weat bread

ಸಾಮಾನ್ಯವಾಗಿ ಮನೆಯಿಂದ ಹೊರಗೆ ಹೋದಾಗ, ನಿಮ್ಮ ಮಕ್ಕಳಿಗೆ ಬೇಕರಿ ತಿಂಡಿಗಳನ್ನು ಕೊಡಿಸುತ್ತೀರಾ?, ಅದರಲ್ಲೂ ಆಲುಗೆಡ್ಡೆ ಚಿಪ್ಸ್ನಂತಹ ಲೇಸ್ ಸೇರಿದಂತೆ ನಾನಾ ತರಹದ ತಿಂಡಿಗಳನ್ನು ಕೊಡಿಸುತ್ತೀರಾ?. ಹಾಗಾದರೆ ಒಮ್ಮೆ ಇಲ್ಲಿ ನೋಡಿ.

ರಾಯಚೂರಿನಲ್ಲಿ ತಂದೆಯೊಬ್ಬರು ಮಗಳು ಹಟ ಮಾಡಿದಳೆಂದು ಚಿಪ್ಸ್ ಪ್ಯಾಕೇಟ್ ಅನ್ನು ಕೊಡಿಸಿದರು. ಆದರೆ ಆ ಚಿಪ್ಸ್ ಪ್ಯಾಕೇಟ್ ನಲ್ಲಿ ಹುಳ ಕಂಡು ಬಂದ ಘಟನೆ ಜರುಗಿದೆ.

ರಾಯಚೂರು ಜಿಲ್ಲೆಯ ಯದ್ಲಾಪುರ ಗ್ರಾಮದಲ್ಲಿ ತಂದೆಯೊಬ್ಬರು ಮಗಳಿಗೆ ಕೊಡಿಸಿದ ಯುರೋ ಕಂಪನಿಯ ಚಿಪ್ಸ್ ಪ್ಯಾಕೇಟ್ ನಲ್ಲಿ ಹುಳ ಕಂಡು ಹೆದರಿದ್ದಾರೆ. ಆದರೆ ಈ ಚಿಪ್ಸ್ ಪ್ಯಾಕ್ ಎಕ್ಸ್ ಪೆರಿ ಡೇಟ್ ಆಗಿರಲಿಲ್ಲ. ಅದಕ್ಕೂ ಮೊದಲೇ ಹುಳ ಕಂಡು ನಿಜಕ್ಕೂ ಗಾಬರಿ ಹುಟ್ಟಿಸಿದೆ.

ಹಾಗಾಗಿ ಪೋಷಕರು ಮಗುವನ್ನು ವೈದ್ಯರ ಬಳೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಮಗು ಯಾವುದೇ ತೊಂದರೆಯಿಂದ ಪಾರಾಗಿದ್ದಾಳೆ. ನೀವು ಕೂಡ ಮಕ್ಕಳಿಗೆ ಇಂತಹ ಚಿಪ್ಸ್ ಕೊಡಿಸುವ ಮುನ್ನಾ ಒಮ್ಮೆ ಯೋಚನೆ ಮಾಡಿ. ಕುರುಕಲು ತಿಂಡಿ ಕಂಡೊಡನೆ ಮಕ್ಕಳು ಹಠ ಮಾಡುವುದು ಸಹಜ. ಆದರೆ ಅದಕ್ಕೂ ಮುನ್ನಾ ಎಚ್ಚರಿಕೆ ವಹಿಸುವುದು ಅತ್ಯಗತ್ಯ.

Please follow and like us:
0
Sowmya KBಸುದ್ದಿpotato chips,raichur,wormಸಾಮಾನ್ಯವಾಗಿ ಮನೆಯಿಂದ ಹೊರಗೆ ಹೋದಾಗ, ನಿಮ್ಮ ಮಕ್ಕಳಿಗೆ ಬೇಕರಿ ತಿಂಡಿಗಳನ್ನು ಕೊಡಿಸುತ್ತೀರಾ?, ಅದರಲ್ಲೂ ಆಲುಗೆಡ್ಡೆ ಚಿಪ್ಸ್ನಂತಹ ಲೇಸ್ ಸೇರಿದಂತೆ ನಾನಾ ತರಹದ ತಿಂಡಿಗಳನ್ನು ಕೊಡಿಸುತ್ತೀರಾ?. ಹಾಗಾದರೆ ಒಮ್ಮೆ ಇಲ್ಲಿ ನೋಡಿ. ರಾಯಚೂರಿನಲ್ಲಿ ತಂದೆಯೊಬ್ಬರು ಮಗಳು ಹಟ ಮಾಡಿದಳೆಂದು ಚಿಪ್ಸ್ ಪ್ಯಾಕೇಟ್ ಅನ್ನು ಕೊಡಿಸಿದರು. ಆದರೆ ಆ ಚಿಪ್ಸ್ ಪ್ಯಾಕೇಟ್ ನಲ್ಲಿ ಹುಳ ಕಂಡು ಬಂದ ಘಟನೆ ಜರುಗಿದೆ. ರಾಯಚೂರು ಜಿಲ್ಲೆಯ ಯದ್ಲಾಪುರ ಗ್ರಾಮದಲ್ಲಿ ತಂದೆಯೊಬ್ಬರು ಮಗಳಿಗೆ ಕೊಡಿಸಿದ ಯುರೋ ಕಂಪನಿಯ ಚಿಪ್ಸ್...ಕನ್ನಡಿಗರ ವೆಬ್​ ಚಾನೆಲ್​