ಭಾರತೀಯ ಬೋರೆಜ್ ಇಂಗ್ಲಿಷ್ ನಲ್ಲಿ ಮೆಕ್ಸಿಕನ್ ಮಿಂಟ್ ಎಂದೂ ಕರೆಯಲ್ಪಡುವ ದೊಡ್ಡ ಪತ್ರೆ ಅತ್ಯಂತ ಪ್ರಭಾವಶಾಲಿಯಾಗಿ ಆರೋಗ್ಯದ ಮೇಲೆ ಉತ್ತಮ ಪರಿಣಾಮಗಳನ್ನು ನೀಡುತ್ತದೆ. ಚರ್ಮದ ಆರೋಗ್ಯವನ್ನು ಸುಧಾರಿಸುವುದು, ದೇಹವನ್ನು ನಿರ್ವಿಷಗೊಳಿಸುವುದು, ಶೀತಗಳ ವಿರುದ್ಧ ರಕ್ಷಿಸುವುದು, ಸಂಧಿವಾತದ ನೋವನ್ನು ಶಮನಗೊಳಿಸುವುದು, ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುವುದು, ಕೆಲವು ಕ್ಯಾನ್ಸರ್ ನಿವಾರಕ ಮತ್ತು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವಲ್ಲಿ ಸಹಾಯ ಮಾಡುತ್ತದೆ.

ಸಾಮಾನ್ಯವಾಗಿ ಈ ದೊಡ್ಡಪತ್ರೆ ಗಿಡವನ್ನು ಮನೆ ಮುಂದೆ ಶೋ ಗಿಡಗಳಾಗಿಯೂ ಬೆಳೆಸುತ್ತೇವೆ. ಎಲ್ಲರಿಗೂ ಪರಿಚಿತವಾದ ಪತ್ರೆ ಎಂದರೆ ತಪ್ಪಾಗಲಾರದು. ಇದರಲ್ಲಿರುವ ಉತ್ತಮ ಔಷಧಿಯ ಗುಣಗಳನ್ನು ತಿಳಿದು ಬಳಕೆ ಮಾಡಿ.

ಇದನ್ನು ಚಿಕ್ಕ ಮಕ್ಕಳಿಗೆ ನೆಗಡಿ, ಕಫ ನಿವಾರಿಸಲು ಇದನ್ನು ಬಳಸುತ್ತಾರೆ. ದೊಡ್ಡವರು ಕೂಡ ಕೆಮ್ಮು, ನೆಗಡಿಗೆ ಔಷಧವಾಗಿ ಬಳಕೆ ಮಾಡಬಹುದು. ಜಾಂಡಿಸ್ (ಅರಿಶಿನ ಕಾಮಾಲೆ) ಕಾಯಿಲೆ ನಿವಾರಣೆ ಮಾಡುವ ಗುಣವಿದೆ. ಅಲ್ಲದೇ ಪಿತ್ತ ಸಂಬಂಧಿ ಕಾಯಿಲೆಯನ್ನು ವಾಸಿ ಮಾಡುತ್ತದೆ ಈ ದೊಡ್ಡ ಪತ್ರೆ ಗಿಡದ ಎಲೆ.

ದೊಡ್ಡ ಪತ್ರೆ ಎಲೆಯನ್ನು ಬಜ್ಜಿ, ಸಾಂಬಾರು, ಚಟ್ನಿ ಮೊದಲಾದ ಅಡುಗೆಗಳಲ್ಲಿ ಬಳಸಲಾಗುತ್ತದೆ. ಆದರೆ ನಾವಿಲ್ಲಿ ಇಂದು ದೊಡ್ಡ ಪತ್ರೆ ಎಲೆಯನ್ನು ಬಳಸಿ ತಯಾರಿಸಿದ ದೊಡ್ಡ ಪತ್ರೆ ತಂಬುಳಿ ರೆಸಿಪಿಯನ್ನು ನೀಡುತ್ತಿದ್ದೇವೆ.

