ಬಾಲಿವುಡ್ : ಬಾಲಿವುಡ್ ನಟ ಶಾರುಖ್ ಖಾನ್ ಅವರು ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನ ರೀತಿಯಲ್ಲಿ ತಮ್ಮ ಮಗಳಿಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ. ಅಂದಹಾಗೆ, ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಸುದ್ದಿ ಮಾಡುತ್ತಲೇ ಇರುವ ಶಾರುಖ್ ಖಾನ್ ಪುತ್ರಿ ಇದೀಗ ಬರ್ತಡೇ ವಿಶಸ್ ನ ಮೂಲಕ ಸದ್ದು ಮಾಡುತ್ತಿದ್ದಾರೆ.ಹೌದು, ನಟ ಶಾರುಖ್ ಖಾನ್ ಅವರ ಮಗಳು ಸುಹಾನಾ ಮೇ 22 ರಂದು ತಮ್ಮ 18ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು ಈ ಬಗ್ಗೆ ನಟ ಶಾರುಖ್ ಖಾನ್ ಅವರು ಸಾಮಾಜಿಕ ಜಾಲಾತಾಣಗಳಲ್ಲಿ ನರ್ತಕಿಯ ಭಂಗಿಯ ಮಧ್ಯ-ಗಾಳಿಯಲ್ಲಿ ಸುಹಾನಾ ಹಾರುತ್ತಿರುವ ಚಿತ್ರವೊಂದನ್ನು ಪೋಸ್ಟ್ ಮಾಡುತ್ತಾ ‘ನನಗೆ ಗೊತ್ತಿತ್ತು ನೀನು ಯಾವತ್ತೂ ಆಕಾಶದೆತ್ತರಕ್ಕೆ ಬೆಳೆಯುವ ಉದ್ದೇಶ ಹೊಂದಿದ್ದೀಯಾ ಅಂತ. ನೀನು 16 ವಯಸ್ಸಿನಿಂದ ಏನನ್ನು ಮಾಡುತ್ತಿದ್ದೆ ಅದನ್ನು ಈಗ ನೀನು ಕಾನೂನುಬದ್ಧವಾಗಿ ಮಾಡಬಹುದು. ನಿನ್ನನ್ನು ಪ್ರೀತಿಸುತ್ತೇನೆ.’ ಎಂದು ಬರೆದು ಶುಭ ಹಾರೈಸಿದ್ದಾರೆ.ಒಟ್ಟಾರೆ ಹೇಳೋದಾದ್ರೆ ನಟ ಶಾರುಖ್ ಖಾನ್ ಪುತ್ರಿಗೆ ಈಗಾಗಲೇ ಸಾಕಷ್ಟು ಫಾಲೋವರ್ಸ್ ಗಳು ಇದ್ದು ಶಾರುಖ್ ರ ಈ ಶುಭಾಷಯವನ್ನ ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರವೇ ಭಾರಿ ಸುದ್ದಿಯಾಗಿಬಿಟ್ಟಿದೆ ಎಂದರೆ ತಪ್ಪಾಗಲಾರದು.

Please follow and like us:
0
https://kannadadalli.com/wp-content/uploads/2018/05/srk-03-46-1501223735-240966-khaskhabar.jpghttps://kannadadalli.com/wp-content/uploads/2018/05/srk-03-46-1501223735-240966-khaskhabar-150x100.jpgSindhuಸಿನೆಮಾಬಾಲಿವುಡ್,ಶಾರುಖ್ ಖಾನ್,ಶಾರುಖ್ ಖಾನ್ ಮಗಳುಬಾಲಿವುಡ್ : ಬಾಲಿವುಡ್ ನಟ ಶಾರುಖ್ ಖಾನ್ ಅವರು ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನ ರೀತಿಯಲ್ಲಿ ತಮ್ಮ ಮಗಳಿಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ. ಅಂದಹಾಗೆ, ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಸುದ್ದಿ ಮಾಡುತ್ತಲೇ ಇರುವ ಶಾರುಖ್ ಖಾನ್ ಪುತ್ರಿ ಇದೀಗ ಬರ್ತಡೇ ವಿಶಸ್ ನ ಮೂಲಕ ಸದ್ದು ಮಾಡುತ್ತಿದ್ದಾರೆ.ಹೌದು, ನಟ ಶಾರುಖ್ ಖಾನ್ ಅವರ ಮಗಳು ಸುಹಾನಾ ಮೇ 22 ರಂದು ತಮ್ಮ 18ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು ಈ ಬಗ್ಗೆ...ಕನ್ನಡಿಗರ ವೆಬ್​ ಚಾನೆಲ್​