ತುರುವೇಕೆರೆ: ತಾಲೂಕಿನ ಸಂಗಲಾಪುರ ಗ್ರಾಮದಲ್ಲಿ ನೆನ್ನೆ ರಾತ್ರಿಯಿಂದ ಇಂದು ಮಧ್ಯಾಹ್ನದವರೆಗೆ ೫ ಮೆದೆಗಳು (ಬಣವೆ) ಆಕಸ್ಮಿಕ ಬೆಂಕಿಗೆ ಆಹುತಿಯಾಗಿದೆ. ನೆನ್ನೆ ರಾತ್ರಿಯಿಂದ ಗಂಟೆಗೊಂದು ಹುಲ್ಲಿನ‌ ಮೆದೆಗಳು(ಬಣವೆ) ಬೆಂಕಿಯ
ಕೆನ್ನಾಲಿಗೆಗೆ ತುತ್ತಾಗುತ್ತಿರುವುದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ನೆನ್ನೆ (ಫೆಬ್ರವರಿ ೧೧) ರಂದು ರಾತ್ರಿ ೧೦ ಗಂಟೆ ಸಮಯದಲ್ಲಿ ಗ್ರಾಮದ ರಂಗನಾಥ ಎಂಬುವವರ ಹುಲ್ಲಿನ ಮೆದೆಗೆ ಬೆಂಕಿ ಬಿದ್ದಿದೆ. ತಕ್ಷಣ ಗ್ರಾಮಸ್ಥರು ಬೆಂಕಿಯನ್ನು ಆರಿಸುವ ಪ್ರಯತ್ನ ಮಾಡಿದ್ದಾರೆ. ಅಲ್ಲದೆ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಬೆಂಕಿಯ ಕೆನ್ನಾಲಿಗೆ ವಿಪರೀತವಾಗಿದ್ದರಿಂದ ತುರುವೇಕೆರೆ ಅಗ್ನಿಶಾಮಕ ದಳದವರೊಂದಿಗೆ ಚಿಕ್ಕನಾಯಕನಹಳ್ಳಿ ಅಗ್ನಿಶಾಮಕ ಸಿಬ್ಬಂದಿ ತಮ್ಮ ವಾಹನದೊಂದಿಗೆ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ.

ಆದರೆ ಇಂದು(ಫೆಬ್ರವರಿ ೧೨) ಬೆಳಿಗ್ಗೆ ಇಂದ ಗಂಟೆಗೆ ಒಂದು ಹುಲ್ಲಿನ ಮೆದೆ ಬೆಂಕಿಗೆ ಆಹುತಿಯಾಗುತ್ತಿರುವುದು ಗ್ರಾಮಸ್ಥರನ್ನು ಚಿಂತೆಗೆ ದೂಡಿದೆ. ಬೆಳಿಗ್ಗೆ ಕ್ರಮವಾಗಿ ಗಂಗಾಧರ, ರುದ್ರಣ್ಣ, ತಾತಯ್ಯ, ಮಹಲಿಂಗಯ್ಯ(ಡೈರಿ) ಅವರ ಹುಲ್ಲಿನ ಮೆದೆಗಳಿಗೆ ಆಕಸ್ಮಿಕ ಬೆಂಕಿ ತಗುಲಿ ಹುಲ್ಲಿನ ಮೆದೆಗಳು ಸುಟ್ಟು ಹೋಗಿದೆ. ಪ್ರತಿಯೊಬ್ಬರ ಹುಲ್ಲಿನ ‌ಮೆದೆಗೆ ಬೆಂಕಿ ಬಿದ್ದಾಗಲೂ ಅಗ್ನಿಶಾಮಕ ಸಿಬ್ಬಂದಿ ಸಂಗಲಾಪುರಕ್ಕೆ ಬಂದು ಬೆಂಕಿ ನಂದಿಸಿದ್ದಾರೆ.

ನೆನ್ನೆಯಿಂದ ಆಗುತ್ತಿರುವ ಬೆಂಕಿ ಅನಾಹುತಗಳಿಂದ ಆತಂಕಗೊಂಡಿರುವ ಗ್ರಾಮಸ್ಥರು ಪ್ರತಿ ಕ್ಷಣ ಇನ್ಯಾವ ಮೆದೆಗೆ ಬೆಂಕಿ ಬಿದ್ದಿದೆ. ಇನ್ನೇನು ಅನಾಹುತ ಆಗಲಿದೆಯೋ ಎಂದು ಚಿಂತಿಸ ತೊಡಗಿದ್ದಾರೆ. ಸರಣಿಯಾಗಿ ಮೆದೆಗಳಿಗೆ ಬೆಂಕಿ ತಗಲಿ ಅನಾಹುತ ಸಂಭವಿಸಲು ಕಾರಣವೇನು ಎಂಬುದು ನಿಗೂಢವಾಗಿದೆ.

ವರದಿ: ಗಿರೀಶ್ ಕೆ ಭಟ್, ತುರುವೇಕೆರೆ

Please follow and like us:
0
https://kannadadalli.com/wp-content/uploads/2019/02/turuvekere.jpghttps://kannadadalli.com/wp-content/uploads/2019/02/turuvekere-150x100.jpgKannadadalli Editorಸುದ್ದಿತುರುವೇಕೆರೆ: ತಾಲೂಕಿನ ಸಂಗಲಾಪುರ ಗ್ರಾಮದಲ್ಲಿ ನೆನ್ನೆ ರಾತ್ರಿಯಿಂದ ಇಂದು ಮಧ್ಯಾಹ್ನದವರೆಗೆ ೫ ಮೆದೆಗಳು (ಬಣವೆ) ಆಕಸ್ಮಿಕ ಬೆಂಕಿಗೆ ಆಹುತಿಯಾಗಿದೆ. ನೆನ್ನೆ ರಾತ್ರಿಯಿಂದ ಗಂಟೆಗೊಂದು ಹುಲ್ಲಿನ‌ ಮೆದೆಗಳು(ಬಣವೆ) ಬೆಂಕಿಯ ಕೆನ್ನಾಲಿಗೆಗೆ ತುತ್ತಾಗುತ್ತಿರುವುದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ನೆನ್ನೆ (ಫೆಬ್ರವರಿ ೧೧) ರಂದು ರಾತ್ರಿ ೧೦ ಗಂಟೆ ಸಮಯದಲ್ಲಿ ಗ್ರಾಮದ ರಂಗನಾಥ ಎಂಬುವವರ ಹುಲ್ಲಿನ ಮೆದೆಗೆ ಬೆಂಕಿ ಬಿದ್ದಿದೆ. ತಕ್ಷಣ ಗ್ರಾಮಸ್ಥರು ಬೆಂಕಿಯನ್ನು ಆರಿಸುವ ಪ್ರಯತ್ನ ಮಾಡಿದ್ದಾರೆ. ಅಲ್ಲದೆ ಅಗ್ನಿಶಾಮಕ ದಳಕ್ಕೆ...ಕನ್ನಡಿಗರ ವೆಬ್​ ಚಾನೆಲ್​