gymಸಿಕ್ಸ್ ಪ್ಯಾಕ್ ದೇಹ ಯಾರು ಇಷ್ಟಪಡಲ್ಲ ಹೇಳಿ?, ಸಿಕ್ಸ್ ಪ್ಯಾಕ್ ಮಾಡಿಕೊಂಡು ಹುಡುಗಿಯರನ್ನು ಇಂಪ್ರೆಸ್ ಮಾಡಲು ಹುಡುಗರು ಎಷ್ಟೆಲ್ಲಾ ಕಸರತ್ತು ಮಾಡುತ್ತಾರೆ ಎಂಬುದು ನಿಮಗೂ ತಿಳಿದೇ ಇದೆ. ಅದೇ ಕಾರಣಕ್ಕಾಗಿ ಸಿಕ್ಸ್ ಪ್ಯಾಕ್ ಎನ್ನುವುದು ಈಗೊಂದು ಕ್ರೇಜ್ ಆಗಿಬಿಟ್ಟಿದೆ.

salman khanಶಾರೂಕ್ ಖಾನ್, ಸಲ್ಮಾನ್ ಖಾನ್, ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಅವರ ಸಿಕ್ಸ್ ಪ್ಯಾಕ್ ದೇಹವನ್ನು ನೋಡಿ ಯಾವ ಹುಡುಗಿಯರು ಫಿದಾ ಆಗಲ್ಲಾ ಹೇಳಿ. ಹಾಗಾಗಿಯೇ ಹುಡುಗರು ಜಿಮ್ ಗೆ ಹೋಗಿ ಅಷ್ಟೊಂದು ಬೆವರಿಳಿಸುವುದು. ಸಿಕ್ಸ್ ಪ್ಯಾಕ್ ಹುಡುಗರನ್ನು ಕಂಡರೆ ಹುಡುಗಿಯರಿಗೆ ಎಲ್ಲಿಲ್ಲದ ಮೋಹ.

prabas-bahupali-bahupali2-rajamouliಹುಡುಗಿಯರನ್ನು ಸೆಳೆಯಲೋ ಅಥವಾ ಸಿಕ್ಸ್ ಪ್ಯಾಕ್ ಹೊಂದಿ ಫಿಟ್ ಆಗಿರುವ ಪ್ರಯತ್ನವೋ? ಒಟ್ಟಾರೆ ಸಿಕ್ಸ್ ಪ್ಯಾಕ್ ಗಾಗಿ ಹುಡುಗರು ಸಾಕಷ್ಟು ಹೆಣಗಾಡುತ್ತಾರೆ. ಇದಕ್ಕಾಗಿ ಸಾಕಷ್ಟು ವರ್ಕ್ ಔಟ್ ಜೊತೆ ಜೊತೆಗೆ ಅವೈಜ್ಞಾನಿಕವಾಗಿ ಯಾವ ಯಾವುದೋ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ.

gymಈ ರೀತಿ ಸಿಕ್ಸ್ ಪ್ಯಾಕ್ ಬೆಳೆಸಿಕೊಳ್ಳಲು ವೈಜ್ಞಾನಿಕವಾದ ವ್ಯಾಯಾಮ, ಸರಿಯಾದ ಆಹಾರ ಕ್ರಮವೂ ಅಗತ್ಯವಾಗಿದೆ. ಸಿಕ್ಸ್ ಪ್ಯಾಕ್ ಪಡೆಯುವ ಭರದಲ್ಲಿ ಆಬ್ಸ್ ವರ್ಕ್ ಔಟ್ ಮಾಡುವುದು, ಹೆಚ್ಚಾಗಿ ವ್ಯಾಯಾಮ ಮಾಡುತ್ತಾರೆ. ಆದರೆ ಒಟ್ಟಾರೆಯಾಗಿ ದೇಹದ ಕೊಬ್ಬನ್ನು ಕರಗಿಸಲು ಮುಂದಾಗುವುದಿಲ್ಲ. ಅದರಲ್ಲೂ ಹುಡುಗರು ಹೊಟ್ಟೆಯ ಭಾಗದಲ್ಲಿ ಇರುವ ಕೊಬ್ಬನ್ನು ಕರಗಿಸಲು ಹೆಚ್ಚು ಹೆಚ್ಚು ಪ್ರಯತ್ನ ಮಾಡುತ್ತಾರೆ.

