Wait loss

ಇದು ಫ್ಯಾಷನ್ ಜಗತ್ತು.. ದಿನಕ್ಕೊಂದರಂತೆ ಫ್ಯಾಷನ್ ಟ್ರೆಂಡ್ ಬದಲಾಗುತ್ತಿದೆ.. ಬಂದಂತಹ ಹೊಸ ಫ್ಯಾಷನ್ ಜೊತೆಗೆ ನಾವುಗಳು ಕೂಡ ಅಪ್ಡೇಟ್ ಆಗಬೇಕಿದೆ.. ಇಂತಹುದರಲ್ಲಿ ದಿನದಿಂದ ದಿನಕ್ಕೆ ತುಂಬಾ ದಪ್ಪ ಆದ್ರೆ ಹೇಗೆ ಹೇಳಿ.. ಹೀಗಾಗಿ ತೂಕ ಇಳಿಸಿಕೊಳ್ಳುವುದರ ಬಗ್ಗೆ ಸ್ವಲ್ಪ ಯೋಚನೆ ಮಾಡಬೇಕಿದೆ..

ತೂಕ ಇಳಿಸಿಕೊಳ್ಳುವುದು ಕೇವಲ ಫ್ಯಾಷನ್ ಅಲ್ಲ… ಅದು ಆರೋಗ್ಯದ ಕಾಳಜಿಯೂ ಕೂಡ ಹೌದು.. ಇಂದಿನ ಬದಲಾದ ಜೀವನಶೈಲಿಯೇ ಇದಕೆಲ್ಲಾ ಕಾರಣ ಎನ್ನಬಹುದು… ತುಂಬಾ ದಪ್ಪ ಆದ್ರೆ ಹೊರಗಡೆ ಹೋಗಲು ಸ್ವಲ್ಪ ಹಿಂಜರಿಯುವುದು ಕಾಮನ್… ಹಾಗಾಗಿ ವೇಟ್ ಬಗ್ಗೆ ಸ್ವಲ್ಪ ಗಮನಹರಿಸಿದರೆ ಒಳ್ಳೆಯದು.. ವೇಟ್ ಕಡಿಮೆ ಮಾಡಿಕೊಳ್ಳೊದು ಹೇಗೆ ಅಂತ ಯೋಚನೆ ಮಾಡ್ತಿದ್ದಿರಾ…

ಕಾಮನ್ ಆಗಿ ದಪ್ಪ ಆದ್ವಿ ಅಂದ ತಕ್ಷಣ ಮೊದಲು ಶುರು ಮಾಡೋದೆ ಡಯಟ್… ಇಷ್ಟ ಪಟ್ಟು ತಿನ್ನೋ ತಿಂಡಿಗೆಲ್ಲ ಬ್ರೇಕ್ ಹಾಕೋದು.. ಆಮೇಲೆ ಅಯ್ಯೋ ಇಷ್ಟ ಪಡೋ ತಿಂಡಿನ ತಿನ್ನಕ್ಕೆ ಆಗಲ್ವಲ್ಲ ಅಂತ ಯೋಚನೆ ಮಾಡೋದು..

ತೂಕ ಇಳಿಸಿಕೊಳ್ಳಲು ದೈಹಿಕ ಚಟುವಟಿಕೆ, ವ್ಯಾಯಾಮದಲ್ಲಿ ಹೆಚ್ಚಳ, ಆಹಾರದಲ್ಲಿ ನಿಯಂತ್ರಣ ಮೊದಲಾದವನ್ನು ನಿಮ್ಮ ಮೇಲೆ ಹೇರಿಕೊಳ್ಳುತ್ತಾ ಹೋದಂತೆ ಹಲವಾರು ಬದಲಾವಣೆಗಳು ಕಂಡುಬರುತ್ತದೆ ಅದು ನಿಮ್ಮ ಗಮನಕ್ಕೂ ಕೂಡ ಬರಬಹುದು.. ಆದರೆ ಮನೆಯಲ್ಲೆ ಸಿಗುವ ನೈಸರ್ಗಿಕ ವಸ್ತುಗಳಿಂದ ಹೇಗೆ ವೇಟ್ ಲಾಸ್ ಮಾಡಬಹುದು ಅನ್ನೋದನ್ನ ನೀವೆ ನೋಡಿ

