ಪ್ರಕೃತಿ ಎಂಬ ಮಡಿಲಲ್ಲಿ ಏನೆಲ್ಲಾ ವಿಸ್ಮಯಗಳು.. ಎಷ್ಟೆಲ್ಲಾ ಆಶ್ಚರ್ಯಗಳು… ಯಾವುದೆ ರೀತಿಯಾಗಿ ನೋಡುವುದಾದರೂ ಪ್ರಕೃತಿ ನಮಗೆ ಏನೆಲ್ಲಾ ನೀಡಿದೆ ಅನ್ನುವುದನ್ನ ನೋಡುವುದಾದರೆ ಗಾಳಿ, ನೀರು, ಬೆಳಕು, ಹೀಗೆ ಎಲ್ಲವನ್ನ ನೀಡಿದೆ. ಆದ್ರೆ ಇದನೆಲ್ಲಾ ನಾವು ಎಷ್ಟರ ಮಟ್ಟಿಗೆ ಉಪಯೋಗಿಸಿಕೊಳ್ಳುತ್ತಿದ್ದೇವೆ.. ಅನ್ನೊದೇ ಒಂದು ದೊಡ್ಡ ಪ್ರಶ್ನೆಯಾಗಿದೆ… ಆದ್ರೆ ಮನುಷ್ಯನಾದವನು ಅವನೆಲ್ಲಾ ಹಾಳು ಮಾಡುತ್ತಾ ಬರ್ತಿದ್ದಾನೆ.ನಾವೆಲ್ಲ ಸಾಮಾನ್ಯವಾಗಿ ಯಾವ್ ರೀತಿಯ ಗಿಡಗಳನ್ನ ನೋಡಿರ್ತಿವಿ ಹೇಳಿ…ನಾರ್ಮಲ್ ಆಗಿ ಇರುವ ಗಿಡಗಳೆಲ್ಲಾ ನಾವ್ ನೋಡಿರ್ತೀವಿ. ಆದ್ರೆ ನಿಮಗೆ ಕೆಲವೊಂದು ಗಿಡಗಳನ್ನ ತೋರಿಸ್ತೀವಿ.. ಆ ಗಿಡ ನೋಡುದ್ರೆ ಸ್ವಲ್ಪ ಮಟ್ಟಿಗೆ ತಲೆಕೆಡಿಸಿಕೊಳ್ಳೋದು ಅಂತು ಸುಳ್ಳಲ್ಲ..

ಗೊಂಬೆಯ ಕಣ್ಣನ್ನ ಹೋಲುತ್ತೆ ಈ ಹೂ…

ಇಲ್ಲಿ ಒಂದು ಗಿಡ ಇದೆ…ಇದನ್ನ ನೋಡುತ್ತಿದ್ದರೆ ನಿಮಗೆ ಗೊಂಬೆಯ ಕಣ್ಣು ನೆನಪಾಗದೆ ಇರದು.. ಯಾಕಂದ್ರೆ ಈ ಗಿಡದ ಹೂಗಳನ್ನ ನೋಡಿದರೆ ನಿಮಗೆ ಹಾಗೆ ಅನಿಸುತ್ತದೆ. ಇದು ಕೂಡ ಒಂದು ಗಿಡ ಮೂಲಿಕೆಯಾಗಿದ್ದ ಬಹುವಾರ್ಷಿಕ ಸಸ್ಯವಾಗಿದ್ದು 50 ಸೆ.ಮೀ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ಬೆಳೆಯಬಹುದಷ್ಟೆ.. ಈ ಬಿಳಿ ಹೂಗಳು ಸುಮಾರು 10 ಸೆ.ಮಿ ಉದ್ದವಿರುತ್ತದೆ. ಇದನ್ನ ಸಾಮಾನ್ಯವಾಗಿ ಗೊಂಬೆ ಕಣ್ಣು ಎಂದು ಕರೆಯುತ್ತಾರೆ. ಈ ಗಿಡದಲ್ಲಿರುವ ಹೂಗಳು ವೃತ್ತಾಕಾರದಲ್ಲಿದ್ದು ಸುತ್ತಲು ಬಿಳಿ ಬಣ್ಣವಿದ್ದು ಮಧ್ಯಭಾಗದಲ್ಲಿ ಕಪ್ಪು ಬಣ್ಣದಲ್ಲಿದೆ. ನೋಡಲು ಕಣ್ಣುಗಳ ಆಕಾರದಲ್ಲಿದ್ದು ನಿಜಕ್ಕೂ ಅದ್ಬುತ ಎನಿಸುತ್ತದೆ.