ದೊಡ್ಡಪತ್ರೆ (ದಂಬಾರ ನೆಟ್ಟಿ) ಎಲೆಯ ತಂಬುಳಿ ಮಾಡಲು ಬೇಕಾಗುವ ಸಾಮಗ್ರಿಗಳು:

ದೊಡ್ಡಪತ್ರೆ ಎಲೆ 5-6, ಜೀರಿಗೆ, ತೆಂಗಿನಕಾಯಿ ತುರಿ, ಉಪ್ಪು, ಎಣ್ಣೆ ಮತ್ತು ಮಜ್ಜಿಗೆ.

ಮಾಡುವ ವಿಧಾನ:

ಚಿಕ್ಕ ಬಾಣಲೆಗೆ ಎಣ್ಣೆ ಹಾಕಿ. ಎಣ್ಣೆ ಕಾದ ಮೇಲೆ ಜೀರಿಗೆ, ದೊಡ್ಡಪತ್ತೆ ಎಲೆ ಹಾಕಿ ಚೆನ್ನಾಗಿ ಹುರಿಯಿರಿ.

ಎಲೆಗಳು ಬಾಡಿದ ಮೇಲೆ ತೆಗೆಯಿರಿ.

ಹುರಿದ ಪದಾರ್ಥಗಳು ತಣ್ಣಗಾದ ಮೇಲೆ ಮಿಕ್ಸಿ ಜಾರಿಗೆ ಹಾಕಿ ತೆಂಗಿನಕಾಯಿ ತುರಿ ನೀರು ಹಾಕಿ ನುಣ್ಣಗೆ ರುಬ್ಬಿ.

ಒಂದು ಪಾತ್ರೆಗೆ ಹಾಕಿ ಕಡೆದ ಮಜ್ಜಿಗೆ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕರಡಿ.

ಬೆಲ್ಲ ಬೇಕಾದವರು ಹಾಕಿ ಕೊಳ್ಳಬಹುದು.

-ಅಶ್ವಿನಿ ವಿನಾಯಕ

Please follow and like us:
0
https://kannadadalli.com/wp-content/uploads/2018/07/maxresdefault-1-4.jpghttps://kannadadalli.com/wp-content/uploads/2018/07/maxresdefault-1-4-150x100.jpgSowmya KBತಿಂಡಿ-ತಿನಿಸುdoddapatre,indian borage,mexican mint,pabuliಭಾರತೀಯ ಬೋರೆಜ್ ಇಂಗ್ಲಿಷ್ ನಲ್ಲಿ ಮೆಕ್ಸಿಕನ್ ಮಿಂಟ್ ಎಂದೂ ಕರೆಯಲ್ಪಡುವ ದೊಡ್ಡ ಪತ್ರೆ ಅತ್ಯಂತ ಪ್ರಭಾವಶಾಲಿಯಾಗಿ ಆರೋಗ್ಯದ ಮೇಲೆ ಉತ್ತಮ ಪರಿಣಾಮಗಳನ್ನು ನೀಡುತ್ತದೆ. ಚರ್ಮದ ಆರೋಗ್ಯವನ್ನು ಸುಧಾರಿಸುವುದು, ದೇಹವನ್ನು ನಿರ್ವಿಷಗೊಳಿಸುವುದು, ಶೀತಗಳ ವಿರುದ್ಧ ರಕ್ಷಿಸುವುದು, ಸಂಧಿವಾತದ ನೋವನ್ನು ಶಮನಗೊಳಿಸುವುದು, ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುವುದು, ಕೆಲವು ಕ್ಯಾನ್ಸರ್ ನಿವಾರಕ ಮತ್ತು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಈ ದೊಡ್ಡಪತ್ರೆ ಗಿಡವನ್ನು ಮನೆ ಮುಂದೆ ಶೋ ಗಿಡಗಳಾಗಿಯೂ ಬೆಳೆಸುತ್ತೇವೆ....ಕನ್ನಡಿಗರ ವೆಬ್​ ಚಾನೆಲ್​