ಬಾಳೆಹಣ್ಣು ಮತ್ತು ನೀರಿನ ಮಿಶ್ರಣbanana and water

ಒಂದು ಚೆನ್ನಾಗಿ ಮಾಗಿದ ಬಾಳೆಹಣ್ಣನ್ನು ಮಿಕ್ಸಿಯ ಬ್ಲೆಂಡರ್‍ನಲ್ಲಿ ಹಾಕಿ ಇದಕ್ಕೆ ಕೊಂಚ ಐಸ್ ತುಂಡುಗಳು ಮತ್ತು ಅರ್ಧ ಕಪ್ ನೀರು ಹಾಕಿ ನೊರೆ ನೊರೆಯಾಗಿ ಕಡೆಯಿರಿ.. ಬಾಳೆಹಣ್ಣಿನಲ್ಲಿರುವ ಪೊಟ್ಯಾಶಿಯಂ ಮತ್ತು ಕ್ಯಾಲ್ಸಿಯಂ ಲವಣಗಳು ನೀರಿನಲ್ಲಿ ಕರಗುತ್ತವೆ. ಇದರಲ್ಲಿ ಹಾಲಿನಲ್ಲಿರುವ ಎಲ್ಲಾ ಪೋಷಕಾಂಶಗಳು ಇದರಲ್ಲಿ ಸಿಗುತ್ತವೆ.. ಈ ಮಿಶ್ರಣವನ್ನು ತಣ್ಣಗಿರುವಾಗಲೇ ಕುಡಿಯಬೇಕು… ಇದರಿಂದ ನಿಮ್ಮ ದೇಹದ ತೂಕ ಕಡಿಮೆಯಾಗುತ್ತದೆ.

ಸೌತೆಕಾಯಿ ಮತ್ತು ಕೊತ್ತಂಬರಿ ಸೊಪ್ಪಿನ ಜ್ಯೂಸ್


ಒಂದು ಚಿಕ್ಕ ಸೌತೆಕಾಯಿ, ಒಂದು ಕಟ್ಟು ಕೊತ್ತಂಬರಿ ಸೊಪ್ಪು, ಸ್ವಲ್ಪ ತುರಿದ ಶುಂಠಿ, ಸ್ವಲ್ಪ ಲೋಳೆರಸ ಸೇರಿಸಿ ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ಗ್ರೈಂಡ್ ಮಾಡಿ ಮತ್ತೆ ಒಂದೆರಡು ಐಸ್ ತುಂಡುಗಳನ್ನು ಸೇರಿಸಿ ಮತ್ತಷ್ಟು ಗ್ರೈಂಡ್ ಮಾಡಿ… ನಿಮಗೆ ಸೂಕ್ತವೆನಿಸುವಷ್ಟು ನೀರು ಸೇರಿಸಿ ಮಿಶ್ರಣ ಮಾಡಿ.. ನಂತರ ಅದಕ್ಕೆ ನಿಂಬೆರಸವನ್ನು ಸೇರಿಸಿ ಕುಡಿಯಿರಿ.. ಈ ಪಾನೀಯವು ಅತ್ಯಂತ ಸಮರ್ಥವಾದ ವಿಷನಿವಾರಕವಾಗಿದ್ದು ಹೊಟ್ಟೆಯಲ್ಲಿರುವ ಕೊಬ್ಬನ್ನು ಕರಗಿಸಲು ಉತ್ತಮವಾಗಿದೆ. ಇದನ್ನು ದಿನಕ್ಕೆ ಒಂದು ಬಾರಿ ಕುಡಿದರೆ ಸಾಕು..

