ನಾವು ದಿನಬೆಳಗದರೇ ಸಾಕು ಕೆಲವೊಂದು ವಸ್ತುಗಳನ್ನ ಬಳಸುತ್ತಿರುತ್ತೇವೆ ಅದರಲ್ಲಿ ಈ ಎಟಿಎಂ ಕೂಡ ಒಂದು. ವಹಿವಾಟುಗಳನ್ನ ಸುಲಭಗೊಳಿಸಿದ ಈ ಆಟೋಮೆಟೆಡ್ ಟೆಲ್ಲರ್ ಮೆಷಿನ್ ಮಾನವ ದೈನಂದಿನ ಜೀವನವನ್ನ ಮತ್ತಷ್ಟು ಸರಳಗೊಳಿಸಿದೆ. ಕೈಯಲ್ಲಿ ದುಡ್ಡು ಹಿಡಿದುಕೊಂಡು ಹೋಗುವ ತಾಪತ್ರಾಯಕ್ಕೆ ಮುಕ್ತಿ ಹಾಡಿದೆ.

ಆದರೆ ನಾವು ಬಳಸುತ್ತಿರುವ ಎಟಿಎಂ ಪಿನ್ ನಂಬರ್ ಕೇವಲ 4 ಅಂಕೆಗಳಲ್ಲೇ ಇರುತ್ತದೆ. ಆ ಪಿನ್ ನಂಬರ್ ಯಾಕೆ 4 ಅಂಕೆಗಳಲ್ಲಿ ಇರುತ್ತೆ ಅಂತ ನೀವು ಯಾವತ್ತಾದರೂ ಯೋಚಿಸಿದ್ದೀರಾ? ನಮ್ಮ ಇಮೇಲ್, ಇಲ್ಲಾ ಸಾಮಾಜಿಕ ತಾಣಗಳಿಗಾದರೆ ಸಾಧಾರಣವಾಗಿ 6 ಅಥವಾ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಗಳನ್ನು ಪಾಸ್‌ವರ್ಡ್ ಆಗಿ ಉಪಯೋಗಿಸಿಕೊಳ್ಳುತ್ತೇವೆ. ಯಾಕಂದರೆ ಸೆಕ್ಯುರಿಟಿ ಕಾರಣದಿಂದ ಈ ಪಾಸ್‍ವರ್ಡ್ಸ್, ಪಿನ್ ನಂಬರ್‌ಗಳನ್ನು ನಮ್ಮ ಭದ್ರತೆಗಾಗಿ ಬಳಸುತ್ತೇವೆ.

ಇನ್ನು1967ರಿಂದ ಬಳಕೆಯಲ್ಲಿರುವ ಎಟಿಎಂಗಳನ್ನು ಸ್ಕಾಟ್‍ಲೆಂಡ್ ಮೂಲದ ಜಾನ್ ಆಡ್ರಿಯನ್ ಶೆಪರ್ಡ್ ಬಾರ್ ಎನ್ನುವವರು ಕಂಡುಹಿಡಿದರು. ಈಗ ಪ್ರಪಂಚದಾದ್ಯಂತ ಎಟಿಎಂ ಕೇಂದ್ರಗಳಿವೆ. ಆದರೆ ಅವರು ಕಂಡುಹಿಡಿದ ಎಟಿಎಂಗಳಿಗಿಂತ ಸ್ವಲ್ಪ ಅಡ್ವಾನ್ಸ್ಡ್ ಮೆಷಿನ್ಸ್ ಈಗ ಬಳಕೆಯಲ್ಲಿವೆ. ಜಾನ್ ಆಡ್ರಿಯನ್ ಕಂಡುಹಿಡಿದ ಈ ಮೆಷಿನ್‌ನಲ್ಲಿನ ಹಣವನ್ನು ಇತರರಿಗೆ ಗೊತ್ತಾಗದಂತೆ ಇರಲು, ಭದ್ರತೆಗಾಗಿ ಪಿನ್ ನಂಬರ್ ಇಟ್ಟಿದ್ದನಂತೆ.

