ದೇವೇಗೌಡರ ಪ್ಲಾನ್​ಗೆ ಸುಸ್ತಾದ ಚಾಮರಾಜಪೇಟೆ ಉಸ್ತಾದ್​ !!! ಗೌಡ್ರು ಅಖಾಡಕ್ಕೆ ಇಳಿಸಿಯೇ ಬಿಟ್ರು ಫೈಲ್ವಾನನ್ನ !!

ಈಗಾಗಲೇ ಮತದಾನದ ದಿನಾಂಕ ನಿಗಧಿಯಾಗಿದ್ದು, ಮತದಾನಕ್ಕೆ ಸಕಲ ಸಿದ್ದತೆಗಳನ್ನು ನಡೆಸುತ್ತಿದ್ದಾರೆ. ಇದೇ ಸಮಯದಲ್ಲಿ ನೀತಿ ಸಂಹಿತೆಯು ಕೂಡ ಜಾರಿಯಾಗಿದೆ. ನೀತಿ ಸಂಹಿತೆಯು ಜಾರಿಯಲ್ಲಿದ್ದರೂ ಕೂಡ ಅದರ ಅರಿವೆ ಇಲ್ಲದಂತೆ ರಾಜಕೀಯ ಮುಖಂಡರು ಪ್ರಚಾರಕ್ಕೆ ಇಳಿದಿರುವುದು ನಿಜಕ್ಕೂ ವಿಪರ್ಯಾಸ.

ರಾಜಕೀಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಹೆಚ್ಚಾಂದತೆಲ್ಲಾ ಟಿಕೇಟ್ ಆಕ್ಷಾಂಕಿಗಳ ಲೆಕ್ಕಾಚಾರವು ಸಹ ಉಲ್ಟಾ ಹೊಡೆದಿದೆ. ರಾಜಕೀಯದಲ್ಲಿ ಇದೆಲ್ಲಾ ಕಾಮನ್ ಅಂದುಕೊಂಡರೂ ನೋಡುವ ಮತದಾರರಿಗೆ ಇದು ರಾಜಕೀಯದ ದೊಂಬರಾಟವೋ ಅಥವಾ ಗಿಮಿಕ್ ಅನಿಸದೆ ಇರದು. ಇದು ರಾಜಕೀಯದ ತಂತ್ರವೋ ಅಥವಾ ಒಳಸಂಚೋ ಎಂಬುದು ಮತದಾರರಿಗೂ ಸಹ ತಿಳಿಯುವುದಿಲ್ಲ.

althaf jdsಇನ್ನೂ ಇದೇ ನಿಟ್ಟಿನಲ್ಲಿ ನೋಡುವುದಾದರೆ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಬದಲಾವಣೆ ಆಗಿದೆ. ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ನನ್ನನ್ನು ಅಲುಗಾಡಿಸುವವರು ಯಾರು ಇಲ್ಲ ಎಂದು ಬೀಗುತ್ತಿದ್ದ ಜಮೀರ್ ಅಹಮದ್ ಇದೀಗ ತಾನು ಬೆಳೆದ ಜೆ.ಡಿ.ಎಸ್ ಪಕ್ಷವನ್ನು ತೊರೆದು ಕೈ ಪಕ್ಷವನ್ನು ಸೇರಿದ್ದಾರೆ. ಅಷ್ಟೆ ಅಲ್ಲದೆ ಜೆ ಡಿ ಎಸ್ ಪಕ್ಷದ ಬಗ್ಗೆ ಹಲವಾರು ರೀತಿಯ ಟೀಕೆಗಳನ್ನು ಮಾಡುತ್ತಲೇ ಬಂದಿದ್ದಾರೆ. ಇದನ್ನೆಲ್ಲವನ್ನೂ ಮೌನದಿಂದಲೇ ಆಲಿಸುತ್ತ ಸುಮ್ಮನಿದ್ದ ದೇವೆಗೌಡರು ಸಖತ್ ಆಗಿಯೇ ಜಮೀರ್ ಅಹಮದ್ ಅವರಿಗೆ ಚಮಕ್ ಕೊಟ್ಟಿದ್ದಾರೆ.