ಕಿವಿ, ಸೌತೆ, ಸ್ಟ್ರಾಬೆರಿ ಹಣ್ಣಿನ ಜ್ಯೂಸ್

ಒಂದು ಕಿವಿ ಹಣ್ಣಿನ ತಿರುಳು, ತುರಿದ ಒಂದು ಸೌತೆಕಾಯಿ ಮತ್ತು ಕೆಲವು ಸ್ಟ್ರಾಬೆರಿಗಳನ್ನು ಜಜ್ಜಿ ಒಂದು ಜಗ್ ನೀರಿನಲ್ಲಿ ಹಾಕಿ ಸುಮಾರು ಹತ್ತು ನಿಮಿಷ ಹಾಗೆ ಬಿಡಿ ಈ ಹೊತ್ತಿನಲ್ಲಿ ಹಣ್ಣುಗಳ ಪೋಷಕಾಂಶಗಳು ನೀರಿನಲ್ಲಿ ಕರಗಿರುತ್ತದೆ. ಈ ಜಗ್‍ನಿಂದ ನೀರನ್ನು ಬಗ್ಗಿಸಿಕೊಂಡು ಖಾಲಿಯಾದ ಜಗ್‍ನಲ್ಲಿ ಇನ್ನಷ್ಟು ನೀರನ್ನು ಹಾಕಿ..  ಈ ನೀರನ್ನು ದಿನವಿಡಿ ಕೊಂಚಕೊಂಚವಾಗಿ ಕುಡಿಯುತ್ತಾ ಬನ್ನಿ ಈ ನೀರಿನಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ವಿಟಮಿನ್ ಎ ಸಹಿತ ಹಲವು ಪೋಷಕಾಂಶಗಳು ದೇಹದ ರಾಸಾಯನಿಕ ಕ್ರಿಯೆಯನ್ನು ಹೆಚ್ಚಿಸುತ್ತದೆ.. ಜೊತೆಗೆ ತೂಕ ಕಳೆದುಕೊಳ್ಳುವ ವ್ಯಾಯಾಮಕ್ಕೆ ಅಗತ್ಯವಾಗಿರುವ ಹೆಚ್ಚಿನ ಶಕ್ತಿ ನೀಡುತ್ತದೆ. ಅತ್ಯುತ್ತಮ ಗಿಡಮೂಲಿಕೆಗಳನ್ನು ಬಳಸಿ ತೂಕ ಇಳಿಸಿಕೊಳ್ಳಲು ಸಹಾಯಕಾರಿಯಾಗುತ್ತದೆ.

ನಿಂಬೆರಸ ಮತ್ತು ಅರಿಶಿನ ಟೀ..