ATM2

ಮೊದಲು 6 ಅಂಕೆಗಳ ಪಿನ್ ನಂಬರ್ ಫಿಕ್ಸ್ ಮಾಡಿದನಂತೆ. ಆದರೆ ಅಷ್ಟು ಅಂಕೆಗಳನ್ನು ಜ್ಞಾಪಕ ಇಟ್ಟುಕೊಳ್ಳುವುದು ಕಷ್ಟ ಎಂದು, ಬಹಳಷ್ಟು ಮಂದಿ ಅಷ್ಟು ಉದ್ದದ ಸಂಖ್ಯೆ ಜ್ಞಾಪಕ ಇಟ್ಟುಕೊಳ್ಳುವುದಿಲ್ಲ ಎಂದು ಆತನ ಹೆಂಡತಿ ವಾದಿಸಿದಳಂತೆ.

ಆ ಬಳಿಕ ನಗುತ್ತಾ 4 ಅಂಕೆಗಳ ಪಿನ್ ನಂಬರ್ ಆದರೆ ಬೆಟರ್ ಎಂದು ಸೂಚಿಸಿದರಂತೆ, ಆಗ ಅವರು 6 ಅಂಕೆಗಳಿಗೆ ಬದಲಾಗಿ 4 ಅಂಕೆಗಳಿಗೆ ಬದಲಾಯಿಸಿದನಂತೆ. ಆಂಡ್ರಿಯನ್ ಹೆಂಡತಿ ತುಂಬಾ ಖುಷಿಪಟ್ಟಳಂತೆ. ಬಹಳಷ್ಟು ಬ್ಯಾಂಕ್‍ಗಳು 4 ಅಂಕೆಗಳ ಪಿನ್ ನಂಬರ್ ಕೊಡುತ್ತಿವೆ, ಇನ್ನೂ ಕೆಲವು ಬ್ಯಾಂಕ್‌ಗಳು ಈಗಲೂ 6 ಅಂಕೆಗಳ ಪಿನ್‍ ನಂಬರ್ ಕೊಡುತ್ತಿವೆ.

Please follow and like us:
0
https://kannadadalli.com/wp-content/uploads/2018/05/linkatmandbanks.jpghttps://kannadadalli.com/wp-content/uploads/2018/05/linkatmandbanks-150x100.jpgKannadadalli Editorಮಾಹಿತಿatm,do you know about atm pin,why atm pin is 4 digitsನಾವು ದಿನಬೆಳಗದರೇ ಸಾಕು ಕೆಲವೊಂದು ವಸ್ತುಗಳನ್ನ ಬಳಸುತ್ತಿರುತ್ತೇವೆ ಅದರಲ್ಲಿ ಈ ಎಟಿಎಂ ಕೂಡ ಒಂದು. ವಹಿವಾಟುಗಳನ್ನ ಸುಲಭಗೊಳಿಸಿದ ಈ ಆಟೋಮೆಟೆಡ್ ಟೆಲ್ಲರ್ ಮೆಷಿನ್ ಮಾನವ ದೈನಂದಿನ ಜೀವನವನ್ನ ಮತ್ತಷ್ಟು ಸರಳಗೊಳಿಸಿದೆ. ಕೈಯಲ್ಲಿ ದುಡ್ಡು ಹಿಡಿದುಕೊಂಡು ಹೋಗುವ ತಾಪತ್ರಾಯಕ್ಕೆ ಮುಕ್ತಿ ಹಾಡಿದೆ. ಆದರೆ ನಾವು ಬಳಸುತ್ತಿರುವ ಎಟಿಎಂ ಪಿನ್ ನಂಬರ್ ಕೇವಲ 4 ಅಂಕೆಗಳಲ್ಲೇ ಇರುತ್ತದೆ. ಆ ಪಿನ್ ನಂಬರ್ ಯಾಕೆ 4 ಅಂಕೆಗಳಲ್ಲಿ ಇರುತ್ತೆ ಅಂತ ನೀವು ಯಾವತ್ತಾದರೂ ಯೋಚಿಸಿದ್ದೀರಾ?...ಕನ್ನಡಿಗರ ವೆಬ್​ ಚಾನೆಲ್​