ಕಾಂಗ್ರೆಸ್ನಲ್ಲಿದ್ದ ಅಲ್ತಾಫ್ ಖಾನ್ ಇನ್ನೇನೂ ಕಾಂಗ್ರೇಸ್ ಟಿಕೇಟ್ ಸಿಗುವುದು ಖಚಿತ ಎನ್ನುವಷ್ಟರಲ್ಲಿ, ಜಮೀರ್ ಅಹಮದ್ ಜೆ.ಡಿ.ಎಸ್ ತೊರೆದು ಕಾಂಗ್ರೇಸ್ ಪಕ್ಷವನ್ನು ಸೇರಿಬಿಟ್ಟರು.  ಈಗಾಗಲೇ ಅಲ್ತಾಫ್ ಗೆ ಇದ್ದ ಸೀಟಿನ ಮೇಲೆ ಜಮೀರ್ ಅಹಮದ್ ಕುಳಿತಂತಾಯಿತು. ಇನ್ನು ಜೆ.ಡಿ.ಎಸ್ ಕಡೆ ನೋಡುವುದಾದರೆ ಸ್ಟ್ರಾಂಗ್ ಕ್ಯಾಂಡಿಡೇಟ್ ಅಗತ್ಯ ಇತ್ತು ಅನ್ನೋದು ಗೊತ್ತಾಗುತ್ತೆ.  ಜಮೀರ್ ಕಾಂಗ್ರೇಸ್ ನಿಂದ ಸ್ಪರ್ಧಿಸುತ್ತಿರುವಾಗ ಅವರ ವಿರುದ್ಧ ನಿಲ್ಲಲು ಸೂಕ್ತ ವ್ಯಕ್ತಿ ಅಲ್ತಾಫ್ ಖಾನ್ ಎಂಬುದು ದೇವೆಗೌಡರಿಗೆ ತಿಳಿಯಿತು.

ಚಾಮರಾಜಪೇಟೆಯಲ್ಲಿ ಜೆ.ಡಿ.ಎಸ್ ನಿಂದ ಸ್ಪರ್ಧಿಸುತ್ತಿರುವ ಅಲ್ತಾಫ್ ಖಾನ್ ಅವರ ಹವಾ ಸಿಕ್ಕಾಪಟ್ಟೆ ಜೋರಾಗಿದೆ. ಎಲ್ಲಾ ವರ್ಗದ ಜನರನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಿರುವ ಇವರು ಜನಸಾಮಾನ್ಯರಲ್ಲಿ ಸಾಮಾನ್ಯರಾಗಿ ಜನಶಕ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾಂಗ್ರೇಸ್ ತೊರೆದ ಅಲ್ತಾಫ್ ಖಾನ್ ಜೆ.ಡಿ.ಎಸ್ ಗೆ ಲಾಭದಾಯಕವಾಗಿ ಪರಿಣಮಿಸುತ್ತಾರ ಎಂಬುದನ್ನು ಕಾದು ನೋಡಬೇಕಾಗಿದೆ.althaf jds

ಇಂದೂ ಅಲ್ತಾಫ್ ಖಾನ್ ಅವರು ತಮ್ಮ ಬೃಹತ್ ಬೆಂಬಲಿಗರೊಂದಿಗೆ ಜೆ.ಪಿ ಭವನದಲ್ಲಿ ಜೆ.ಡಿ.ಎಸ್ ಪಕ್ಷವನ್ನು ಸೇರಲಿದ್ದಾರೆ. ಯಾವ ಪಕ್ಷದಿಂದ ಯಾವ ಪಕ್ಷಕ್ಕೂ ಜಿಗಿದರೂ ಕೂಡ ಚುನಾವಣೆ ಎಂಬ ಅಗ್ನಿ ಪರೀಕ್ಷೆಯನ್ನು ಎದುರಿಸಲೇ ಬೇಕು. ಈ ಅಗ್ನಿ ಪರೀಕ್ಷೆಯಲ್ಲಿ ಜಯಭೇರಿ ಯಾರದು ಎಂಬುದನ್ನು ಇನ್ನೂ ಸ್ವಲ್ಪ ದಿನ ಕಾದು ನೋಡಲೇ ಬೇಕು.