ಹೊಟ್ಟೆ ಭಾಗದ ಕೊಬ್ಬನ್ನು ಕರಗಿಸಲು ಸೂಕ್ತವಾದ ಆಹಾರ ಕ್ರಮವನ್ನು ಅನುಸರಿಸುವುದು ಅಗತ್ಯ. ಜೊತೆಗೆ ಒಂದಷ್ಟು ಕಸರತ್ತಿನ ಅವಶ್ಯಕತೆಯೂ ಇದೆ.

ದೇಹದಲ್ಲಿ ಹೆಚ್ಚು ಕೊಬ್ಬಿನಾಂಶವಿದ್ದರೆ ಸಿಕ್ಸ್ ಪ್ಯಾಕ್ ಪಡೆಯುವುದು ಸುಲಭವಾಗುತ್ತದೆ. ಉತ್ತಮ ಆಬ್ಸ್ ಇದ್ದು, ದೇಹದ ಫ್ಯಾಟ್ ಅಂಶ ಹೆಚ್ಚಾಗಿದ್ದರೆ ಸಿಕ್ಸ್ ಪ್ಯಾಕ್ ದೇಹದ ಮೂಲೆಯಲ್ಲಿಂದತೆ ಭಾಸವಾಗುತ್ತದೆ.

gymಕೆಲವು ವ್ಯಕ್ತಿಗಳಲ್ಲಿ ಹುಟ್ಟಿನಿಂದಲೇ ಕೆಲ ಜನಟಿಕ್ಸ್ ಗಳ ಸಮಸ್ಯೆ ಇರುತ್ತದೆ. ಅಂದರೆ ಹುಟ್ಟತ್ತಲೇ ಸಣ್ಣಗಿರುತ್ತಾರೆ. ಹೊಟ್ಟೆ ಮತ್ತು ತೋಳಿನ ಭಾಗದಲ್ಲಿ ಕಡಿಮೆ ಕೊಬ್ಬಿನಾಂಶವಿರುತ್ತದೆ. ಹಾಗಾಗಿ ಇಂತಹವರು ಹೆಚ್ಚಾಗಿ ಬೇಸಿಕ್ ವರ್ಕ್ ಔಟ್ ಮಾಡಬೇಕಾಗುತ್ತದೆ. ಕಿಬ್ಬೊಟ್ಟೆಯ ರಚನೆ ಮತ್ತು ವಂಶವಾಹಿಯಿಂದ ಕಡಿಮೆ ಇದ್ದರೆ ಅದನ್ನು ಹೆಚ್ಚು ಮಾಡಿಕೊಳ್ಳಬೇಕಾಗುತ್ತದೆ.

ಸಿಕ್ಸ್ ಪ್ಯಾಕ್ ಬೆಳೆಸಿಕೊಳ್ಳಲು ಆಹಾರ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆಬ್ಸ್ ಗಳನ್ನು ಸರಳವಾಗಿ ಜಿಮ್ ನಲ್ಲಿ ಪಡೆದುಕೊಳ್ಳಲು ಸಾಧ್ಯವಿಲ್ಲ. ಅದ್ಕಕಾಗಿ ಆಹಾರ ಕ್ರಮ ಸರಿಯಾಗಿರಬೇಕು.

ಜಂಗ್ ಫುಡ್, ತಿನ್ನುವುದನ್ನು ಮೊದಲು ಬಿಡಬೇಕು. ಆದಷ್ಟು ಸಾವಯವ ಆಹಾರ ಸೇವನೆ ಮಾಡುವುದು ಒಳಿತು. ಪ್ರೊಟೀನ್, ಆರೋಗ್ಯವಂತ ಫ್ಯಾಟ್ ಇರುವ ತರಕಾರಿ, ಆಲಿವ್ ಆಯಿಲ್, ಮೀನೆಣ್ಣೆಯಂತಹ ಪದಾರ್ಥಗಳನ್ನು ಸೇವಿಸಬೇಕು.

ಸಾಮಾನ್ಯವಾಗಿ ನಾವು ದಿನಕ್ಕೆ ಮೂರು ಬಾರಿ ಆಹಾರ ಸೇವನೆ ಮಾಡುತ್ತೇವೆ. ಹಾಗೆ ಮಾಡುವ ಬದಲಾಗಿ ದಿನಕ್ಕೆ 6 ಬಾರಿ ಕಡಿಮೆ ಪ್ರಮಾಣದಲ್ಲಿ ಆಹಾರವನ್ನು ತೆಗೆದುಕೊಳ್ಳಬೇಕು. ಇದಕ್ಕಾಗಿ ನೀವು ಆಹಾರ ತಜ್ಞರ ಸಲಹೆಯನ್ನು ಪಡೆದುಕೊಳ್ಳಬಹುದು. ಕೇವಲ ಹೊಟ್ಟೆ ಭಾಗಕ್ಕೆ ಹೆಚ್ಚು ಮಹತ್ವ ಕೊಟ್ಟು ಕಾಲು ಕೈ ಭಾಗವನ್ನು ನಿರ್ಲಕ್ಷ್ಯ ಮಾಡುವಂತಿಲ್ಲ.