ಮಕ್ಕಳ ತುಟಿಯಷ್ಟೆ ಮುದ್ದಾಗಿದೆ ಈ ಹೂ

ಇಲ್ಲಿ ಮತ್ತೊಂದು ಗಿಡವಿದೆ. ಈ ಗಿಡವನ್ನ ನೋಡಿದರೆ ನಿಮಗೆ ನಗು ಬರಬಹುದು.. ಯಾಕಂದ್ರೆ ಈ ಗಿಡದಲ್ಲಿರುವ ಹೂವನ್ನ ನೋಡಿದರೆ ನಿಮಗೆ ಯಾವುದೋ ಮಗುವಿನ ತುಟಿ ನೋಡಿದ ಹಾಗೆ ಅನಿಸುತ್ತದೆ. ಯಾಕಂದ್ರೆ ಈ ಹೂ ಕೂಡ ಮಗುವಿನ ತುಟಿಯ ರೀತಿ ಕೆಂಪಾಗಿ ಇದೆ. ಕೆಂಪು ಕೆಂಪಾಗಿ ಹೂ ಬಿಡುವ ಈ ಗಿಡದ ಹೆಸರು ಕಿಸ್ಸೆಬಲ್ ಪ್ಲಾಂಟ್. ಈ ಗಿಡದ ಹೂವನ್ನ ನೋಡಿದರೆ ನಿಜಕ್ಕೂ ಆಶ್ಚರ್ಯದ ಜೊತೆಗೆ ಅದ್ಭುತ ಎನಿಸದೆ ಇರದು..

ಈ ಹೂವನ್ನು ನೋಡಿದರೆ ಹಲ್ಲಿನ ಶಿಲೀಂದ್ರ ನೋಡಿದಂತಾಗುತ್ತದೆ..

ಇಲ್ಲಿ ಇನ್ನೊಂದು ಗಿಡ ಇದೆ ನೋಡಿ… ಇದರ ಹೆಸರು ಬ್ಲೀಡಿಂಗ್ ಟೂತ್ ಪಂಗ್ಸ್ ಅಂತ. ಇದನ್ನ ನೋಡಿದರೆ ರಕ್ತದ ಕಲೆಗಳನ್ನ ನೋಡಿದ ಹಾಗೆಯೆ ಅನಿಸುತ್ತದೆ. ಅಷ್ಟೆ ಭಯ ಎನಿಸುತ್ತದೆ. ಇವು ಹಲ್ಲಿನ ಶೀಲಿಂದ್ರದ ರೀತಿ ಇರುತ್ತವೆ. ಹಲ್ಲಿನ ವಸಡುಗಳನ್ನ ಒಡೆದರೆ ಹೇಗೆ ರಕ್ತ ಬರುತ್ತದೋ ಹಾಗೆ ಕಾಣುತ್ತದೆ. ನೋಡೋದಕ್ಕೆ ಸ್ವಲ್ಪ ಕಿರಿ ಕಿರಿ ಅನಿಸಿದರೂ ಕೂಡ ಇದೊಂದು ಗಿಡ ಅನ್ನೋದನ್ನ ನೀವು ನಂಬಲೇಬೇಕು.