ರಾಜಕೀಯದಲ್ಲಿ ಎಷ್ಟೆ ಆಮಿಷ ಹೊಡ್ಡಿದ್ದರೂ ಕೂಡ ಜನ ನಿರ್ಧಾರ ಮಾಡುವುದು ಒಬ್ಬ ಒಳ್ಳೆಯ ಜನನಾಯಕನನ್ನೆ ಹೊರತು ಮತ್ಯಾರನ್ನೂ ಅಲ್ಲ. ಆಮಿಷಗಳನ್ನು ಹೊಡ್ಡಿ ಮತ ಹಾಕಿಸಿಕೊಂಡು ರಾಜಕೀಯ ಎಂಬ ಚದುರಂಗದ ಆಟಕ್ಕೆ ಎಷ್ಟೋ ಮುಖಂಡರು ಬಂದ್ರೂ ಕೂಡ ಅವರಲ್ಲಿ ಉಳಿಯೋ ದಾಳಗಳು ಮಾತ್ರ ಬಲಿಷ್ಟವಾದವು. ಅದಕ್ಕೆ ಸಾಕ್ಷಿ ವಿಕಾಸಪರ್ವದಲ್ಲಿ ಸೇರಿದ್ದ ಜನ ಸಾಗರ.

 

Loading…

Please follow and like us:
0
https://kannadadalli.com/wp-content/uploads/2018/04/image.jpghttps://kannadadalli.com/wp-content/uploads/2018/04/image-150x100.jpgManjulaರಾಜಕೀಯಸುದ್ದಿCongress,devegowda,election,JDS,politicalದೇವೇಗೌಡರ ಪ್ಲಾನ್​ಗೆ ಸುಸ್ತಾದ ಚಾಮರಾಜಪೇಟೆ ಉಸ್ತಾದ್​ !!! ಗೌಡ್ರು ಅಖಾಡಕ್ಕೆ ಇಳಿಸಿಯೇ ಬಿಟ್ರು ಫೈಲ್ವಾನನ್ನ !! ಈಗಾಗಲೇ ಮತದಾನದ ದಿನಾಂಕ ನಿಗಧಿಯಾಗಿದ್ದು, ಮತದಾನಕ್ಕೆ ಸಕಲ ಸಿದ್ದತೆಗಳನ್ನು ನಡೆಸುತ್ತಿದ್ದಾರೆ. ಇದೇ ಸಮಯದಲ್ಲಿ ನೀತಿ ಸಂಹಿತೆಯು ಕೂಡ ಜಾರಿಯಾಗಿದೆ. ನೀತಿ ಸಂಹಿತೆಯು ಜಾರಿಯಲ್ಲಿದ್ದರೂ ಕೂಡ ಅದರ ಅರಿವೆ ಇಲ್ಲದಂತೆ ರಾಜಕೀಯ ಮುಖಂಡರು ಪ್ರಚಾರಕ್ಕೆ ಇಳಿದಿರುವುದು ನಿಜಕ್ಕೂ ವಿಪರ್ಯಾಸ. ರಾಜಕೀಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಹೆಚ್ಚಾಂದತೆಲ್ಲಾ ಟಿಕೇಟ್ ಆಕ್ಷಾಂಕಿಗಳ ಲೆಕ್ಕಾಚಾರವು ಸಹ ಉಲ್ಟಾ ಹೊಡೆದಿದೆ. ರಾಜಕೀಯದಲ್ಲಿ...ಕನ್ನಡಿಗರ ವೆಬ್​ ಚಾನೆಲ್​