲಯನ್ಸ್ ಕ್ಲಬ್ ಹಾಗೂ ಇತರೆ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಟಿಎಲ್ಎನ್ ಸ್ಮೃತಿ ಚಿತ್ರ - ೨೦೧೯ ಎಂಬ ಕಾರ್ಯಕ್ರಮವನ್ನು ಪಟ್ಟಣದ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಫೆಬ್ರವರಿ ೧೭ ರಂದು ಬೆಳಿಗ್ಗೆ ೧೦ ಗಂಟೆಗೆ ಆಯೋಜಿಸಲಾಗಿದೆ. ಶಿಕ್ಷಣ ತಜ್ಞರಾಗಿ, ಸಾಹಿತ್ಯ ಪರಿಚಾರಕರಾಗಿ ಹಾಗೂ ತುರುವೇಕೆರೆಯ ಬಹುತೇಕ ಸಂಘ ಸಂಸ್ಥೆಗಳ ಸೇವಾ ಚಟುವಟಿಕೆಯಲ್ಲಿ ಸೇವೆ ಸಲ್ಲಿಸಿದ್ದ ಟಿ.ಎಲ್.ನಾಗರಾಜು...ಕನ್ನಡಿಗರ ವೆಬ್​ ಚಾನೆಲ್​