ಸ್ನ್ಯಾಪ್ ಡ್ರ್ಯಾಗನ್ ಸೀಡ್ ಪಾಡ್ ಎಂಬ ವಿಚಿತ್ರ ಗಿಡ

ಸ್ನ್ಯಾಪ್ ಡ್ರ್ಯಾಗನ್ ಸೀಡ್ ಪಾಡ್ ಈ ಗಿಡದ ಹೆಸರೆ ಒಂಥರಾ ವಿಚಿತ್ರವಾಗಿದೆ. ಇದನ್ನ ನೋಡುತ್ತಿದ್ದರೆ ಮನುಷ್ಯನ ತಲೆಬುರುಡೆಯನ್ನೆ ನೋಡಿದ ಹಾಗೆ ಅನಿಸುತ್ತದೆ. ಒಬ್ಬ ಮನುಷ್ಯ ಸತ್ತಮೇಲೆ ಆತನ ದೇಹವನ್ನ ಮಣ್ಣಿಗೆ ಹಾಕಿದ ಮೇಲೆ ಹೇಗೆ ಮೂಳೆಗಳು ಮಾತ್ರ ಉಳಿದು ತಲೆ ಬುರುಡೆ ಉಳಿಯುತ್ತದೆಯೋ ಆ ರೀತಿಯಲ್ಲಿ ಈ ಗಿಡ ಇರುತ್ತದೆ.ನೋಡಲು ಎರಡು ಕಣ್ಣುಗಳು ಇರೋ ರೀತಿನೆ ಇವೆ. ಜೊತೆಗೆ ಮೂಗು ಬಾಯಿ ಎಲ್ಲವೂ ಕೂಡ ಇದೆ. ಒಟ್ಟಾರೆ ಒಬ್ಬ ಮನುಷ್ಯನ ತಲೆಬುರುಡೆಯ ರೀತಿಯೇ ಇದೆ. ಇದರಿಂದ ನೋಡುಗರಿಗೆ ಸ್ವಲ್ಪ ಭಯ ಹುಟ್ಟಿಸುವ ರೀತಿಯಲ್ಲಿವೆ.
ಇದೆಲ್ಲಾವನ್ನು ನೋಡುತ್ತಿದ್ದರೆ ಪ್ರಕೃತಿಯಲ್ಲಿ ಎಷ್ಟೆಲ್ಲಾ ವಿಸ್ಮಯಗಳು ಇವೆ ಎಂಬುವುದು ತಿಳಿಯುತ್ತದೆ. ಈ ರೀತಿಯ ವಿಸ್ಮಯಗಳು ನಿಜಕ್ಕೂ ಮನುಷ್ಯನನ್ನು ನಿಬ್ಬೆರಾಗಾಗಿಸುವುದರಲ್ಲಿ ಯಾವುದೆ ಅನುಮಾನವಿಲ್ಲ. ಮನುಷ್ಯನ ಅಂಗಗಳನ್ನ ಹೋಲುವ ಈ ಗಿಡ ಮತ್ತು ಹೂಗಳು ಪ್ರಕೃತಿಯ ವಿಸ್ಮಯವೆ ಸರಿ

Please follow and like us:
0
https://kannadadalli.com/wp-content/uploads/2017/11/hookers-lips-81.jpghttps://kannadadalli.com/wp-content/uploads/2017/11/hookers-lips-81-150x100.jpgKannadadalli Editorವಿಸ್ಮಯಪ್ರಕೃತಿ ಎಂಬ ಮಡಿಲಲ್ಲಿ ಏನೆಲ್ಲಾ ವಿಸ್ಮಯಗಳು.. ಎಷ್ಟೆಲ್ಲಾ ಆಶ್ಚರ್ಯಗಳು... ಯಾವುದೆ ರೀತಿಯಾಗಿ ನೋಡುವುದಾದರೂ ಪ್ರಕೃತಿ ನಮಗೆ ಏನೆಲ್ಲಾ ನೀಡಿದೆ ಅನ್ನುವುದನ್ನ ನೋಡುವುದಾದರೆ ಗಾಳಿ, ನೀರು, ಬೆಳಕು, ಹೀಗೆ ಎಲ್ಲವನ್ನ ನೀಡಿದೆ. ಆದ್ರೆ ಇದನೆಲ್ಲಾ ನಾವು ಎಷ್ಟರ ಮಟ್ಟಿಗೆ ಉಪಯೋಗಿಸಿಕೊಳ್ಳುತ್ತಿದ್ದೇವೆ.. ಅನ್ನೊದೇ ಒಂದು ದೊಡ್ಡ ಪ್ರಶ್ನೆಯಾಗಿದೆ... ಆದ್ರೆ ಮನುಷ್ಯನಾದವನು ಅವನೆಲ್ಲಾ ಹಾಳು ಮಾಡುತ್ತಾ ಬರ್ತಿದ್ದಾನೆ.ನಾವೆಲ್ಲ ಸಾಮಾನ್ಯವಾಗಿ ಯಾವ್ ರೀತಿಯ ಗಿಡಗಳನ್ನ ನೋಡಿರ್ತಿವಿ ಹೇಳಿ...ನಾರ್ಮಲ್ ಆಗಿ ಇರುವ ಗಿಡಗಳೆಲ್ಲಾ ನಾವ್ ನೋಡಿರ್ತೀವಿ....ಕನ್ನಡಿಗರ ವೆಬ್​ ಚಾನೆಲ್​