lemmon an termaric juice

ಒಂದು ಕಪ್ ನೀರಿನಲ್ಲಿ ಅರ್ಧ ಟೀ ಚಮಚ ಅರಿಶಿನ ಕೊಂಚ ಟೀಪುಡಿ ಚಿಟಿಕೆಯಷ್ಟು ಚಕ್ಕೆಯ ಪುಡಿ ಸೇರಿಸಿ ಚನ್ನಾಗಿ ಕುದಿಸಿ ಸುಮಾರು ಎರಡು ನಿಮಿಷ ಕುದಿಸಿದ ಬಳಿಕ ಉರಿ ಆರಿಸಿ ತಣ್ಣಗೆ ಆಗಲು ಬಿಡಿ.. ಸ್ವಲ್ಪ ತಣ್ಣಗಾದ ಬಳಿಕ ಅರ್ಧಹೋಳು ನಿಂಬೆರಸವನ್ನು ಬೆರೆಸಿ ತಕ್ಷಣ ಕುಡಿಯಿರಿ.. ಈ ರೀತಿಯ ಟೀ ತೂಕವನ್ನು ಇಳಿಸಲು ನೆರವಾಗುತ್ತದೆ ಹಾಗೂ ಅರಿಶಿನದ ಬ್ಯಾಕ್ಟಿರೀಯಾ ನಿವಾರಕ ಗುಣ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಈ ಪಾನಿಯಗಳನ್ನು ತೆಗೆದು ಕೊಂಡು ಸಣ್ಣಗಾಗಬೇಕೆಂದರೆ ಅದು ಸಾಧ್ಯವಿಲ್ಲ ಇದರೊಟ್ಟಿಗೆ ನೀವು ವ್ಯಾಯಾಮವನ್ನು ಮಾಡಬೇಕು ಜೊತೆಗೆ ಕೆಲ ಜಂಕ್​ ಫುಟ್​ಗಳನ್ನು ವರ್ಜಿಸ ಬೇಕಾಗುತ್ತದೆ. ಹಾಗಾದರೆ ಮಾತ್ರ ನೀವುತೆಳ್ಳಗಾಗಲು ಸಾಧ್ಯವಾಗುತ್ತದೆ.

ಮಂಜುಳ
Written By: – ಮಂಜುಳ
Please follow and like us:
0
https://kannadadalli.com/wp-content/uploads/2017/11/wait-loss.jpghttps://kannadadalli.com/wp-content/uploads/2017/11/wait-loss-150x100.jpgKannadadalli Editorಆರೋಗ್ಯhealth tips,home remedy,juice for become slim,want slim try this tips,want to slim,ಆರೋಗ್ಯಕ್ಕೆ ಕೆಲವು ಟಿಪ್ಸ್​,ಜ್ಯೂಸ್​,ಜ್ಯೂಸ್​ ಕುಡಿಯುವುದರಿಂದ ಆಗಬುದು ಸಣ್ಣ,ಪಾನಿಯಾ,ಮನೆ ಮದ್ದು,ಸಣ್ಣಗಾಗಬೇಕೆ ಈ ಜ್ಯೂಸ್​ಗಳನ್ನ ಕುಡಿಯಿರಿಇದು ಫ್ಯಾಷನ್ ಜಗತ್ತು.. ದಿನಕ್ಕೊಂದರಂತೆ ಫ್ಯಾಷನ್ ಟ್ರೆಂಡ್ ಬದಲಾಗುತ್ತಿದೆ.. ಬಂದಂತಹ ಹೊಸ ಫ್ಯಾಷನ್ ಜೊತೆಗೆ ನಾವುಗಳು ಕೂಡ ಅಪ್ಡೇಟ್ ಆಗಬೇಕಿದೆ.. ಇಂತಹುದರಲ್ಲಿ ದಿನದಿಂದ ದಿನಕ್ಕೆ ತುಂಬಾ ದಪ್ಪ ಆದ್ರೆ ಹೇಗೆ ಹೇಳಿ.. ಹೀಗಾಗಿ ತೂಕ ಇಳಿಸಿಕೊಳ್ಳುವುದರ ಬಗ್ಗೆ ಸ್ವಲ್ಪ ಯೋಚನೆ ಮಾಡಬೇಕಿದೆ.. ತೂಕ ಇಳಿಸಿಕೊಳ್ಳುವುದು ಕೇವಲ ಫ್ಯಾಷನ್ ಅಲ್ಲ... ಅದು ಆರೋಗ್ಯದ ಕಾಳಜಿಯೂ ಕೂಡ ಹೌದು.. ಇಂದಿನ ಬದಲಾದ ಜೀವನಶೈಲಿಯೇ ಇದಕೆಲ್ಲಾ ಕಾರಣ ಎನ್ನಬಹುದು... ತುಂಬಾ ದಪ್ಪ ಆದ್ರೆ ಹೊರಗಡೆ...ಕನ್ನಡಿಗರ ವೆಬ್​ ಚಾನೆಲ್​