ಪ್ಲ್ಯಾಂಕ್ ವರ್ಕ್ ಔಟ್ ಮಾಡುವುದನ್ನು ಮರೆಯಬಾರದು. ಆರಂಭಿ ಹಂತದಲ್ಲಿ ಇದು ಸರಳ ಎಂದೆನಿಸಿದರೂ ಸಿಕ್ಸ್ ಪ್ಯಾಕ್ ಸಾಧನೆಗೆ ಬಹಳಷ್ಟು ಸಹಕಾರಿಯಾಗಿದೆ. ಇದನ್ನು ಪ್ರತಿದಿನದ ವ್ಯಾಯಾಮದಲ್ಲಿ ಮಾಡುವುದನ್ನು ಮರೆಯಬಾರದು.

gymಕೇವಲ ಜಿಮ್ ನಲ್ಲಿ ಕಸರತ್ತು ಮಾಡುವ ಬದಲಾಗಿ ನಾನಾ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ಒಳಿತು. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ನೈಸರ್ಗಿಕವಾಗಿ ನಿಮ್ಮ ಹೊಟ್ಟೆಯ ಕೊಬ್ಬನ್ನು ಕರಗಿಸಬಹುದು. ಆಟಗಳನ್ನು ಆಡುವುದರಿಂದ ದೇಹವು ಸದೃಢವಾಗುತ್ತದೆ ಅಲ್ಲದೇ, ಕ್ರಿಯಾಶೀಲವಾಗಿರುತ್ತದೆ.

ಸಿಕ್ಸ್ ಪ್ಯಾಕ್ ಪಡೆಯವು ಸಲುವಾಗಿ ಒಳ್ಳೆಯ ಫ್ಯಾಟನ್ನು ಕರಗಿಸಿಕೊಳ್ಳಬೇಡಿ. ನಿರಂತರವಾಗಿ ವರ್ಕ್ ಔಟ್ ಮಾಡಬೇಕು ಅಲ್ಲದೇ ಆರೋಗ್ಯಕರವಾದ ಆಹಾರವನ್ನು ಸೇವಿಸುವುದು ಒಳಿತು.

-ಮೋಹನ್



Please follow and like us:
0
https://kannadadalli.com/wp-content/uploads/2018/07/s1-3.jpghttps://kannadadalli.com/wp-content/uploads/2018/07/s1-3-150x100.jpgKannadadalli Editorಆರೋಗ್ಯdayly work out,gym,six packಸಿಕ್ಸ್ ಪ್ಯಾಕ್ ದೇಹ ಯಾರು ಇಷ್ಟಪಡಲ್ಲ ಹೇಳಿ?, ಸಿಕ್ಸ್ ಪ್ಯಾಕ್ ಮಾಡಿಕೊಂಡು ಹುಡುಗಿಯರನ್ನು ಇಂಪ್ರೆಸ್ ಮಾಡಲು ಹುಡುಗರು ಎಷ್ಟೆಲ್ಲಾ ಕಸರತ್ತು ಮಾಡುತ್ತಾರೆ ಎಂಬುದು ನಿಮಗೂ ತಿಳಿದೇ ಇದೆ. ಅದೇ ಕಾರಣಕ್ಕಾಗಿ ಸಿಕ್ಸ್ ಪ್ಯಾಕ್ ಎನ್ನುವುದು ಈಗೊಂದು ಕ್ರೇಜ್ ಆಗಿಬಿಟ್ಟಿದೆ. ಶಾರೂಕ್ ಖಾನ್, ಸಲ್ಮಾನ್ ಖಾನ್, ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಅವರ ಸಿಕ್ಸ್ ಪ್ಯಾಕ್ ದೇಹವನ್ನು ನೋಡಿ ಯಾವ ಹುಡುಗಿಯರು ಫಿದಾ ಆಗಲ್ಲಾ ಹೇಳಿ. ಹಾಗಾಗಿಯೇ ಹುಡುಗರು ಜಿಮ್ ಗೆ...ಕನ್ನಡಿಗರ ವೆಬ್​ ಚಾನೆಲ್​